Virat Kohli: ಮೈದಾನದಲ್ಲೇ ರೊಚ್ಚಿಗೆದ್ದ ವಿರಾಟ್ ಕೊಹ್ಲಿ; ಅಷ್ಟಕ್ಕು ಆಗಿದ್ದೇನು?; ಇಲ್ಲಿದೆ ವಿಡಿಯೋ!

ಕೊಹ್ಲಿ ಚೆಂಡನ್ನು ವಿಕೆಟ್​ಗೆ ಬಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಾರ್ದಿಕ್ ಸತತವಾಗಿ ಬೌಂಡರಿ ನೀಡಿದಾಗ ಉಪ ನಾಯಕ ರೋಹಿತ್ ಶರ್ಮಾ ಕೂಡ ಪಾಂಡ್ಯಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ಕೂಡ ನಡೆಯಿತು.

Vinay Bhat | news18-kannada
Updated:September 19, 2019, 12:10 PM IST
Virat Kohli: ಮೈದಾನದಲ್ಲೇ ರೊಚ್ಚಿಗೆದ್ದ ವಿರಾಟ್ ಕೊಹ್ಲಿ; ಅಷ್ಟಕ್ಕು ಆಗಿದ್ದೇನು?; ಇಲ್ಲಿದೆ ವಿಡಿಯೋ!
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
  • Share this:
ಬೆಂಗಳೂರು (ಸೆ. 19): ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಈ ಕ್ರೀಡಾಂಗಣದಲ್ಲಿ ಆಡಿದ ಎಲ್ಲಾ ಟಿ-20 ಪಂದ್ಯಗಳಲ್ಲಿ ಒಂದರಲ್ಲು ಸೋಲುಣ್ಣದೆ ತನ್ನ ದಾಖಲೆ ಮುಂದುವರೆಸಿದೆ.

ಈ ರೋಚಕ ಕದನದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿ ಬೊಬ್ಬಿರಿದಿದ್ದರು. ಬ್ಯಾಟಿಂಗ್, ಫೀಲ್ಡಿಂಗ್​ನಲ್ಲಿ ಮಿಂಚಿದ್ದಲ್ಲದೆ ಮೈದಾನದಲ್ಲೇ ಕೆಂಡಾಮಂಡಲರಾಗಿದ್ದರು. ಮೈದಾನದಲ್ಲೇ ಕೊಹ್ಲಿ ರೊಚ್ಚಿಗೆದ್ದ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ಹರಿದಾಡುತ್ತಿದೆ.

ಅದು ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ನಡೆಸುತ್ತಿದ್ದ 10ನೇ ಓವರ್. ಬೌಲಿಂಗ್ ಮಾಡಿದ್ದು ಹಾರ್ದಿಕ್ ಪಾಂಡ್ಯ. ಆಫ್ರಿಕಾದ ಇಬ್ಬರು ಪ್ರಮುಖ ಬ್ಯಾಟ್ಸ್​ಮನ್​ಗಳಾದ ತೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಹೆಚ್ಚುವರಿ ರನ್ ಪಡೆದರು. ಇದನ್ನು ನೋಡಿದ ಕೊಹ್ಲಿ ಮೈದಾನದಲ್ಲೇ ಕೋಪಗೊಂಡಿದ್ದಾರೆ.

Virat Kohli: ಟಿ-20 ಕ್ರಿಕೆಟ್​ನಲ್ಲಿ ಕೊಹ್ಲಿಯೇ ಕಿಂಗ್; ಹಿಟ್​​ಮ್ಯಾನ್​ಗೆ ಶಾಕ್ ನೀಡಿದ ವಿರಾಟ್

ಪಾಂಡ್ಯ ಎಸೆದ ಬೌಲ್ ಅನ್ನು ತೆಂಬಾ ಡೀಪ್​ ಪಾಯಿಂಟ್​ನತ್ತ ಬಾರಿಸಿದರು. ಸಿಂಗಲ್ ರನ್​ಗೆಂದು ನಿಧಾನವಾಗಿ ಓಡಿದರು. ಈ ಮಧ್ಯೆ ಫೀಲ್ಡ್​ ಮಾಡುತ್ತಿದ್ದ ಶ್ರೇಯಸ್​ ಐಯ್ಯರ್​​ನ ಯಡವಟ್ಟಿನಿಂದ ತಕ್ಷಣವೆ ಬವುಮಾ ಹಾಗೂ ಡಿ-ಕಾಕ್​ ಎರಡನೇ ರನ್​ ಓಡಿದ್ದಾರೆ. ಅಷ್ಟೇ ಅಲ್ಲದೆ, ಶ್ರೇಯಸ್​ ಎಸೆದ ಬೌಲ್​ ಓವರ್​ ಥ್ರೋ ಆಗಿದೆ. ಇದರಿಂದ ಒಂದು ರನ್ ಬರುವ ಜಾಗದಲ್ಲಿ ಬ್ಯಾಟ್ಸ್​ಮನ್​ಗಳು ಮೂರು ರನ್ ಕಲೆಹಾಕಿ ಬಿಟ್ಟರು.

ಇದರಿಂದ ರೊಚ್ಚಿಗೆದ್ದ ಕೊಹ್ಲಿ ಮೈದಾನದಲ್ಲೆ ಹರಿಹಾಯ್ದರು. ಚೆಂಡನ್ನು ವಿಕೆಟ್​ಗೆ ಬಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಾರ್ದಿಕ್ ಸತತವಾಗಿ ಬೌಂಡರಿ ನೀಡಿದಾಗ ಉಪ ನಾಯಕ ರೋಹಿತ್ ಶರ್ಮಾ ಕೂಡ ಪಾಂಡ್ಯಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ಕೂಡ ನಡೆಯಿತು.

 


ನಿನ್ನೆ ನಡೆದ ಎರಡನೇ ಟಿ-20 ಕದನದಲ್ಲಿ ಮೊದಲಿಗೆ ಆಫ್ರಿಕಾ 20 ಓವರ್​ಗೆ 5 ವಿಕೆಟ್ ಕಳೆದುಕೊಂಡು 149 ರನ್ ಪೇರಿಸಿತ್ತು. 150 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ವಿರಾಟ್ ಕೊಹ್ಲಿಯ ಅಜೇಯ 72 ರನ್​​ಗಳ ನೆರವಿನಿಂದ 19 ಓವರ್​ನಲ್ಲೇ 3 ವಿಕೆಟ್ ಕಳೆದುಕೊಂಡು 151 ರನ್ ಬಾರಿಸುವ ಮೂಲಕ 7 ವಿಕೆಟ್​ಗಳ ಜಯ ಸಾಧಿಸಿತ್ತು.

ಅಂತಿಮ ಮೂರನೇ ಟಿ-20 ಪಂದ್ಯ ಸೆ. 22 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

First published: September 19, 2019, 12:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading