ಟೆಸ್ಟ್​ ನಿಂದ ಪಂತ್ ಔಟ್?; ಏಕದಿನ, ಟಿ-20 ಯಿಂದ ಹೊರಬಿದ್ದರೆ ಕೀಪರ್ ಸ್ಥಾನಕ್ಕೆ ಈ ಆಟಗಾರ ಫಿಕ್ಸ್​!

ಪಂತ್ ಸೀಮಿತ ಓವರ್ ಕ್ರಿಕೆಟ್​ನಿಂದಲೂ ಹೊರ ಬಿದ್ದರೆ ಇವರ ಜಾಗ ತುಂಬಲು ಈ ಮೂವರು ಆಟಗಾರರು ಕಾದುಕುಳಿತಿದ್ದಾರೆ.

Vinay Bhat | news18-kannada
Updated:October 10, 2019, 3:42 PM IST
  • Share this:
ಬೆಂಗಳೂರು (ಅ. 10): ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಿರುವ ಎರಡನೇ ಟೆಸ್ಟ್​ ಪಂದ್ಯದಿಂದಲೂ ರಿಷಭ್ ಪಂತ್ ಹೊರಗುಳಿದಿದ್ದಾರೆ. ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆಯಾದರು ಹನುಮಾ ವಿಹಾರಿ ಕೈಬಿಟ್ಟು ಬೌಲರ್ ಉಮೇಶ್ ಯಾದವ್​ಗೆ ಅವಕಾಶ ನೀಡಲಾಗಿದೆ.

ಅವಕಾಶ ಕೊಟ್ಟಷ್ಟು ದುರಪಯೋಗ ಪಡಿಸಿಕೊಂಡ ಪಂತ್ ಮೇಲೆ ಟೀಂ ಇಂಡಿಯಾ ನಂಬಿಕೆ ಕಳೆದುಕೊಂಡಂತಿದೆ. ಇತ್ತ ವೃದ್ದಿಮಾನ್ ಸಾಹ ಮಿಂಚಿದ್ದೆ ಆದಲ್ಲಿ ಪಂತ್​ಗೆ ಟೆಸ್ಟ್​ ತಂಡದಲ್ಲಿ ಮುಂದೆ ಸ್ಥಾನ ಸಿಗುವುದು ಅನುಮಾನ.

ಈ ನಡುವೆ ಏಕದಿನ, ಟಿ-20 ಪಂದ್ಯಗಳಲ್ಲೂ ಪಂತ್​ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಭಾರತ ಎ, ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಇತರೆ ವಿಕೆಟ್ ಕೀಪರ್, ಬ್ಯಾಟ್ಸ್​ಮನ್​ ಅನ್ನು ಟೀಂ ಇಂಡಿಯಾಕ್ಕೆ ಸೇರಿಸಿ ಎಂಬ ಕೂಗು ಕೇಳಿಬರುತ್ತಲೇ ಇದೆ. ಹಾಗಾದ್ರೆ ಪಂತ್ ಸೀಮಿತ ಓವರ್ ಕ್ರಿಕೆಟ್​ನಿಂದಲೂ ಹೊರ ಬಿದ್ದರೆ ಇವರ ಜಾಗ ತುಂಬಲು ಈ ಮೂವರು ಆಟಗಾರರು ಕಾದುಕುಳಿತಿದ್ದಾರೆ.

ಪಾಕಿಸ್ತಾನ-ಲಂಕಾ ಪಂದ್ಯ ನಡೆಯುತ್ತಿರುವಾಗ ವಿರಾಟ್ ಕೊಹ್ಲಿ ಅಭಿಮಾನಿ ಮಾಡಿದ್ದೇನು ಗೊತ್ತಾ..?

ಇಶಾನ್ ಕಿಶನ್:

India vs South Africa: 3 wicketkeepers who are breathing down rishabh pants neck
ಇಶಾನ್ ಕಿಶನ್


21 ವರ್ಷದ ಇಶಾನ್ ಕಿಶನ್ ಸದ್ಯ ಭಾರತ ಎ ತಂಡದ ಪ್ರಮುಖ ವಿಕೆಟ್ ಕೀಪರ್, ಬ್ಯಾಟ್ಸ್​ಮನ್​​. ಸಾಕಷ್ಟು ಪ್ರತಿಭೆಯುಳ್ಳ ಕಿಶನ್ ಅಂತರಾಷ್ಟ್ರೀಯ ಪಂದ್ಯವನ್ನಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ 70 ಟಿ-20 ಪಂದ್ಯಗಳನ್ನಾಡಿರುವ ಕಿಶನ್ ಎರಡು ಶತಕ ಕೂಡ ಸಿಡಿಸಿದ್ದಾರೆ. ಅಲ್ಲದೆ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಖಾಯಂ ಆಟಗಾರರಾಗಿದ್ದಾರೆ.ಸಂಜು ಸ್ಯಾಮ್ಸನ್:

India vs South Africa: 3 wicketkeepers who are breathing down rishabh pants neck
ಸಂಜು ಸ್ಯಾಮ್ಸನ್


India vs South Africa 2nd Test LIVE: ರೋಹಿತ್ ಔಟ್; ಮಯಾಂಕ್-ಪೂಜಾರ ಜೊತೆಯಾಟ

2019ರ ವಿಶ್ವಕಪ್​ನಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಬೇಕು ಎಂದು ಕ್ರಿಕೆಟ್ ದಿಗ್ಗಜರೇ ಹೇಳಿದ್ದರು. ಆದರೆ, ಆಯ್ಕೆ ಸಮಿತಿ ಇವರನ್ನು ಕಡೆಗಣಿಸಿತ್ತು. ಭಾರತ ಪರ ಒಂದು ಅಂತರಾಷ್ಟ್ರೀಯ ಟಿ-20 ಪಂದ್ಯವನ್ನು ಇವರು ಆಡಿದ್ದಾರೆ. ಉತ್ತಮ ಫಾರ್ಮ್​ನಲ್ಲಿರುವ ಸ್ಯಾಮ್ಸನ್ ಕಳೆದ ಐಪಿಎಲ್​ನಲ್ಲಿ 342 ರನ್ ಕಲೆಹಾಕಿ ಟೀಂ ಇಂಡಿಯಾದ ಸ್ಟಾರ್ ಆಟಗಾರನಾಗುವ ಭರವಸೆ ಮೂಡಿಸಿದ್ದಾರೆ.

ಅಂಕುಶ್ ಬೈನ್ಸ್:

3 Wicketkeepers who are breathing down Rishabh Pant’s neck
ಅಂಕುಶ್ ಬೈನ್ಸ್


ಭಾರತ ಕ್ರಿಕೆಟ್ ತಂಡದಲ್ಲಿ ಅಂಕುಶ್ ಬೈನ್ಸ್​ ಹೆಸರು ಅಷ್ಟೊಂದು ಪರಿಚಿತವಿಲ್ಲ. ಆದರೆ, ಅಂಕುಶ್ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​. 2014ರ ಅಂಡರ್-19 ವಿಶ್ವಕಪ್​ನಲ್ಲಿ ಅನೇಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ 36 ಟಿ-20 ಪಂದ್ಯಗಳನ್ನು ಆಡಿದ್ದು 736 ರನ್ ಕಲೆಹಾಕಿದ್ದಾರೆ. ಎಸ್​ಎಂಎ ಟ್ರೋಫಿಯಲ್ಲಿ ಅಂಕಿಶ್ ಹಿಮಾಚಲ ಪ್ರದೇಶ ತಂಡದ ಪರ 6 ಪಂದ್ಯಗಳಲ್ಲಿ 198 ರನ್ ಬಾರಿಸಿದ್ದರು. ಇದರಲ್ಲಿ 3 ಅರ್ಧಶತಕ ಕೂಡ ಗಳಿಸಿದ್ದರು.

ಪಂತ್​ ಆದಷ್ಟು ಬೇಗ ಕಳಪೆ ಫಾರ್ಮ್​ನಿಂದ ಹೊರಬಂದಿಲ್ಲ ಎಂದಾದರೆ ಈ ಹೊಸ ಪ್ರತಿಭೆಗಳು ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ದಿನ ದೂರವಿಲ್ಲ ಎನ್ನಬಹುದು.
First published: October 10, 2019, 11:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading