ಬೆಂಗಳೂರಿನಲ್ಲೂ ನಡೆಯಲಿದೆ ಭಾರತ-ಆಫ್ರಿಕಾ ಟಿ-20 ಹೈವೋಲ್ಟೇಜ್ ಪಂದ್ಯ; ಟಿಕೆಟ್ ಬೇಕಾದರೆ ಹೀಗೆ ಮಾಡಿ

ಸೆ. 15 ರಂದು ಧರ್ಮಶಾಲದಲ್ಲಿ ನಡೆಯಲಿರುವ ಮೊದಲ ಟಿ-20 ಪಂದ್ಯಕ್ಕೆ ಆನ್​ಲೈನ್​ನಲ್ಲಿ ಟಿಕೆಟ್ ಮಾರಾಟ ಆರಂಭವಾಗಿದೆ. ಪೇಟಿಂ ಇನ್​ಸೈಡರ್​​​ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್​ ಮಾಡಬಹುದು.

Vinay Bhat | news18-kannada
Updated:September 6, 2019, 9:54 AM IST
ಬೆಂಗಳೂರಿನಲ್ಲೂ ನಡೆಯಲಿದೆ ಭಾರತ-ಆಫ್ರಿಕಾ ಟಿ-20 ಹೈವೋಲ್ಟೇಜ್ ಪಂದ್ಯ; ಟಿಕೆಟ್ ಬೇಕಾದರೆ ಹೀಗೆ ಮಾಡಿ
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ
Vinay Bhat | news18-kannada
Updated: September 6, 2019, 9:54 AM IST
ಬೆಂಗಳೂರು (ಸೆ. 06): ವೆಸ್ಟ್​ ಇಂಡೀಸ್ ಪ್ರವಾಸ ಮುಗಿಸಿರುವ ಟೀಂ ಇಂಡಿಯಾ ಆಟಗಾರರು ತವರಿಗೆ ಮರಳಿದ್ದಾರೆ. ಸದ್ಯ ಕುಟುಂಬದ ಜೊತೆ ಸಮಯ ಕಳೆಯುತ್ತಿರುವ ಭಾರತೀಯರು ಕೆಲ ದಿನಗಳಲ್ಲಿ ಮತ್ತೆ ಮೈದಾನದಲ್ಲಿ ಬೆರವರು ಹರಿಸಲಿದ್ದಾರೆ.

ಭಾರತ ತನ್ನ ಮುಂದಿನ ಕಾದಾಟವನ್ನು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಸಲಿದೆ. ಮೂರು ಟಿ-20, ಟೆಸ್ಟ್​ ಪಂದ್ಯಗಳನ್ನು ಕೊಹ್ಲಿ ಪಡೆ ಹರಿಣಗಳ ವಿರುದ್ಧ ಆಡಲಿದೆ.

ಮೊದಲ ಟಿ-20 ಪಂದ್ಯ ಸೆ. 15 ರಂದು ಧರ್ಮಶಾಲದಲ್ಲಿ ನಡೆಯಲಿದ್ದರೆ, 2ನೇ ಟಿ-20 ಸೆ. 18, ಮೊಹಾಲಿಯಲ್ಲಿ ಹಾಗೂ ಅಂತಿಮ ಪಂದ್ಯ ಸೆ. 22 ರಂದು ಬೆಂಗಳೂರಿನಲ್ಲಿ ಆಡಲಿದೆ.

India Vs South Africa 2019 T20I Cricket Match Tickets Booking Process and Price
ಭಾರತ vs ದಕ್ಷಿಣ ಆಫ್ರಿಕಾ


ಇನ್ನು ಮೊದಲ ಟೆಸ್ಟ್​​ ಅಕ್ಟೋಬರ್ 2 ರಿಂದ ವಿಶಾಖಪಟ್ಟಣಂ ನಲ್ಲಿ ಆರಂಭವಾಗಲಿದೆ. 2ನೇ ಟೆಸ್ಟ್​ ಅ. 10 ರಂದು ಪುಣೆಯಲ್ಲಿ ಹಾಗೂ ಮೂರನೇ ಟೆಸ್ಟ್​ ಅ. 19 ರಂದು ರಾಂಚಿಯಲ್ಲಿ ನಡೆಯಲಿದೆ.

ಹೊಸ ಟ್ರಾಫಿಕ್ ರೂಲ್ಸ್​; ದಂಡತೆತ್ತಿ ಬಡವನಾದ ವಿರಾಟ್ ಕೊಹ್ಲಿ..!

ಈಗಾಗಲೇ ಸೌತ್ ಆಫ್ರಿಕಾ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಟಿ-20 ತಂಡವನ್ನು ಕ್ವಿಂಟನ್ ಡಿಕಾಕ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಡೇವಿಡ್ ಮಿಲ್ಲರ್, ವಂಡರ್ ಡಸ್ಸೆನ್, ಕಗಿಸೋ ರಬಾಡ, ಫೆಹ್ಲುಕ್ವಾಯೊ ರಂತಹ ಘಟಾನುಘಟಿ ಆಟಗಾರರು ತಂಡದಲ್ಲಿದ್ದಾರೆ.
Loading...

ಇತ್ತ ಹರಿಣಗಳ ವಿರುದ್ಧದ ಟಿ-20 ಬೇಟೆಗೆ ಭಾರತ ತಂಡವನ್ನು ಪ್ರಕಟಿಸಿದ್ದು, ಯುವ ಆಟಗಾರರಿಗೆ ಪ್ರಾಮುಖ್ಯತೆ ನೀಡಲಾಗಿದೆ. ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಎಂ ಎಸ್ ಧೋನಿ ಟಿ-20 ಸರಣಿಯಿಂದ ಹೊರಗುಳಿದಿದ್ದಾರೆ.

ಸದ್ಯ ಸೆ. 15 ರಂದು ಧರ್ಮಶಾಲದಲ್ಲಿ ನಡೆಯಲಿರುವ ಮೊದಲ ಟಿ-20 ಪಂದ್ಯಕ್ಕೆ ಆನ್​ಲೈನ್​ನಲ್ಲಿ ಟಿಕೆಟ್ ಮಾರಾಟ ಆರಂಭವಾಗಿದೆ. 'ಪೇಟಿಂ ಇನ್​ಸೈಡರ್'​​​ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್​ ಮಾಡಬಹುದು.

ಭಾರತ – ದಕ್ಷಿಣ ಆಫ್ರಿಕಾ ಮೊದಲ ಟಿ-20 ಪಂದ್ಯದ ಟಿಕೆಟ್​ಗಾಗಿ ಇಲ್ಲಿ ಕ್ಲಿಕ್ ಮಾಡಿ

. ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಭಾರತ ತಂಡವಿರಾಟ್ ಕೊಹ್ಲಿ ( ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಕೃುಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ನವದೀಪ್ ಸೈನಿ, ಹಾರ್ದಿಕ್ ಪಾಂಡ್ಯ.

 First published:September 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...