ಬೆಂಗಳೂರು (ಅ. 05): ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 431 ರನ್ಗಳಿಗೆ ಆಲೌಟ್ ಮಾಡಿದ ಭಾರತ ತನ್ನ 2ನೇ ಇನ್ನಿಂಗ್ಸನ್ನು 4 ವಿಕೆಟ್ ನಷ್ಟಕ್ಕೆ 323 ರನ್ಗೆ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿಗೆ 395 ರನ್ ಗುರಿ ನೀಡಿದೆ. ನಾಲ್ಕನೇ ದಿನಾಂತ್ಯಕ್ಕೆ ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿ ಸೋಲಿನ ಸುಳಿಗೆ ಸಿಲುಕಿದೆ.
71 ರನ್ಗಳ ಮುನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಚೇತೆಶ್ವರ್ ಪೂಜಾರ(81) ಅಮೋಘ ಜೊತೆಯಾಟ ನೀಡಿದರು. ಈ ನಡುವೆ ಹಿಟ್ಮ್ಯಾನ್ 2ನೇ ಇನ್ನಿಂಗ್ಸ್ನಲ್ಲೂ ಆಕರ್ಷಕ ಶತಕ ಸಿಡಿಸಿ ಮಿಂಚಿದರು. 133 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ರೋಹಿತ್ ಸೆಂಚುರಿ ಬಾರಿಸಿದರು.
ಆದರೆ, ಸೆಂಚುರಿ ಬಳಿಕ ಸ್ಫೋಟಕ ಆಟದ ಮೊರೆಹೋದ ರೋಹಿತ್ 127 ರನ್ಗೆ ಔಟ್ ಆದರು. ಸದ್ಯ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಜೊತೆಯಾಗಿದ್ದಾರೆ. 400ರತ್ತ ಭಾರತದ ಮುನ್ನಡೆ ಸಾಗುತ್ತಿದೆ.
2ನೇ ಇನ್ನಿಂಗ್ಸ್ನ ಆರಂಭದಲ್ಲೇ ಆಘಾತ ಉಂಟಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಮಯಾಂಕ್ ಕೇವಲ 7 ರನ್ಗೆ ಔಟ್ ಆದರು.
ಬಳಿಕ ರೋಹಿತ್ ಶರ್ಮಾ ಜೊತೆಯಾದ ಚೇತೇಶ್ವರ್ ಪೂಜಾರ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಪೂಜಾರ ಎಚ್ಚರಿಕೆಯ ಆಟಕ್ಕೆ ಮುಂದಾದರೆ, ರೋಹಿತ್ ಬೌಂಡರಿಗಳತ್ತ ಹೆಚ್ಚು ಗಮನ ಹರಿಸಿದರು. ಬರೋಬ್ಬರಿ 169 ರನ್ಗಳ ಜೊತೆಯಾಟ ಇವರಿಬ್ಬರ ಖಾತೆಯಿಂದ ಮೂಡಿಬಂತು. ಆದರೆ, ಪೂಜಾರ 148 ಎಸೆತಗಳಲ್ಲಿ 13 ಬೌಂಡಿರಿ ಹಾಗೂ 2 ಸಿಕ್ಸರ್ ಬಾರಿಸಿ 81 ರನ್ಗೆ ಔಟ್ ಆದರು.
ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರು ಕ್ಷಿಪ್ರ ಗತಿಯಲ್ಲಿ ರನ್ ಗಳಿಸಿದ ಪರಿಣಾಮ ಭಾರತ ಕೇವಲ 67 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 323 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಇದಕ್ಕೂ ಮೊದಲು ನಿನ್ನೆ 3ನೇ ದಿನದಾಟದ ಅಂತ್ಯಕ್ಕೆ ಆಫ್ರಿಕಾ 8 ವಿಕೆಟ್ ಕಳೆದುಕೊಂಡು 385 ರನ್ ಕಲೆಹಾಕಿತ್ತು. 117 ರನ್ಗಳ ಹಿನ್ನಡೆಯಲ್ಲಿತ್ತು. ಮುಥುಸಾಮಿ(12) ಹಾಗೂ ಕೇಶವ್ ಮಹರಾಜ್(3) ಇಂದಿನ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ನಾಲ್ಕನೇ ದಿನವಾದ ಇಂದು ಬ್ಯಾಟಿಂಗ್ಗೆ ಇಳಿದ ಈ ಜೋಡಿ ಪೈಕಿ ಆರಂಭದಲ್ಲೇ ಅಶ್ವಿನ್ ಸ್ಪಿನ್ ಮೋಡಿಗೆ ಮಹರಾಜ್(9) ಪೆವಿಲಿಯನ್ ಸೇರಿಕೊಂಡರು. ಕೇವಲ 46 ರನ್ ಗಳಿಸುವಷ್ಟರಲ್ಲಿ ಎರಡೂ ವಿಕೆಟ್ ಕಳೆದುಕೊಂಡು ಸರ್ಪಪತನ ಕಂಡಿತು.
ಕಗಿಸೊ ರಬಾಡ 15 ರನ್ಗೆ ಔಟ್ ಆಗುವ ಮೂಲಕ ಆಫ್ರಿಕಾ 431 ರನ್ಗೆ ಆಲೌಟ್ ಆಯಿತು. ಮುಥುಸಾಮಿ ಅಜೇಯ 33 ರನ್ ಕಲೆಹಾಕಿದರು. ಭಾರತ 71 ರನ್ಗಳ ಮುನ್ನಡೆಯಲ್ಲಿದೆ. ಭಾರತ ಪರ ಆರ್ ಅಶ್ವಿನ್ 7 ವಿಕೆಟ್ ಕಿತ್ತಿದ್ದರೆ, ಜಡೇಜಾ 2 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಪಡೆದಿದ್ದಾರೆ.
ರೋಹಿತ್-ಧೋನಿ ದಾಖಲೆ ಹಿಂದಿಕ್ಕಿ ಭಾರತೀಯ ಕ್ರಿಕೆಟ್ನಲ್ಲಿ ಅಚ್ಚರಿಯ ಸಾಧನೆ ಮಾಡಿದ ಹರ್ಮನ್ಪ್ರೀತ್!
ನಿನ್ನೆ ಡೇನ್ ಎಲ್ಗರ್ ಹಾಗೂ ಕ್ವಿಂಟನ್ ಡಿಕಾಕ್ ಅದ್ಭುತ ಜೊತೆಯಾಟದ ನೆರವಿನಿಂದ ಆಫ್ರಿಕಾ 300ರ ಗಡಿ ದಾಟಲು ನೆರವಾಯಿತು. ಎಲ್ಗರ್ ಟೆಸ್ಟ್ ಕ್ರಿಕೆಟ್ನಲ್ಲಿ 13ನೇ ಶತಕ ಪೂರೈಸಿ 287 ಎಸೆತಗಳಲ್ಲಿ 18 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 160 ರನ್ ಕಲೆಹಾಕಿದರು. ಡಿಕಾಕ್ 163 ಎಸೆತಗಳಲ್ಲಿ 111 ರನ್ ಬಾರಿಸಿದರು.
ಇದಕ್ಕೂ ಮೊದಲು ಟೀಂ ಇಂಡಿಯಾ ಪರ ಮಯಾಂಕ್ ಅಗರ್ವಾಲ್ 215 ಹಾಗೂ ರೋಹಿತ್ ಶರ್ಮಾ 176 ರನ್ಗಳ ಅಮೋಘ ಆಟದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 502 ರನ್ ಬಾರಿಸಿ ಆಫ್ರಿಕನ್ನರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು.
Who is ready for DAY 4 😎🇮🇳 #TeamIndia #INDvSA @Paytm pic.twitter.com/E7GkT0wyqc
— BCCI (@BCCI) October 5, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ