ಬೆಂಗಳೂರು (ಅ. 02): ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ. ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ನ ಮೊದಲ ದಿನದಾಟದಲ್ಲಿ ಭಾರತ ಮೇಲುಗೈ ಸಾಧಿಸಿದೆ.
ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಮಯಾಂಕ್ ಅಗರ್ವಾಲ್ ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 202 ರನ್ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಓಪನರ್ಗಳಾದ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದರು. ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ ವಿಕೆಟ್ ಕಳೆದುಕೊಳ್ಳದಂತೆ ದೊಡ್ಡ ಇನ್ನಿಂಗ್ಸ್ ಕಟ್ಟಿಕೊಡುವ ಅಂದಾಜು ಹಾಕಿಕೊಂಡರು.
ಪಾಂಡೆ ಮಿಂಚಿನ ಶತಕ. ರಾಹುಲ್ ಅರ್ಧಶತಕ; ಛತ್ತೀಸ್ ಘಡ್ಗೆ ಸವಾಲಿನ ಟಾರ್ಗೆಟ್ ನೀಡಿದ ಕರ್ನಾಟಕ
ಅದರಂತೆ ಭೋಜನ ವಿರಾಮಕ್ಕೂ ಮುನ್ನ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಸುಮಾರು 9 ತಿಂಗಳ ಬಳಿಕ ಟೆಸ್ಟ್ಗೆ ಕಾಲಿಟ್ಟ ರೋಹಿತ್ ಅಭ್ಯಾಸ ಪಂದ್ಯದಲ್ಲಿ ತಾನು ಎದುರಿಸಿದ 2ನೇ ಎಸೆತದಲ್ಲೇ ಶೂನ್ಯಕ್ಕೆ ನಿರ್ಗಮಿಸಿದ್ದರು.
ಆದರೆ, ಮೊದಲ ಟೆಸ್ಟ್ನಲ್ಲಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ರೋಹಿತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 154 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ 4ನೇ ಸೆಂಚುರಿ ಬಾರಿಸಿದರು. ಇತ್ತ ಮಯಾಂಕ್ ಕೂಡ ರೋಹಿತ್ಗೆ ಉತ್ತಮ ಸಾತ್ ನೀಡಿದರು.
ಅಂತಿಮ ಸೆಶನ್ನ ಟೀ ವಿರಾಮದ ವೇಳೆಗೆ ವರುಣನ ಕಾಟ ಆರಂಭವಾಯಿತು. ಕೊಂಚಹೊತ್ತು ಕಾದರು ಮಳೆ ನಿಲ್ಲದ ಪರಿಣಾಮ ಮೊದಲ ದಿನದಾಟವನ್ನು ಅಂತ್ಯಗೊಳಿಸಲಾಯಿತು.
ಭಾರತ 59.1 ಓವರ್ಗೆ ವಿಕೆಟ್ ಕಳೆದುಕೊಳ್ಳದೆ 202 ರನ್ ಕಲೆಹಾಕಿದೆ. ಭಾರತ ಪರ ರೋಹಿತ್ ಶರ್ಮಾ 174 ಎಸೆತಗಳಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್ನೊಂದಿಗೆ 115 ರನ್ , ಮಯಾಂಕ್ ಅಗರ್ವಾಲ್ 183 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ನೊಂದಿಗೆ 84 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
— BCCI (@BCCI) October 2, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ