Harshith ASHarshith AS
|
news18 Updated:June 15, 2019, 11:12 PM IST
ಇಂಡಿಯಾ-ಪಾಕ್ ಪಂದ್ಯಕ್ಕೆ ಸರ್ಪ್ರೈಸ್ ನೀಡಿದ ಗೇಲ್
- News18
- Last Updated:
June 15, 2019, 11:12 PM IST
ಬೆಂಗಳೂರು (ಜೂ. 15): ಬದ್ಧವೈರಿಗಳು ಎಂದು ಹೇಳಲ್ಪಡುವ ದೇಶ ಎಂದರೆ ಅದು ಭಾರತ ಹಾಗೂ ಪಾಕಿಸ್ತಾನ. ಇದರಿಂದ ಕ್ರಿಕೆಟ್ ಕೂಡ ಹೊರತಾಗಿಲ್ಲ. ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯ ಎಂದರೆ ಅದು ಎರಡು ದೇಶಗಳ ನಡುವಣ ಯುದ್ದ ಎಂದೆ ಹೇಳಲಾಗುತ್ತದೆ. ಈ ಬಾರಿಯ ವಿಶ್ವಕಪ್ನಲ್ಲಿ ನಾಳೆ ಮತ್ತೆ ಭಾರತ-ಪಾಕಿಸ್ತಾನ ಮುಖಾಮುಖಿ ಆಗುತ್ತಿದ್ದು, ವಿಶ್ವವೇ ಈ ಪಂದ್ಯಕ್ಕಾಗಿ ತುದಿ ಗಾಲಿನಲ್ಲಿ ನಿಂತು ಕಾಯುತ್ತಿದೆ.
ಸಾಮಾಜಿಕ ಜಾಲತಾಣದಲ್ಲಂತೂ ಟೀಂ ಇಂಡಿಯಾದ ಅಭಿಮಾನದ ಕುರಿತು ಸಾಕಷ್ಟು ಪೋಸ್ಟ್ಗಳು ಹರಿದಾಡುತ್ತಿದೆ. ಹೀಗಿರುವಾಗ ವೆಸ್ಟ್ ಇಂಡೀಸ್ ತಂಡದ ಸ್ಟೋಟಕ ಆಟಗಾರ ಕ್ರಿಸ್ ಗೇಲ್ ವಿಶೇಷವಾಗಿ ಭಾರತ-ಪಾಕ್ ಕದನದ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದ್ದಾರೆ.
ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಭಾರತ ಹಾಗೂ ಪಾಕಿಸ್ತಾನ ನಡುವಿನ ಧ್ವಜದ ವರ್ಣಗಳನ್ನು ಹೊಂದಿರುವ ವಿಶೇಷ ಡ್ರೆಸ್ ಧರಿಸಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಐಸಿಸಿ ತನ್ನ ಅಧಿಕೃತ ವಿಶ್ವಕಪ್ ಟ್ವಿಟ್ಟರ್ ಖಾತೆಯಲ್ಲಿ ಗೇಲ್ರ ಈ ಫೋಟೋವನ್ನು ಹಂಚಿಕೊಂಡಿದೆ.
ಅಂತೆಯೇ, ಕ್ರಿಸ್ ಗೇಲ್ ಈ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ತಂಡಕ್ಕೆ ಪ್ರೀತಿ ಮತ್ತು ಗೌರವವನ್ನು ತೋರಿಸಿದ್ದಾರೆ. ಜೊತೆಗೆ ಸೆಪ್ಟಂಬರ್ 20 ರಂದು ತಮ್ಮ ಬರ್ತ್ ಡೆ ಡ್ರೆಸ್ ಇದಾಗಿತ್ತು ಎಂದು ಚಿತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಏಕದಿನ ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 7ನೇ ಬಾರಿಗೆ ಮುಖಾಮುಖಿಯಾಗುತ್ತಿದೆ. ಈ ಹಿಂದಿನ ಆರು ಪಂದ್ಯಗಳಲ್ಲಿ ಭಾರತವೇ ಗೆಲುವು ಸಾಧಿಸಿತ್ತು. ಇದೀಗ 2019ರ ವಿಶ್ವಕಪ್ನ ಇಂಡಿಯಾ- ಪಾಕಿಸ್ತಾನ ಮೊದಲ ಪಂದ್ಯ ನಾಳೆ ನಡೆಯಲಿದ್ದು, ಅಭಿಮಾನಿಗಳು ಗೆಲುವಿನ ಉತ್ತರಕ್ಕಾಗಿ ಕಾದು ಕುಳಿತಿದ್ದಾರೆ.
First published:
June 15, 2019, 8:48 PM IST