India vs Pakistan: ಕಿಂಗ್ ಕೊಹ್ಲಿಯಿಂದ ಸಚಿನ್​ರ ಮತ್ತೊಂದು ದಾಖಲೆ ಉಡೀಸ್

Virat Kohli: ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಕೊಹ್ಲಿ 11 ಸಾವಿರ ರನ್​ಗಳ ಗಡಿ ಮುಟ್ಟಿದ ದಾಖಲೆ ಮಾಡಿದ್ದಾರೆ. ಇಂದಿನ ಪಂದ್ಯಕ್ಕೂ ಮೊದಲು ಕೊಹ್ಲಿಗೆ ಈ ಸಾಧನೆ ಮಾಡಲು ಕೇವಲ 57ರನ್​ಗಳ ಅವಶ್ಯಕತೆಯಿತ್ತು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • News18
  • Last Updated :
  • Share this:
ಬೆಂಗಳೂರು (ಜೂ. 16): ಮ್ಯಾಂಚೆಸ್ಟರ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್​ನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಆದರೆ ಭಾರತ ಇನ್ನಿಂಗ್ಸ್​ನ ಕೊನೆಯ ಹಂತದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದೆ.

ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಈಗಾಗಲೇ ಹತ್ತಾರು ದಾಖಲೆಗಳ ಸರದಾರನಾಗಿರುವ ವಿರಾಟ್​ ಇದೀಗ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​​ರ ಇನ್ನೊಂದು ದಾಖಲೆ ನೆಲಸಮವಾಗಿದೆ.

ಸದ್ಯ ಏಕದಿನ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಕೊಹ್ಲಿ 11 ಸಾವಿರ ರನ್​ಗಳ ಗಡಿ ಮುಟ್ಟಿದ ದಾಖಲೆ ಮಾಡಿದ್ದಾರೆ. ಇಂದಿನ ಪಂದ್ಯಕ್ಕೂ ಮೊದಲು ಕೊಹ್ಲಿಗೆ ಈ ಸಾಧನೆ ಮಾಡಲು ಕೇವಲ 57ರನ್​ಗಳ ಅವಶ್ಯಕತೆಯಿತ್ತು.

ಅಂತೆಯೆ ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ದಾಖಲೆಯತ್ತ ಕೊಹ್ಲಿ ಮುನ್ನಡೆದರು. 56 ರನ್ ಗಳಿಸಿದ್ದಾಗ ಬೌಂಡರಿ ಬಾರಿಸಿದ ರನ್ ಮೆಶಿನ್ ವೇಗವಾಗಿ ಏಕದಿನ ಕ್ರಿಕೆಟ್​ನಲ್ಲಿ 11 ಸಾವಿರ ರನ್​​ ದಾಖಲಿಸಲಿದ್ದಾರೆ.

 Cricket World Cup 2019, India vs Pakistan: ಪ್ರಮುಖ ಹಂತದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ; ಭಾರತ 305/4 (46.4 ಓವರ್)

ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 11 ಸಾವಿರ ರನ್​ ದಾಖಲಿಸಿ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಸದ್ಯ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 276 ಇನ್ನಿಂಗ್ಸ್​​ಗಳಲ್ಲಿ ಸಚಿನ್​ ಈ ಸಾಧನೆ ಮಾಡಿದ್ದರು. ಆದರೆ ಕೊಹ್ಲಿ ಕೇವಲ 222 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಇಷ್ಟೇ ಅಲ್ಲದೆ ವೇಗವಾಗಿ 11 ಸಾವಿರ ರನ್​ ಗಳಿಸುವುದು ಒಂದು ಕಡೆಯಾದರೆ, ಕೊಹ್ಲಿ ಬಹು ವಿಶೇಷ ದಾಖಲೆಯನ್ನೂ ಸೃಷ್ಟಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 11 ಸಾವಿರ ರನ್​ಗಳನ್ನ 11 ವರ್ಷಗಳ ಒಳಗೆ ಮುಟ್ಟಿದ ವಿಶ್ವದ ಮೊದಲ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಕೊಹ್ಲಿ ಪಾತ್ರವಾಗಿದ್ದಾರೆ.

ಈಗಾಗಲೇ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 10 ಸಾವಿರ ರನ್​ ಸಿಡಿಸಿದ್ದ ದಾಖಲೆ ಹೊಂದಿರುವ ವಿರಾಟ್​, ಇದೀಗ ಮತ್ತೊಂದು ದಾಖಲೆ ಏರಿದ್ದಾರೆ.

ಸದ್ಯ ಪಾಕ್ ವಿರುದ್ಧ ಸಾಗುತ್ತಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಔಟ್ ಆದರೆ, ಇತ್ತ ನಾಯಕ ಕೊಹ್ಲಿ 51ನೇ ಅರ್ಧಶತಕ ಬಾರಿಸಿ ಬ್ಯಾಟಿಂಗ್ ಮುಂದುವರಿಸುತ್ತಿದ್ದರು. ಆದರೆ 46.4 ಓವರ್ ಆಗುವ ಹೊತ್ತಿಗೆ ಮಳೆ ಪ್ರಾರಂಭವಾಗಿದ್ದು ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಸದ್ಯ ಭಾರತ 46.4 ಓವರ್​ಗೆ 4 ವಿಕೆಟ್ ಕಳೆದುಕೊಂಡು 305 ರನ್ ಕಲೆಹಾಕಿದೆ. ಕೊಹ್ಲಿ 71 ಹಾಗೂ ವಿಜಯ್ ಶಂಕರ್3 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
First published: