HOME » NEWS » Sports » CRICKET INDIA VS PAKISTAN TWITTER CALLS OUT GAUTAM GAMBHIR FOR HYPOCRISY OVER INDIA PAKISTAN WORLD CUP MATCH

ವಿಶ್ವಕಪ್​ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಆಡಬಾರದು ಎಂದವರೆಲ್ಲಾ ನಿನ್ನೆಯ ಪಂದ್ಯದಲ್ಲಿ ಹಾಜರು

ಗೌತಮ್ ಗಂಭೀರ್, ಸೌರವ್ ಗಂಗೂಲಿ, ಹರ್ಭಜನ್ ಸಿಂಗ್ ಸೇರಿದಂತೆ ಕೆಲ ಕ್ರಿಕೆಟಿಗರು ವಿಶ್ವಕಪ್​ನಲ್ಲಿ ಮಾತ್ರವಲ್ಲದೆ ಭಾರತ-ಪಾಕಿಸ್ತಾನ ನಡುವೆ ಮುಂದೆ ಯಾವತ್ತೂ ಕ್ರಿಕೆಟ್ ಆಟ ನಡೆಯಬಾರದು ಎಂಬ ಹೇಳಿಕೆ ನೀಡಿದ್ದರು.

Vinay Bhat | news18
Updated:June 17, 2019, 6:30 PM IST
ವಿಶ್ವಕಪ್​ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಆಡಬಾರದು ಎಂದವರೆಲ್ಲಾ ನಿನ್ನೆಯ ಪಂದ್ಯದಲ್ಲಿ ಹಾಜರು
ಗೌತಮ್ ಗಂಭೀರ್
  • News18
  • Last Updated: June 17, 2019, 6:30 PM IST
  • Share this:
ಬೆಂಗಳೂರು (ಜೂ. 17): ವಿಶ್ವಕಪ್​ನಲ್ಲಿ ಫೈನಲ್ ಪಂದ್ಯದಂತ ಬಿಂಬಿತವಾಗಿದ್ದ ಬದ್ಧವೈರಿಗಳ ಕದನ ಭಾರತ-ಪಾಕಿಸ್ತಾನ ಪಂದ್ಯ ಮಳೆಯ ಮಧ್ಯೆಯೂ ಕೊನೆಗೊಂಡಿದೆ. ರೋಹಿತ್ ಶರ್ಮಾರ ಅಮೋಘ ಶತಕ, ವಿರಾಟ್ ಕೊಹ್ಲಿಯ ಅರ್ಧಶತಕ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ 89 ರನ್​ಗಳ ಭರ್ಜರಿ ಗೆಲುವುನೊಂದಿಗೆ ಭಾರತ ವಿಶ್ವಕಪ್​​ನಲ್ಲಿ ಪಾಕ್ ವಿರುದ್ಧ ತನ್ನ ಅಜೇಯ ಗೆಲುವಿನ ಓಟ ಮುಂದುವರೆಸಿದೆ.


ಈ ಮಧ್ಯೆ, ಈ ಹಿಂದೆ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಆಡಬಾರದು ಎಂದು ಹೇಳಿದ ಭಾರತದ ಮಾಜಿ ಆಟಗಾರರೆಲ್ಲಾ ನಿನ್ನೆಯ ಹೈವೋಲ್ಟೇಜ್ ಕದನದಲ್ಲಿ ಹಾಜರಿದ್ದರು. ಸದ್ಯ ಈ ಬಗ್ಗೆ ಕ್ರೀಡಾಭಿಮಾನಿಗಳು ಟ್ವೀಟ್ ಮಾಡಿ ಪ್ರಶ್ನಿಸುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ಫೆ. 14ರಂದು ಪುಲ್ವಾಮದಲ್ಲಿ ಪಾಕ್ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಭಾರತದ 40 ಸಿಆರ್​ಪಿಎಫ್ ಯೋಧರನ್ನು ಆತ್ಮಾಹುತಿ ದಾಳಿ ನಡೆಸಿ ಬಲಿ ತೆಗೆದು ಕೊಂಡಿತ್ತು. ಅದಾದ ನಂತರ ಸರಕಾರದಿಂದ ಮುಕ್ತ ಕಾರ್ಯಾಚರಣೆಯ ಸ್ವಾತಂತ್ರ್ಯ ಪಡೆದ ಭಾರತೀಯ ಸೈನಿಕರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಜೈಷ್ ಉಗ್ರರ ಸಂಹಾರ ಮಾಡಿದರು. 16 ಗಂಟೆಗಳ ಸುದೀರ್ಘ ಕಾಲ ನಡೆದ ಎನ್​ಕೌಂಟರ್​ನಲ್ಲಿ ಕೆಲ ಭಾರತೀಯ ಯೋಧರೂ ಬಲಿಯಾದರು.

ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಸಾನಿಯಾ ಜೊತೆ ಪಾಕ್ ಕ್ರಿಕೆಟಿಗರ ಹುಕ್ಕಾ ಡಿನ್ನರ್; ಅಭಿಮಾನಿಗಳು ಕೆಂಡಾಮಂಡಲ!

ಪುಲ್ವಾಮ ಉಗ್ರ ದಾಳಿ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಡಬಾರದು ಎಂಬ ಒತ್ತಾಯಗಳು ಕೇಳಿಬಂದಿದ್ದವು. ಭಾರತದ ಸೈನಿಕರನ್ನ ಪಾಕಿಸ್ತಾನೀಯರು ಸಾಯಿಸುತ್ತಿರುವಾಗ ಆ ದೇಶದೊಂದಿಗೆ ಕ್ರಿಕೆಟ್ ಆಡುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸಲಾಗಿತ್ತು. ಅಲ್ಲದೆ ಭಾರತದ ಅನೇಕ ಕ್ರಿಕೆಟ್ ದಿಗ್ಗಜರು ಕೂಡ ವಿಶ್ವಕಪ್​ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಡಬಾರದು ಎಂಬ ಹೇಳಿಕೆ ನೀಡಿದ್ದರು.

ಮಾಜಿ ಆಟಗಾರ ಗೌತಮ್ ಗಂಭೀರ್, ಸೌರವ್ ಗಂಗೂಲಿ, ಹರ್ಭಜನ್ ಸಿಂಗ್ ಸೇರಿದಂತೆ ಕೆಲ ಕ್ರಿಕೆಟಿಗರು ವಿಶ್ವಕಪ್​ನಲ್ಲಿ ಮಾತ್ರವಲ್ಲದೆ ಭಾರತ-ಪಾಕಿಸ್ತಾನ ನಡುವೆ ಮುಂದೆ ಯಾವತ್ತೂ ಕ್ರಿಕೆಟ್ ಆಟ ನಡೆಯಬಾರದು ಎಂಬ ಹೇಳಿಕೆ ನೀಡಿದ್ದರು.ಆದರೆ ನಿನ್ನೆಯ ಪಂದ್ಯದಲ್ಲಿ ಮಾತ್ರ ಈ ಎಲ್ಲಾ ಆಟಗಾರರು ಹಾಜರಿದ್ದರು. ಅದರಲ್ಲು ಗೌತಮ್ ಗಂಭೀರ್ ಅವರು ವೀಕ್ಷಕ ವಿವರಣಕಾರರಾಗಿ ಕಾಣಿಸಿಕೊಂಡಿದ್ದು ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಗಂಭೀರ್ ವಿರುದ್ಧ ಕಿಡಿ ಕಾರುತ್ತಿದ್ದಾರೆ.

'ನೀವು ವಿರೋಧಿಸಿದ ಪಂದ್ಯಕ್ಕೆ ವೀಕ್ಷಕ ವಿವರಣೆ ನೀಡಿ ಹಣ ಪಡೆಯುತ್ತಿದ್ದೀರಾ?' ಎಂದು ಕೆಲವರು ಕೇಳಿದೆರೆ, 'ಈ ಪಂದ್ಯವನ್ನು ನೀವು ಬಹಿಷ್ಕರಿಸುವುದಿಲ್ಲವೆ?, ವೈಯಕ್ತಿಕ ಲಾಭಕ್ಕಾಗಿ ರಾಷ್ಟ್ರೀಯತೆಯನ್ನು ಬಳಸಿಳ್ಳುತ್ತಿದ್ದೀರಿ' ಎಂದು ಲೇವಡಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಪ್ರತಿ ಬಾರಿ ಎದುರಾಳಿಯ ವಿಕೆಟ್ ಪಡೆದಾಗ ಬೆನ್ ಸ್ಟೋಕ್ಸ್ ಹೆಸರು ಹೇಳುವುದೇಕೆ? 

First published: June 17, 2019, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories