India vs Pakistan: ಭಾರತಕ್ಕೆ ಪಾಕ್ ವಿರುದ್ಧ ಸೋಲೇ ಇಲ್ಲ; ಹೈವೋಲ್ಟೇಜ್ ಪಂದ್ಯದಲ್ಲಿ ದಾಖಲೆಗಳ ಸರಮಾಲೆ!

India vs Pakistan: ಚೊಚ್ಚಲ ವಿಶ್ವಕಪ್ ಆಡುತ್ತಿರುವ ವಿಜಯ್ ಶಂಕರ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವಕಪ್​ನ ಮೊದಲ ಪಂದ್ಯದ, ಮೊದಲ ಓವರ್​ನ, ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ

  • News18
  • Last Updated :
  • Share this:
ಬೆಂಗಳೂರು (ಜೂ. 17): ಮ್ಯಾಂಚೆಸ್ಟರ್​​ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್​ನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಡಕ್ವರ್ತ್​​ ನಿಯಮದ ಅನ್ವಯ 89 ರನ್​ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅವರ ಆಕರ್ಷಕ ಶತಕ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ ಕೊಹ್ಲಿ ಪಡೆ ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಗೆದ್ದು ಬೀಗಿದೆ. ಜೊತೆಗೆ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ದಾಖಲೆ ಮೇಲೆ ದಾಖಲೆ ಬರೆದಿದೆ.

1992ರಿಂದ ಈವರೆಗೆ ವಿಶ್ವಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 6 ಪಂದ್ಯಗಳಲ್ಲಿ ಸೆಣಸಿವೆ. 6ಕ್ಕೆ ಆರೂ ಪಂದ್ಯಗಳಲ್ಲೂ ಟೀಂ ಇಂಡಿಯಾವೇ ಭರ್ಜರಿ ಜಯ ಸಾಧಿಸಿತ್ತು. ಸದ್ಯ ಈ ಬಾರಿಯ ವಿಶ್ವಕಪ್​ನಲ್ಲೂ ಭಾರತ ಗೆದ್ದಿದ್ದು, ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸೋಲೇ ಇಲ್ಲದಂತಾಗಿದೆ.​ ಈ ಮೂಲಕ ವಿಶ್ವಕಪ್​ನಲ್ಲಿ ಭಾರತ ಪಾಕ್ ವಿರುದ್ಧ 7-0 ಮುನ್ನಡೆ ಸಾಧಿಸಿದೆ.

ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)


ಇನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗವಾಗಿ 11 ಸಾವಿರ ರನ್​ಗಳನ್ನು ಪೂರೈಸಿ ಸಚಿನ್​ ತೆಂಡೂಲ್ಕರ್​ ದಾಖಲೆಯನ್ನು ಮುರಿದಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 11 ಸಾವಿರ ರನ್​ ದಾಖಲಿಸಿ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಸದ್ಯ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 276 ಇನ್ನಿಂಗ್ಸ್​​ಗಳಲ್ಲಿ ಸಚಿನ್​ ಈ ಸಾಧನೆ ಮಾಡಿದ್ದರು. ಆದರೆ ಕೊಹ್ಲಿ ಕೇವಲ 222 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

India vs Pakistan: ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಕೊಹ್ಲಿ ಸೈನ್ಯ; ಬದ್ಧವೈರಿಗಳ ವಿರುದ್ಧ ಭಾರತ ಅಜೇಯ ಓಟ!

Rohit sharma
ಶತಕ ಸಿಡಿಸಿ ಸಂಭ್ರಮಿಸುತ್ತಿರುವ ರೋಹಿತ್ ಶರ್ಮಾ


ಟೀಂ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ್ದಾರೆ. 34 ಎಸೆತದಲ್ಲೇ ಅರ್ಧ ಶತಕ ಬಾರಿಸಿದ ರೋಹಿತ್​ 85 ಎಸೆತದಲ್ಲಿ ಶತಕ ಪೂರೈಸಿದರು. ಇದು 2019ರ ವಿಶ್ವಕಪ್​​ ಟೂರ್ನಿಯಲ್ಲಿ ರೋಹಿತ್​ ಎರಡನೇ ಶತಕವಾಗಿದೆ. ಅಲ್ಲದೆ ಪಾಕಿಸ್ತಾನ ವಿರುದ್ಧ ಬಾರಿಸಿದ 3ನೇ ಶತಕವಾಗಿದೆ. ಈ ಮೂಲಕ ವಿಶ್ವಕಪ್​ನಲ್ಲಿ 3 ಶತಕಗಳಿಸಿದ  4ನೇ ಬ್ಯಾಟ್ಸ್​ಮನ್​ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

Rohit Sharma and KL Rahul
ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್


ಇವರ ಜೊತೆಗೆ ಕನ್ನಡಿಗ ಕೆ.ಎಲ್​ ರಾಹುಲ್-ರೋಹಿತ್ ಶರ್ಮಾ​ ನೂತನ ದಾಖಲೆ ನಿರ್ಮಿಸಿದ್ದಾರೆ. ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆರಂಭದಲ್ಲಿಯೇ 100 ರನ್​ ಗಳಿಸಿದ ವಿಶ್ವದ ಐದನೇ ಜೋಡಿ ಎಂಬುದು ರೋಹಿತ್​-ರಾಹುಲ್ ಬರೆದಿರುವ ದಾಖಲೆಯಾಗಿದೆ.

India vs Pakistan: Vijay Shankar joins elite list with wicket off first ball in World Cups
ವಿಜಯ್ ಶಂಕರ್


ಚೊಚ್ಚಲ ವಿಶ್ವಕಪ್ ಆಡುತ್ತಿರುವ ವಿಜಯ್ ಶಂಕರ್ ಕೂಡ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವಕಪ್​ನ ಮೊದಲ ಪಂದ್ಯದ, ಮೊದಲ ಓವರ್​ನ, ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಭಾರತ ಬೌಲಿಂಗ್​ನ ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಗಾಯಕ್ಕೊಳಗಾದ ಕಾರಣ ಮೈದಾನ ತೊರೆಯಬೇಕಾಯಿತು. ಬಳಿಕ ಓವರ್ ಪೂರ್ಣಗೊಳಿಸಲು ಬಂದ ಶಂಕರ್ ತನ್ನ ಚೊಚ್ಚಲ ವಿಶ್ವಕಪ್​ನ ಮೊದಲ ಎಸೆತದಲ್ಲೇ ಪಾಕ್​ನ ಮೊದಲ ವಿಕೆಟ್ ಕಿತ್ತರು.

First published: