Ind vs Pak T20: ಖ್ಯಾತ ಜ್ಯೋತಿಷಿ ಭವಿಷ್ಯ; ಭಾರತ-ಪಾಕ್ ಪಂದ್ಯದಲ್ಲಿ ಗೆಲ್ಲೋದ್ಯಾರು?

Pandit Jagannath Guruji predicts winner in India vs Pakistan match- ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲಬಹುದು ಎಂದು ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ಆಟಗಾರರು

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ಆಟಗಾರರು

  • Share this:
    ನವದೆಹಲಿ, ಅ. 24: ಇಂದು ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯ ಎರಡು ದೇಶಗಳಿಗೆ ಮಾತ್ರವಲ್ಲ, ಇಡೀ ವಿಶ್ವಕಪ್ ತಂಡಗಳಿಗೆ ಕುತೂಹಲ ಮೂಡಿಸಿರುವ ಹಣಾಹಣಿಯಾಗಿದೆ. ಕೆಲವೇ ಕ್ಷಣಗಳಲ್ಲಿ ಪ್ರಾರಂಭವಾಗಲಿರುವ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕಾತರ ಎಲ್ಲರಲ್ಲೂ ಇದೆ. ಯಾವುದೇ ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಮ್ಮೆಯೂ ಗೆದ್ದಿಲ್ಲ. ಟಿ20 ವಿಶ್ವಕಪ್​ಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ 5 ಬಾರಿ ಗೆದ್ದಿದೆ. ಏಕದಿನ ಕ್ರಿಕೆಟ್ ವಿಶ್ವಕಪ್​ನಲ್ಲಿ ಭಾರತ 7 ಬಾರಿ ಗೆದ್ದಿದೆ. ಪಾಕಿಸ್ತಾನ ಅದೊಂದು ಗೆಲುವಿಗಾಗಿ ತಡಕಾಡುತ್ತಿದೆ. ವಿಶ್ವಕಪ್​ನಲ್ಲಿ ಭಾರತವನ್ನು ಸಂಧಿಸಿದಾಗೆಲ್ಲಾ ಪಾಕಿಸ್ತಾನಕ್ಕೆ ಗೆಲುವು ಕೈಗೆಟುಕದಂತಾಗಿದೆ. ಈ ಬಾರಿಯೂ ಅದೇ ಟ್ರೆಂಡ್ ಮುಂದುವರಿಯುತ್ತಾರೆ. ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಜೋಷಿ ಅವರ ಭವಿಷ್ಯ ಇದನ್ನೇ ಸೂಚಿಸುತ್ತಿದೆಯಂತೆ.

    “ಭಾರತ ಮತ್ತು ಪಾಕಿಸ್ತಾನ ನಡುವಿನ ಇವತ್ತಿನ ಪಂದ್ಯ ಕ್ರಿಕೆಟ್ ರಸಿಕರಿಗೆ ಅದ್ಭುತ ಅನುಭವ ಕೊಡುತ್ತದೆ. ಆದರೆ, ಯಾರೇ ಗೆದ್ದರೂ ಸುಲಭವಾಗಂತೂ ಜಯ ಸಿಕ್ಕುವುದಿಲ್ಲ. ಬಹಳ ಪ್ರಯಾಸಪಟ್ಟು ಗೆಲುವು ದಕ್ಕಿಸಿಕೊಳ್ಳಬೇಕಾಗುತ್ತದೆ” ಎಂದು ಗುರೂಜಿ ಹೇಳಿದ್ಧಾರೆ.

    ಭಾರತಕ್ಕೆ ಗೆಲುವಿನ ಸಾಧ್ಯತೆ:

    “ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ನಾಯಕ. ಅವರ ನಾಯಕತ್ವದಲ್ಲಿ ಭಾರತ ಚೆನ್ನಾಗಿ ಆಡುವ ವಿಶ್ವಾಸ ಇದೆ. ಇವತ್ತಿನ ಪಂದ್ಯದಲ್ಲಿ ಭಾರತ ಆತ್ಮವಿಶ್ವಾಸದಿಂದ ಇದೆ. ಫೀಲ್ಡ್​ನಲ್ಲಿ ಕೊಹ್ಲಿ ಉಪಸ್ಥಿತರಿರುವುದು ಇಡೀ ತಂಡಕ್ಕೆ ಬಲ ಹೆಚ್ಚಿಸುತ್ತದೆ. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುತ್ತದೆ” ಎಂದು ಪಂಡಿತ್ ಜಗನ್ನಾಥ್ ಗುರೂಜಿ ಭವಿಷ್ಯ ಹೇಳಿದ್ಧಾರೆ.

    ಪಾಕಿಸ್ತಾನಕ್ಕೆ ರಾಹು, ಶನಿ ಅಡ್ಡಿ:

    ಇದೇ ವೇಳೆ ಪಾಕಿಸ್ತಾನ ತಂಡ ಕೂಡ ಬಲಿಷ್ಠವಾಗಿದೆ. ಸ್ವಲ್ಪ ಅವಕಾಶ ಸಿಕ್ಕರೂ ಅವರು ಸುಲಭವಾಗಿ ಮೇಲುಗೈ ಸಾಧಿಸಿ ಗೆಲುವು ದಕ್ಕಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ರಾಹು ಮತ್ತು ಶನಿ ಗ್ರಹಗಳು ಪಾಕಿಸ್ತಾನದ ಗೆಲುವಿಗೆ ಅಡ್ಡಿಯಾಗಬಹುದು ಎಂದು ಗುರೂಜಿ ಅಭಿಪ್ರಾಯಪಟ್ಟಿದ್ಧಾರೆ.

    ಇದನ್ನೂ ಓದಿ: Virender Sehwag- ಏಕಾಂಗಿಯಾಗೇ ಪಾಕ್ ವಿರುದ್ಧ ಇವರು ಪಂದ್ಯ ಗೆಲ್ಲಿಸಬಲ್ಲರು ಎಂದ ಸೆಹ್ವಾಗ್

    ಭಾರತ ವಿಶ್ವಕಪ್ ಗೆಲ್ಲಬಹುದು ಎಂದ ಪಾಕ್ ಮಾಜಿ ಕ್ರಿಕೆಟಿಗ: 

    ಟಿ20 ವಿಶ್ವಕಪ್ ಅನ್ನು ಗೆಲ್ಲಲು ಭಾರತಕ್ಕೇ ಹೆಚ್ಚು ಚಾನ್ಸ್ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಮ್ ಉಲ್ ಹಕ್ ಅಭಿಪ್ರಾಯಪಟ್ಟಿದ್ಧಾರೆ. ಪಿಚ್​ನ ಪರಿಸ್ಥಿತಿ ಹಾಗೂ ಭಾರತ ತಂಡದ ಆಟಗಾರರಿಗೆ ಟಿ20 ಕ್ರಿಕೆಟ್​ನಲ್ಲಿ ಇರುವ ಅನುಭವ ನೋಡಿದರೆ ಬೇರೆಲ್ಲಾ ತಂಡಗಳಿಂತ ಭಾರತಕ್ಕೆ ವರ್ಲ್ಡ್ ಕಪ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಇಂಜಮಮ್ ಹೇಳಿದ್ದಾರೆ. “ಯಾವುದೇ ಟೂರ್ನಿ ಇರಲಿ ಇದೇ ತಂಡ ಗೆಲ್ಲುತ್ತದೆ ಎಂದು ಪಕ್ಕಾ ಹೇಳಲು ಅಸಾಧ್ಯ. ಒಂದು ತಂಡಕ್ಕೆ ಗೆಲ್ಲುವ ಅವಕಾಶ ಎಷ್ಟು ಎಂದು ಅಂದಾಜು ಮಾಡಲು ಮಾತ್ರ ಸಾಧ್ಯ. ಇಲ್ಲಿನ ವಾತಾವರಣ, ಪಿಚ್ ಪರಿಸ್ಥಿತಿಯನ್ನ ಗಮನಿಸಿದರೆ ಈ ಟೂರ್ನಿಯನ್ನ ಗೆಲ್ಲಲು ಭಾರತಕ್ಕೆ ಹೆಚ್ಚಿನ ಅವಕಾಶ ಇದೆ ಎಂಬುದು ನನ್ನ ಭಾವನೆ. ಮೇಲಾಗಿ ಭಾರತ ತಂಡದಲ್ಲಿ ಅನುಭವಿ ಟಿ20 ಆಟಗಾರರಿದ್ಧಾರೆ” ಎಂದು ಮಾಜಿ ಪಾಕ್ ಆಟಗಾರ ಹೇಳಿದ್ಧಾರೆ.

    ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ:

    ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯ ವಿಶ್ವಕಪ್ ಫೈನಲ್​ಗೆ ಮುನ್ನ ನಡೆಯುವ ಫೈನಲ್ ಎಂದು ಇಂಜಮಮ್ ಅಭಿಪ್ರಾಯಪಟ್ಟಿದ್ದಾರೆ. “ಸೂಪರ್ 12 ಹಂತದಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನ ಪಂದ್ಯ ಫೈನಲ್​ಗೆ ಮುಂಚಿನ ಫೈನಲ್ ಆಗಿದೆ. ಬೇರಾವ ಪಂದ್ಯಕ್ಕೂ ಇಷ್ಟು ಹೈಪ್ ಸಿಗುವುದಿಲ್ಲಲ. 2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಭಾರತ ಮತ್ತು ಪಾಕಿಸ್ತಾನ ಪಂದ್ಯವಾಗಿತ್ತು. ಎರಡೂ ತಂಡಗಳ ಆಟಗಾರರಿಗೆ ಅದು ಫೈನಲ್ ಮ್ಯಾಚ್ ಎಂಬಂತೆ ಭಾಸವಾಗಿತ್ತು. ಈ ಪಂದ್ಯ ಗೆದ್ದ ತಂಡದ ಮಾನಸಿಕ ಸ್ಥೈರ್ಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ತಂಡದ ಮೇಲಿನ ಶೇ. 50ರಷ್ಟು ಒತ್ತಡ ನಿವಾರಣೆ ಆಗುತ್ತದೆ” ಎಂದು ಇಂಜಮಮ್ ತಿಳಿಸಿದ್ಧಾರೆ.
    Published by:Vijayasarthy SN
    First published: