ಭಾರತ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಶಾರುಖ್ ಖಾನ್ ಪ್ರತಿಕ್ರಿಯೆ ಹೇಗಿತ್ತು?; ಈ ವಿಡಿಯೋ ನೋಡಿ

ಪಾಕಿಸ್ತಾನ ತಂಡ ಬಾರತ ವಿರುದ್ಧ ಸೋತ ನಂತರ ಅಭಿಮಾನಿಯೊಬ್ಬರು ಕಣ್ಣೀರಿಟ್ಟಿ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು. ಸದ್ಯ ಈ ಪಾಕ್ ಅಭಿಮಾನಿಯ ಮತ್ತೊಂದು ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಶಾರುಖ್ ಖಾನ್ ಹಾಗೂ ಪಾಕ್ ಅಭಿಮಾನಿ

ಶಾರುಖ್ ಖಾನ್ ಹಾಗೂ ಪಾಕ್ ಅಭಿಮಾನಿ

  • News18
  • Last Updated :
  • Share this:
ಬೆಂಗಳೂರು (ಜೂ. 21): ಈ ಬಾರಿಯ ವಿಶ್ವಕಪ್​​ನಲ್ಲೂ ಪಾಕಿಸ್ತಾನ ತಂಡ ಬಾರತ ವಿರುದ್ಧ ಸೋಲುಂಡಿದ್ದು, ತನ್ನ ಕೆಟ್ಟ ದಾಖಲೆಯನ್ನು ಮುಂದುವರೆಸಿದೆ. ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತ ಬಳಿಕ ಭಾರೀ ಟೀಕೆಗಳಿಗೆ ಒಳಗಾಗಿದೆ. ಅಭಿಮಾನಿಗಳಂತೂ ಸಾಮಾಜಿಕ ತಾಣಗಳಲ್ಲಿ ಪಾಕ್ ವಿರುದ್ಧ ಸಿಡಿದೆದ್ದಿದ್ದರು. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬ್ಯಾನ್ ಮಾಡುವಂತೆ ಕೋರ್ಟ್​ಗೆ ಹೋದ ಘಟನೆಯೂ ನಡೆದಿವೆ.

ಇವೆಲ್ಲದರ ಮಧ್ಯೆ ಪಾಕಿಸ್ತಾನ ತಂಡ ಬಾರತ ವಿರುದ್ಧ ಸೋಲಲು ಪಾಕ್ ಕ್ರಿಕೆಟಿಗರು ಬರ್ಗರ್, ಪಿಝಾ ತಿಂದು ಯಾವುದೇ ಫಿಟ್ನೆಸ್ ಇಲ್ಲದೆ, ಫಾರ್ಮ್ ಇಲ್ಲದೆ ಕಣಕ್ಕಿಳಿಯುವುದು ಕಾರಣ ಎಂದು ಹೇಳಿ ಅಭಿಮಾನಿಯೊಬ್ಬರು ಕಣ್ಣೀರಿಟ್ಟಿದ್ದರು. ವಿಶ್ವಕಪ್ ಟೂರ್ನಿಯನ್ನು ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪಾಕ್ ಅಭಿಮಾನಿ ಮೊಮಿನ್ ಸಖಿಬ್ ಆಕ್ರೋಶ ವ್ಯಕ್ತಪಡಿಸಿ ಅತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಕೂಡ ಆಗಿತ್ತು.

 ತೆಲುಗು ಸ್ಟಾರ್ ಜೂ. ಎನ್​ಟಿಆರ್ ಜೊತೆ ಕೈಜೋಡಿಸಲಿದ್ದಾರೆ ವಿರಾಟ್ ಕೊಹ್ಲಿ!

ಸದ್ಯ ಪಾಕ್​ನ ಈ ಅಭಿಮಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಈಗಷ್ಟೇ ಅಲ್ಲದೆ ಈ ಹಿಂದೆ ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆದ್ದ ಸಂದರ್ಭದಲ್ಲು ಸಖಿಬ್ ಭಾವುಕರಾಗಿ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಸದ್ಯ ಶಾರುಖ್​ ಖಾನ್​ ಅವರನ್ನು ಅನುಕರಣೆ ಮಾಡಿರುವ ಸಖಿಬ್ ಅವರ ಹೊಸ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

 

ಭಾರತ ವಿರುದ್ಧ ವಿಶ್ವಕಪ್​ನಲ್ಲಿ ಪಾಕಿಸ್ತಾನ ಸೋತಿದ್ದು, ಇದಕ್ಕೆ ಶಾರುಖ್ ಅವರು ಯಾವರೀತಿ ರಿಯಾಕ್ಟ್​ ಮಾಡಬಹುದು ಎಂಬುದನ್ನು ಥೇಟ್ ಅವರ ರೀತಿಯಲ್ಲೇ ಬಿಬಿಸಿ ಮಾಡಿರುವ ಸಂದರ್ಶನದಲ್ಲಿ ಮಾಡಿ ತೋರಿಸಿದ್ದಾರೆ.ಮತ್ತೆ ಕ್ರಿಕೆಟ್ ಆಡಲಿದ್ದಾರೆ ಯುವರಾಜ್​; ಸಿಕ್ಸರ್ ಕಿಂಗ್ ಮನವಿಗೆ ಜೈ ಎಂದ ಬಿಸಿಸಿಐ

ಭಾರತ ವಿರುದ್ಧ ಸೋತ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರತಿಯೊಂದು ವಿಷಯಕ್ಕೂ ಟ್ರೋಲ್ ಆಗುತ್ತಿದೆ. ಅದರಲ್ಲು ಪಾಕ್ ನಾಯಕ ಸರ್ಫರಾಜ್ ಖಾನ್ ಹೈವೋಲ್ಟೇಜ್ ಪಂದ್ಯದಲ್ಲಿ ವಿಕೆಟ್ ಕೀಪರ್​ ಸ್ಥಾನದಲ್ಲಿ ನಿಂತು ತನಗೂ ಪಂದ್ಯಕ್ಕೂ ಸಂಬಂಧವಿಲ್ಲದಂತೆ ಆಕಳಿಸುತ್ತಿರುವ ವಿಡಿಯೋ ಟ್ರೋಲಿಗರಿಗೆ ಆಹಾರವಾಗಿತ್ತು. ಜೊತೆಗೆ ಪಾಕ್​ನ ಮಾಜಿ ಆಟಗಾರ ಶೋಯೆಬ್ ಅಖ್ತರ್ ಅವರು ವೇಗಿ ಹಸನ್ ಅಲಿ ಅವರಿಗೆ ವಾಘಾ ಗಡಿಯಲ್ಲಿ ತೋರಿದ ಅಟ್ಟಹಾಸ, ಉತ್ಸಾಹವನ್ನು ಕ್ರೀಡಾಂಗಣದಲ್ಲೂ ಪ್ರದರ್ಶಿಸಬೇಕಿತ್ತು ಎಂದು ಚಾಟಿ ಬೀಸಿದ್ದರು.

 First published: