India vs Pakistan: ತನ್ನ ದೇಶದ ಪ್ರಧಾನಿ ಮಾತನ್ನೇ ಕಡೆಗಣಿಸಿದ ಪಾಕಿಸ್ತಾನ ನಾಯಕ ಸರ್ಫರಾಜ್!

India vs Pakistan: ಭಾರತ-ಪಾಕ್ ಕದನಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ತಂಡಕ್ಕೆ ಸಲಹೆ ನೀಡಿ ಶುಭ ಹಾರೈಸಿದ್ದಾರೆ. ಆದರೆ ಪ್ರಧಾನಿ ಸಲಹೆಯನ್ನು ಪಾಕ್ ನಾಯಕ ಸರ್ಫರಾಜ್ ಕಡೆಗಣಿಸಿದ್ದಾರೆ.

Vinay Bhat | news18
Updated:June 16, 2019, 4:07 PM IST
India vs Pakistan: ತನ್ನ ದೇಶದ ಪ್ರಧಾನಿ ಮಾತನ್ನೇ ಕಡೆಗಣಿಸಿದ ಪಾಕಿಸ್ತಾನ ನಾಯಕ ಸರ್ಫರಾಜ್!
ಸರ್ಫರಾಜ್ ಅಹ್ಮದ್ ಹಾಗೂ ಇಮ್ರಾನ್ ಖಾನ್
  • News18
  • Last Updated: June 16, 2019, 4:07 PM IST
  • Share this:
ಬೆಂಗಳೂರು (ಜೂ. 16): ವಿಶ್ವಕಪ್​ನಲ್ಲಿಂದು ಮ್ಯಾಂಚೆಸ್ಟರ್​​ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯುತ್ತಿದೆ.

ಈಗಾಗಲೇ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಭಾರತ ಬ್ಯಾಟಿಂಗ್​ಗೆ ಇಳಿದಿದ್ದು, ಓಪನರ್​ಗಳಾಗಿ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.

ಈ ಮಧ್ಯೆ ಭಾರತ-ಪಾಕ್ ಕದನಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ತಂಡಕ್ಕೆ ಸಲಹೆ ನೀಡಿ ಶುಭ ಹಾರೈಸಿದ್ದಾರೆ. ಆದರೆ ಪ್ರಧಾನಿ ನೀಡಿದ ಸಲಹೆಯನ್ನು ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಕಡೆಗಣಿಸಿದ್ದಾರೆ.

 


Cricket World Cup 2019, India vs Pakistan: ಹಿಟ್​ಮ್ಯಾನ್ ಭರ್ಜರಿ ಬ್ಯಾಟಿಂಗ್; ಆಕರ್ಷಕ ಅರ್ಧಶತಕ

'ಇಂದಿನ ಪಂದ್ಯ ಪಾಕಿಸ್ತಾನಕ್ಕೆ ಪ್ರಮುಖ ವಾಗಿದೆ. ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್​​ ಹಾಗೂ ಬೌಲರ್​ಗಳ ಮೂಲಕ ಕಣಕ್ಕಿಳಿಯಿರಿ. ಮಳೆ ಬಂದ ಕಾರಣ ಒದ್ದೆ ಕ್ರೀಡಾಂಗಣವಿಲ್ಲದಿದ್ದಲ್ಲಿ ಸರ್ಫರಾಜ್​ ಟಾಸ್ ಗೆದ್ದರೆ ಖಂಡಿತಾ ಮೊದಲು ಬ್ಯಾಟಿಂಗ್​ ಆಯ್ದುಕೊಳ್ಳಬೇಕು. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ. ಟೀಂ ಇಂಡಿಯಾ ನೆಚ್ಚಿನ ತಂಡವಾದರೂ ಸೋಲಿನ ಭಯದಿಂದ ಹೊರಬಂದು ಉತ್ತಮ ಹೋರಾಟ ನೀಡಬೇಕು' ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿ ಸಲಹೆ ನೀಡಿದ್ದಾರೆ.

ಆದರೆ ಇಮ್ರಾನ್ ಖಾನ್​ರ ಮಾತನ್ನು ಕಡೆಗಣಿಸಿರುವ ಸರ್ಫರಾಜ್ ಖಾನ್ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಪುಲ್ವಾಮ ಉಗ್ರರ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ತಂಡ ಮೊದಲ ಬಾರಿಗೆ ಮುಖಾಮುಖಿ ಆಗಿತ್ತಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಭಾರತ ಆಗಿದ್ದರೂ ಪಾಕಿಸ್ತಾನ ತಂಡವನ್ನು ಕಡೆಗಣಿಸುವಂತಿಲ್ಲ. ಬೌಲಿಂಗ್ ಆಯ್ಕೆ ಮಾಡುಕೊಂಡಿರುವ ಪಾಕ್ ಮಾಸ್ಟರ್ ಪ್ಲ್ಯಾನ್​​ನೊಂದಿಗೆ ಕಣಕ್ಕಿಳಿದಿದೆ.

First published:June 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading