ಭಾರತ ವಿರುದ್ಧ ಸೋತ ಬಳಿಕ ನಾನು ಆತ್ಮಹತ್ಯೆಗೆ ನಿರ್ಧರಿಸಿದ್ದೆ: ಪಾಕ್ ಕೋಚ್

ಪಾಕ್​ ನಿನ್ನೆ ದ. ಆಫ್ರಿಕಾ ವಿರುದ್ಧ 49 ರನ್​ಗಳ ಜಯ ಸಾಧಿಸಿ ತನ್ನ ವಿಶ್ವಕಪ್​​ ಹಾದಿಯನ್ನು ಜೀವಂತವಾಗಿರಿಸಿದೆ. ಈ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕ್ ಕೋಚ್ ಮಿಕ್ಕಿ ಈ ಆಘಾತಕಾರಿ ಸುದ್ದಿಯನ್ನು ತಿಳಿಸಿದ್ದಾರೆ.

Vinay Bhat | news18
Updated:June 25, 2019, 3:51 PM IST
ಭಾರತ ವಿರುದ್ಧ ಸೋತ ಬಳಿಕ ನಾನು ಆತ್ಮಹತ್ಯೆಗೆ ನಿರ್ಧರಿಸಿದ್ದೆ: ಪಾಕ್ ಕೋಚ್
ಪಾಕಿಸ್ತಾನ ತಂಡದ ಆಟಗಾರರು
  • News18
  • Last Updated: June 25, 2019, 3:51 PM IST
  • Share this:
ಬೆಂಗಳೂರು (ಜೂ. 24): ಈ ಬಾರಿಯ ವಿಶ್ವಕಪ್​​ನಲ್ಲೂ ಪಾಕಿಸ್ತಾನ ತಂಡ ಬಾರತ ವಿರುದ್ಧ ಸೋಲುಂಡಿದ್ದು, ತನ್ನ ಕೆಟ್ಟ ದಾಖಲೆಯನ್ನು ಮುಂದುವರೆಸಿದೆ. ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತ ಬಳಿಕ ಭಾರೀ ಟೀಕೆಗಳಿಗೆ ಒಳಗಾಗಿತ್ತು. ತಂಡದ ನಾಯಕ, ಕೋಚ್ ವಿರುದ್ಧ ಅಭಿಮಾನಿಗಳಂತೂ ಸಾಮಾಜಿಕ ತಾಣಗಳಲ್ಲಿ ಸಿಡಿದೆದ್ದಿದ್ದರು. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬ್ಯಾನ್ ಮಾಡುವಂತೆ ಕೋರ್ಟ್​ಗೆ ಹೋದ ಘಟನೆಯೂ ನಡೆದಿತ್ತು.

ಹೀಗಿರುವಾಗ ಪಾಕಿಸ್ತಾನ ತಂಡದ ಕೋಚ್ ಮಿಕ್ಕಿ ಆರ್ಥರ್ ಭಾರತ ವಿರುದ್ಧದ ಪಂದ್ಯ ಸೋತ ಬಳಿಕ ನಾನು ಆತ್ಮಹತ್ಯೆ ಮಾಡಲು ನಿರ್ಧಾರ ಮಾಡಿದ್ದೆ ಎಂಬ ಆಘಾತಕಾರಿ ಸುದ್ದಿ ಬಿಚ್ಚಿಟ್ಟಿದ್ದಾರೆ.

ಪಾಕಿಸ್ತಾನ ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್​ಗಳ ಜಯ ಸಾಧಿಸಿ ತನ್ನ ವಿಶ್ವಕಪ್​​ ಹಾದಿಯನ್ನು ಜೀವಂತವಾಗಿರಿಸಿದೆ. ಈ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕ್ ಕೋಚ್ ಮಿಕ್ಕಿ ಈ ವಿಚಾರವನ್ನು ತಿಳಿಸಿದ್ದಾರೆ.

ಭುವಿ ಸ್ಥಾನಕ್ಕೆ ಆರ್​ಸಿಬಿ ಆಟಗಾರ​; ಮ್ಯಾಂಚೆಸ್ಟರ್ ಬಂದಿಳಿದ ಸ್ಟಾರ್ ಬೌಲರ್!

Pakistan coach Mickey Arthur wanted to commit suicide after India loss
ಮಿಕ್ಕಿ ಆರ್ಥರ್, ಪಾಕಿಸ್ತಾನ ತಂಡದ ಕೋಚ್


'ನಾವು ಸೋಲಿನ ಮೇಲೆ ಸೋಲು ಕಾಣುತ್ತಿದ್ದವು. ಇದು ವಿಶ್ವಕಪ್​. ಅಭಿಮಾನಿಗಳಿಂದ ತುಂಬಾನೇ ಟೀಕೆಗೆ ಗುರಿಯಾಗಿದ್ದೆವು. ಈ ಮಧ್ಯೆ ಬಾರತ ವಿರುದ್ಧದ ಪಂದ್ಯ ನಮಗೆ ಮುಖ್ಯವಾಗಿತ್ತು. ಆದರೆ, ಈ ಪ್ರಮುಖ ಪಂದ್ಯದಲ್ಲೂ ಸೋಲು ಕಂಡೆವು. ಇದರಿಂದ ನಾನು ತುಂಬಾ ಉತ್ತಡ, ಇಕ್ಕಟ್ಟಿಗೆ ಸಿಲುಕಿದೆ, ಆತ್ಮಹತ್ಯೆ ಮಾಡಬೇಕೆಂಬ ನಿರ್ಧಾರಕ್ಕೂ ಬಂದಿದ್ದೆ' ಎಂದು ಹೇಳಿದ್ದಾರೆ.

 


Andre Russell: ವಿಶ್ವಕಪ್​​ನಿಂದ ಹೊರಬಿದ್ದ ಮತ್ತೊಬ್ಬ ಸ್ಟಾರ್ ಆಟಗಾರ; ವೆಸ್ಟ್​ ಇಂಡೀಸ್​ಗೆ ಭಾರೀ ಹೊಡೆತ

ಇನ್ನು ದ. ಆಫ್ರಿಕಾ ವಿರುದ್ಧ ನಮ್ಮ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಎಲ್ಲರೂ ಚೆನ್ನಾಗಿ ಆಡಿದರು. ಮುಂದೆಯು ಇದೇ ಪ್ರದರ್ಶನವನ್ನು ಮುಂದುವರೆಸಿ ಸೆಮಿ ಫೈನಲ್ ಹಂತಕ್ಕೇರುತ್ತೇವೆ ಎಂದು ಮಿಕ್ಕಿ ಆರ್ಥರ್​​ ಅಭಿಪ್ರಾಯ ಪಟ್ಟಿದ್ದಾರೆ.
First published:June 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ