HOME » NEWS » Sports » CRICKET INDIA VS PAKISTAN MOHAMMAD AMIR AND WAHAB RIAZ RECEIVE TWO OFFICIAL WARNINGS FOR RUNNING IN DANGER AREA

India vs Pakistan: ಮೈದಾನದಲ್ಲೂ ಗಡಿದಾಟಿದ ಪಾಕ್ ಬೌಲರುಗಳು: ಕಳ್ಳಾಟದ ವಿರುದ್ಧ ವ್ಯಾಪಕ ಆಕ್ರೋಶ

ತಮ್ಮ ಕಳ್ಳಾಟವನ್ನು ಅಂಪೈರ್ ಗಮನಿಸುತ್ತಿರುವುದನ್ನು ಅರಿತ ಪಾಕ್ ಬೌಲರುಗಳ ನಿಧಾನಕ್ಕೆ ನೈಜ ಆಟಕ್ಕೆ ಮರಳಿದರು. ಆದರೆ ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

zahir | news18
Updated:June 16, 2019, 7:11 PM IST
India vs Pakistan: ಮೈದಾನದಲ್ಲೂ ಗಡಿದಾಟಿದ ಪಾಕ್ ಬೌಲರುಗಳು: ಕಳ್ಳಾಟದ ವಿರುದ್ಧ ವ್ಯಾಪಕ ಆಕ್ರೋಶ
ಅಮೀರ್
  • News18
  • Last Updated: June 16, 2019, 7:11 PM IST
  • Share this:
ಮ್ಯಾಂಚೆಸ್ಟರ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್​ನ ಹೈ ವೋಲ್ಟೇಜ್ ಪಂದ್ಯದಲ್ಲಿ ಆಟದ ನಿಯಮ ಮೀರಿದ ಪಾಕಿಸ್ತಾನ ಬೌಲರ್​ಗಳಿಗೆ ಅಂಪೈರ್​ ಎಚ್ಚರಿಕೆ ನೀಡಿದ ಘಟನೆ ನಡೆಯಿತು. ವಿಕೆಟ್​ಗಾಗಿ ಪರದಾಡುತ್ತಿದ್ದ ಪಾಕ್ ವೇಗಿಗಳು ಪಿಚ್​ ಮಧ್ಯದಲ್ಲಿ ಓಡುವ ಮೂಲಕ ಕಳ್ಳಾಟಕ್ಕೆ ಮುಂದಾಗಿದ್ದರು.

ಪಂದ್ಯದ ಎರಡನೇ ಓವರ್​​ನ ಮೂರನೇ ಎಸೆತದಲ್ಲಿ ಪಾಕ್ ವೇಗಿ ಮೊಹಮ್ಮದ್ ಅಮೀರ್ ಪಿಚ್ ಮಧ್ಯದಲ್ಲಿ ರನ್ನಿಂಗ್ ಮುಂದುವರೆಸಿದ್ದರು. ಇದನ್ನು ಗಮನಿಸಿದ ಅಂಪೈರ್ ಆಕ್ಸನ್​ಫೋರ್ಡ್​ ಎಚ್ಚರಿಕೆ ನೀಡಿದರು. ಇದೇ ತಪ್ಪನ್ನು ಮುಂದುವರೆಸಿದ ಅಮೀರ್ 5ನೇ ಓವರ್​ನಲ್ಲೂ ಪಿಚ್ ಹಾಳುಗೆಡುವ ಕಾರ್ಯಕ್ಕೆ ಕಾಲೊಡ್ಡಿದ್ದರು. ಈ ವೇಳೆ ಅಂಪೈರ್ ಫೈನಲ್ ವಾರ್ನಿಂಗ್ ಮೂಲಕ ಎಚ್ಚರಿಸಿದರು.

ಇದಾದ ಬಳಿಕ 24ನೇ ಓವರ್​ನಲ್ಲಿ ವಹಾಬ್ ರಿಯಾಜ್ ಕೂಡ ಪಿಚ್​ ನಡುವೆ ಓಡಿದ್ದರು. ಈ ವೇಳೆ ಖಡಕ್ ಎಚ್ಚರಿಕೆ ನೀಡಿದ ಅಂಪೈರ್ ಮಾರೈಸ್ ಎರಾಸ್ಮಸ್, ಮೊದಲೇ ಮಳೆಯಿಂದ ಪಿಚ್ ತೇವಗೊಂಡಿದ್ದು, ಮಧ್ಯ ಭಾಗದಲ್ಲಿ ಓಡುವ ಮೂಲಕ ಪಿಚ್​ ಅನ್ನು ಹಾಳುಗೆಡಬೇಡಿ ಎಂದು ತಾಕೀತು ಮಾಡಿದರು.ತಮ್ಮ ಕಳ್ಳಾಟವನ್ನು ಅಂಪೈರ್ ಗಮನಿಸುತ್ತಿರುವುದನ್ನು ಅರಿತ ಪಾಕ್ ಬೌಲರುಗಳ ನಿಧಾನಕ್ಕೆ ನೈಜ ಆಟಕ್ಕೆ ಮರಳಿದರು. ಆದರೆ ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನಿಯರು ಬರೀ ಭಾರತದ ಗಡಿದಾಟುವುದಲ್ಲದೆ, ಪಿಚ್​ ಗಡಿಯನ್ನು ದಾಟುತ್ತಿದ್ದಾರೆ. ಮೈದಾನದಲ್ಲೂ ಗಡಿದಾಡುವ ಬುದ್ದಿ ಮಾತ್ರ ಪಾಕಿಗಳು ಬಿಟ್ಟಿಲ್ಲ ಎಂಬಿತ್ಯಾದಿ ಆಕ್ರೋಶ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಅಮೀರ್


ಬೌಲರುಗಳು ಹಾಕುವ ಸ್ಪೈಕ್ ಶೂಗಳಿಂದ ಪಿಚ್​ ಮಧ್ಯದಲ್ಲಿ ಓಡಿದರೆ ಪಿಚ್ ಹಾಳಾಗುತ್ತದೆ. ಇದರಿಂದ ಚೆಂಡು ಪುಟಿದೇಳುವ ಮತ್ತು ಸ್ವಿಂಗ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದರಿಂದ ಬ್ಯಾಟ್ಸ್​ಮನ್​ಗಳಿಗೆ ಚೆಂಡನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.
ಪಾಕ್ ವೇಗಿ ವಹಾಬ್


ಈ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.cricketworldcup.com/video/1247278?fbclid=IwAR2venQMgR_PZtE3h5wMfe_2p4oB4YzYpy6YCQ-xAbRusUjSwKAvc_RqOBk
First published: June 16, 2019, 7:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories