ಭಾರತ ವಿರುದ್ಧ ಹೀನಾಯ ಸೋಲು; ತನ್ನದೆ ಹೊಸ ತಂಡಕಟ್ಟಲು ಮುಂದಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್?

India vs Pakistan: ಪಾಕಿಸ್ತಾನಕ್ಕೆ ಏಕೈಕ ವಿಶ್ವಕಪ್​ ಗೆದ್ದುಕೊಟ್ಟಿರುವ ಮಾಜಿ ಆಟಗಾರ ಇಮ್ರಾನ್​ ಖಾನ್ ತಾನು ಪ್ರಧಾನಿ ಎಂಬುದನ್ನೂ ತಲೆಕೆಡಿಸಿಕೊಳ್ಳದೆ ಫೀಲ್ಡ್​ಗಿಳಿದು ಬಿಟ್ಟಿದ್ದಾರೆ.

Vinay Bhat | news18
Updated:June 20, 2019, 7:35 PM IST
ಭಾರತ ವಿರುದ್ಧ ಹೀನಾಯ ಸೋಲು; ತನ್ನದೆ ಹೊಸ ತಂಡಕಟ್ಟಲು ಮುಂದಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್?
ಸರ್ಫರಾಜ್ ಅಹ್ಮದ್ ಹಾಗೂ ಇಮ್ರಾನ್ ಖಾನ್
  • News18
  • Last Updated: June 20, 2019, 7:35 PM IST
  • Share this:
ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತ ಬಳಿಕ ಭಾರೀ ಟೀಕೆಗಳಿಗೆ ಒಳಗಾಗಿದೆ. ಅಭಿಮಾನಿಗಳಂತೂ ಸಾಮಾಜಿಕ ತಾಣಗಳಲ್ಲಿ ಪಾಕ್ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬ್ಯಾನ್ ಮಾಡುವಂತೆ ಕೋರ್ಟ್​ಗೆ ಹೋದ ಘಟನೆಯೂ ನಡೆದಿದೆ. ಆದರೀಗ ಹೊಸ ವಿಚಾರ ಎಂದರೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್​ ಖಾನ್ ಸ್ವತಃ ಫೀಲ್ಡ್​​ಗೆ ಇಳಿದುಬಿಟ್ಟಿದ್ದಾರೆ.

ಭಾರತ ವಿರುದ್ಧ ಸೋತ ಬಳಿಕ ಕೆಲವರು ಪಾಕ್ ಪ್ರಧಾನಿ ಇಮ್ರಾನ್​ ಖಾನ್​ಗೆ ಮನವಿ ಮಾಡಿ.. ದಯವಿಟ್ಟು ಪಾಕಿಸ್ತಾನ ತಂಡವನ್ನ ಹೇಗಾದರು ಬದಲಾವಣೆ​​ ಮಾಡಿ ಎಂದು ಕೇಳಿಕೊಂಡಿದ್ದರು.

ದೇಶದಲ್ಲಿ ಕ್ರಿಕೆಟ್ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆಯುತ್ತಿದ್ದಂತೆ ಪಾಕ್​ ಪ್ರಧಾನಿ ಎಚ್ಚೆತ್ತುಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಏಕೈಕ ವಿಶ್ವಕಪ್​ ಗೆದ್ದುಕೊಟ್ಟಿರುವ ಮಾಜಿ ಆಟಗಾರ ಇಮ್ರಾನ್​ ಖಾನ್ ತಾನು ಪ್ರಧಾನಿ ಎಂಬುದನ್ನೂ ತಲೆಕೆಡಿಸಿಕೊಳ್ಳದೆ ಫೀಲ್ಡ್​ಗಿಳಿದು ಬಿಟ್ಟಿದ್ದಾರೆ.Cricket World Cup, AUS vs BAN: ಟಾಸ್ ಗೆದ್ದ ಆಸ್ಟ್ರೇಲಿಯಾ; ಬಾಂಗ್ಲಾ ತಂಡದಲ್ಲಿ ಪ್ರಮುಖ ಬದಲಾವಣೆ

ಯುವ ಬೌಲರ್​​​ಗಳನ್ನ, ಅವರ ವೇಗವನ್ನ, ಬೌಲಿಂಗ್ ಆ್ಯಕ್ಷನ್​​ ವೀಕ್ಷಿಸುತ್ತಿರುವ ಇಮ್ರಾನ್ ಖಾನ್​ ಯುವ ಆಟಗಾರರಿಗೆ ಬೌಲಿಂಗ್ ಟಿಪ್ಸ್ ನೀಡುತ್ತಿದ್ದಾರೆ​.

ಇಮ್ರಾನ್​ ಖಾನ್​ರ ಈ ದೀಢೀರ್​ ಕಾರ್ಯವನ್ನ ನೋಡಿ ಪಾಕ್​ನ ಕ್ರಿಕೆಟ್​ ಅಭಿಮಾನಿಗಳೇ ಒಮ್ಮೆಲೆ ಶಾಕ್ ಆಗಿ ಬಿಟ್ಟಿದ್ದಾರೆ. ಮುಂದಿನ ವಿಶ್ವಕಪ್​​ಗೆ ಇಮ್ರಾನ್ ಖಾನ್ ಏನಾದರೂ ಈಗಿನಿಂದಲೇ ತಂಡ ತಯಾರು ಮಾಡಲು ಫೀಲ್ಡ್​ಗಿಳಿದು ಬಿಟ್ಟಿದ್ದಾರಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
Imran khan selecting new Pakistan cricket team after defeat to India in cricket world Cup 2019?
ಇಮ್ರಾನ್ ಖಾನ್ (ಪಾಕಿಸ್ತಾನ ಪ್ರಧಾನ ಮಂತ್ರಿ)


ಒಟ್ಟಿನಲ್ಲಿ ಇಮ್ರಾನ್​ ಖಾನ್​ರ ಈ ನಡೆ ನೋಡಿದರೆ, ಈಗಿನಿಂದಲೇ ಮುಂಬರುವ ವಿಶ್ವಕಪ್​​ಗೆ ನೂತನ ತಂಡ ಕಟ್ಟುವ ರೀತಿ ಕಾಣುತ್ತಿದೆ.
First published: June 20, 2019, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading