India vs Pakistan: ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಕೊಹ್ಲಿ ಸೈನ್ಯ; ಬದ್ಧವೈರಿಗಳ ವಿರುದ್ಧ ಭಾರತ ಅಜೇಯ ಓಟ!

India vs Pakistan: 2017ರ ಚಾಂಪಿಯನ್​ಶಿಪ್​ ಟ್ರೋಫಿಯಲ್ಲಿ ಭಾರತ ತಂಡ ಪಾಕ್​ ವಿರುದ್ಧ ಸೋತಿತ್ತು. ಈ ಸೋಲಿಗೆ ವಿಶ್ವಕಪ್​ನಲ್ಲಿ ಕೊಹ್ಲಿ ಪಡೆ ಸೇಡು ತೀರಿಸಿಕೊಂಡಿದೆ.

Vinay Bhat | news18
Updated:June 17, 2019, 12:08 AM IST
India vs Pakistan: ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಕೊಹ್ಲಿ ಸೈನ್ಯ; ಬದ್ಧವೈರಿಗಳ ವಿರುದ್ಧ ಭಾರತ ಅಜೇಯ ಓಟ!
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ
  • News18
  • Last Updated: June 17, 2019, 12:08 AM IST
  • Share this:
ಬೆಂಗಳೂರು (ಜೂ. 16): ಮ್ಯಾಂಚೆಸ್ಟರ್​​ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್​ನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಡಕ್ವರ್ತ್​​ ನಿಯಮದ ಅನ್ವಯ 89 ರನ್​ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅವರ ಆಕರ್ಷಕ ಶತಕ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ ಕೊಹ್ಲಿ ಪಡೆ ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಅಜೇಯ ಗೆಲುವಿನ ಓಟ ಮುಂದುವರೆಸಿದೆ.

1992ರಿಂದ ಈವರೆಗೆ ವಿಶ್ವಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 6 ಪಂದ್ಯಗಳಲ್ಲಿ ಸೆಣಸಿವೆ. 6ಕ್ಕೆ ಆರೂ ಪಂದ್ಯಗಳಲ್ಲೂ ಟೀಂ ಇಂಡಿಯಾವೇ ಭರ್ಜರಿ ಜಯ ಸಾಧಿತ್ತು. ಸದ್ಯ ಈ ಬಾರಿಯ ವಿಶ್ವಕಪ್​ನಲ್ಲೂ ಭಾರತ ಗೆದ್ದಿದ್ದು, ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸೋಲೇಯಿಲ್ಲದಂತಾಗಿದೆ.​

ಟಾಸ್ ಸೋತು ಬ್ಯಾಟಿಂಗ್​ ಆರಂಭಿಸಿದ ಭಾರತ ಪರ ಓಪನರ್​ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಬಿರುಸಿನ ಆಟ ಪ್ರದರ್ಶಿಸುತ್ತಿದರು. ಪಾಕ್ ಬೌಲರ್​ಗಳ ಬೆಂಡೆತ್ತಿದ ಈ ಜೋಡಿ ಶತಕದ ಜೊತೆಯಾಟವಾಡಿತು. ಜೊತೆಗೆ ಇಬ್ಬರೂ ಅರ್ಧಶತಕ ಪೂರೈಸಿ ಮಿಂಚಿದರು.

ಆದರೆ ರಾಹುಲ್ 57 ರನ್ ಗಳಿಸಿ ಬಾಬರ್​​ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಮೂಲಕ ರೋಹಿತ್-ರಾಹುಲ್​ರ 136 ರನ್​ಗಳ ಅಮೋಘ ಜೊತೆಯಾಟ ಅಂತ್ಯವಾಯಿತು. ಜೊತೆಗೆ ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆರಂಭದಲ್ಲಿಯೇ 100 ರನ್​ ಗಳಿಸಿದ ವಿಶ್ವದ ಐದನೇ ಜೋಡಿ ಎಂಬುದು ರೋಹಿತ್​-ರಾಹುಲ್ ಬರೆದಿರುವ ದಾಖಲೆಯಾಯಿತು.

ನಂತರ ರೋಹಿತ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ರೋಹಿತ್ ಸ್ಪೋಟಕ ಆಟಕ್ಕೆ ಮುಂದಾದರೆ, ಕೊಹ್ಲಿ ಸಾತ್ ನೀಡಿದರು. ಅದರಂತೆ ಹಿಟ್​ಮ್ಯಾನ್​ ಏಕದಿನ ಕ್ರಿಕೆಟ್​ನಲ್ಲಿ 24ನೇ ಶತಕ ಬಾರಿಸಿದರು. ಈ ಬಾರಿ ಮತ್ತೆ ದ್ವಿಶತಕ ಬಾರಿಸುತ್ತಾರೆ ಎಂದು ಅಭಿಮಾನಿಗಳು ನಂಬಿಕೊಂಡಿದ್ದರು.

ಆದರೆ, 113 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ ಚಚ್ಚಿ ರೋಹಿತ್ 140 ರನ್​ಗೆ ಬ್ಯಾಟ್ ಕೆಳಗಿಟ್ಟರು. ಬಳಿಕ ಕೊಹ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ 19 ಎಸೆತಗಳಲ್ಲಿ 26 ರನ್ ಬಾರಿಸಿ ಔಟ್ ಆದರೆ, ಎಂ ಎಸ್ ಧೋನಿ ಕೇವಲ 1 ರನ್​ಗೆ ಬ್ಯಾಟ್ ಕೆಳಗಿಟ್ಟು ನಿರಾಸೆ ಮೂಡಿಸಿದರು.

ಈ ಮಧ್ಯೆ ಕೊಹ್ಲಿ ಏಕದಿನ ಕ್ರಿಕೆಟ್​​ನಲ್ಲಿ 51ನೇ ಅರ್ಧಶತಕ ಸಿಡಿಸಿ ದಾಖಲೆ ಬರೆದರು. ಅತಿ ವೇಗವಾಗಿ 11 ಸಾವಿರ ರನ್​ಗಳ ಗಡಿ ಮುಟ್ಟಿದ ಸಾಧನೆ ಮಾಡಿದರು. ಆದರೆ  46.4 ಓವರ್ ಆಗುವ ಹೊತ್ತಿಗೆ ಪಂದ್ಯಕ್ಕೆ ಮಳೆರಾಯ ಅಡ್ಡಿ ಪಡಿಸಿದ. ಮಳೆ ನಿಂತ ಬಳಿಕ ಮತ್ತೆ ಪಂದ್ಯ ಶುರುವಾಯಿತಾದರು ಭಾರತ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ಅರ್ಧಶತಕ ಬಾರಿಸಿದ್ದ ಕೊಹ್ಲಿ ಕೂಡ 77 ರನ್​ಗೆ ಔಟ್ ಆದರು.India vs Pakistan: ಕಿಂಗ್ ಕೊಹ್ಲಿಯಿಂದ ಸಚಿನ್​ರ ಮತ್ತೊಂದು ದಾಖಲೆ ಉಡೀಸ್

ಅಂತಿಮವಾಗಿ ಭಾರತ 50 ಓವರ್​ಗೆ 5 ವಿಕೆಟ್ ಕಳೆದುಕೊಂಡು 336 ರನ್ ಕಲೆಹಾಕಿತು. ಪಾಕ್ ಪರ ಮೊಹಮ್ಮದ್ ಅಮೀರ್ 3 ವಿಕೆಟ್ ಕಿತ್ತರೆ, ಹಸನ್ ಅಲಿ ಹಾಗೂ ವಹಾಬ್ ರಿಯಾಜ್ ತಲಾ 1 ವಿಕೆಟ್ ಪಡೆದರು.

ಕೊಹ್ಲಿ ಸೈನ್ಯ ನೀಡಿದ 337 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ಆಘಾತ ಅನುಭವಿಸಿತು. ವಿಜಯ್ ಶಂಕರ್ ಬೌಲಿಂಗ್​ನಲ್ಲಿ ಆರಂಭದಲ್ಲೇ ಇಮಾಮ್ ಉಲ್ ಹಖ್(7) ಎಲ್​ಗಿ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿಕೊಂಡರು.

ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಗಾಯಕ್ಕೊಳಗಾದ ಕಾರಣ ಮೈದಾನ ತೊರೆಯಬೇಕಾಯಿತು. ಬಳಿಕ ಓವರ್ ಪೂರ್ಣಗೊಳಿಸಲು ಬಂದ ಶಂಕರ್ ತನ್ನ ಚೊಚ್ಚಲ ವಿಶ್ವಕಪ್​ನ ಮೊದಲ ಎಸೆತದಲ್ಲೇ ಪಾಕ್​ನ ಮೊದಲ ವಿಕೆಟ್ ಕಿತ್ತರು.

India vs Pakistan: Vijay Shankar joins elite list with wicket off first ball in World Cups
ವಿಜಯ್ ಶಂಕರ್


ಬಳಿಕ 2ನೇ ವಿಕೆಟ್​ಗೆ ಫಖರ್ ಜಮಾನ್ ಜೊತೆಯಾದ ಬಾಬರ್ ಅಜಂ ಉತ್ತಮ ಜೊತೆಯಾಟ ಆಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ 104 ರನ್​ಗಳ ಕಾಣಿಕೆ ನೀಡಿತು. ಈ ಸಂದರ್ಭ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ಇಬ್ಬರು ಸೆಟ್ ಬ್ಯಾಟ್ಸ್​ಮನ್​ಗಳು​ ಬಲಿಯಾಗಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಎಂಬಂತಾಗಿದೆ.

48 ರನ್ ಗಳಿಸಿದ್ದ ಬಾಬರ್ ಅಜಂ ಕುಲ್ದೀಪ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರೆ, ಇತ್ತ ಅರ್ಧಶತಕ ಬಾರಿಸಿ ಬ್ಯಾಟ್ ಬೀಸುತ್ತದ್ದ ಫಖರ್ ಜಮಾನ್ ಕೂಡ 68 ರನ್ ಗಳಿಸಿ ಕುಲ್ದೀಪ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ಬೌಲಿಂಗ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ ತನ್ನ ಕೊನೆಯ ಎರಡು ಎಸೆತದಲ್ಲಿ ಪಾಕ್​ನ ಪ್ರಮುಖ ಎರಡು ವಿಕೆಟ್ ಕಿತ್ತರು. ಮೊಹಮ್ಮದ್ ಹಫೀಜ್ 9 ರನ್​ಗೆ ಔಟ್ ಆದರೆ, ತನ್ನ ಮುಂದಿನ ಎಸೆತದಲ್ಲೇ ಅನುಭವಿ ಶೋಯೆಬ್ ಮಲಿಕ್​ರನ್ನು ಕ್ಲೀನ್ ಬೌಲ್ಡ್​ ಮಾಡಿ ಶಾಕ್ ನೀಡಿದ್ದಾರೆ.

ನಾಯಕ ಸರ್ಫರಾಜ್ ಅಹ್ಮದ್ ಕೂಡ ತಂಡಕ್ಕೆ ಆಸರೆಯಾಗದೆ 30 ಎಸೆತಗಳಲ್ಲಿ 12 ರನ್ ಗಳಿಸಿ ಶಂಕರ್ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ಈ ಸಂದರ್ಭ 35 ಓವರ್​ಗೆ ಪಾಕಿಸ್ತಾನ 6 ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಿರುವಾಗ ಮಳೆರಾಯನ ಆಗಮನವಾಯಿತು. ಹೀಗಾಗಿ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು. ಬಳಿಕ ಡಕ್ವರ್ತ್​ ನಿಯಮದ ಅನ್ವಯ ಪಂದ್ಯವನ್ನು 40 ಓವರ್​ಗೆ ಸೀಮಿತ ಗೊಳಿಸಲಾಯಿತು. ಇದರ ಪ್ರಕಾರ  ಪಾಕ್​ಗೆ ಗೆಲ್ಲಲು 5 ಓವರ್​ಗಳಲ್ಲಿ 136 ರನ್​ಗಳ ಟಾರ್ಗೆಟ್ ನೀಡಲಾಯಿತು.

 



ಆದರೆ, ಈ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟುವಲ್ಲಿ ವಿಫಲವಾದ ಪಾಕ್ 30 ಎಸೆತಗಳಲ್ಲಿ ಕೇವಲ 46 ರನ್ ಬಾರಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಇಮಾದ್ ವಾಸಿಮ್ 46 ರನ್​ಗಳ ಹೋರಾಟ ನಡೆಸಿದರಾದರು ಉಪಯೋಗವಾಗಿಲ್ಲ. ಅಂತಿಮವಾಗಿ ಪಾಕ್ ನಿಗದಿತ 40 ಓವರ್​ಗೆ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಭಾರತ ಪರ ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರು.

89 ರನ್​ಗಳ ಭರ್ಜರಿ ಗೆಲುವಿನ ಮೂಲಕ ಭಾರತ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಜೊತೆಗೆ 2017ರ ಚಾಂಪಿಯನ್​ಶಿಪ್​ ಟ್ರೋಫಿಯಲ್ಲಿ ಭಾರತ ತಂಡ ಪಾಕ್​ ವಿರುದ್ಧ ಸೋತಿತ್ತು. ಈ ಸೋಲಿಗೆ ವಿಶ್ವಕಪ್​ನಲ್ಲಿ ಕೊಹ್ಲಿ ಪಡೆ ಸೇಡು ತೀರಿಸಿಕೊಂಡಿದೆ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಈ ಬಾರಿಯ ವಿಶ್ವಕಪ್​​ನಲ್ಲಿ ಭಾರತ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಭರ್ಜರಿ ಜಯ ಸಾಧಿಸಿದರೆ, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ 7 ಅಂಕದೊಂದಿಗೆ 2ನೇ ಸ್ಥಾನಕ್ಕೇರಿದೆ. ಇತ್ತ ಪಾಕಿಸ್ತಾನ ಆಡಿರುವ 4 ಪಂದ್ಯಗಳಲ್ಲಿ ಕೇವಲ ಒಂದನ್ನು ಗೆದ್ದರೆ, ಮೂರು ಪಂದ್ಯ ಸೋಲುಂಡಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿ 3 ಅಂಕದೊಂದಿಗೆ 9ನೇ ಸ್ಥಾನದಲ್ಲಿದೆ.

 

First published: June 17, 2019, 12:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading