ನೀವೇಕೆ ಹಂದಿಯಂತೆ ದಪ್ಪಗಿದ್ದೀರಾ?: ಪಬ್ಲಿಕ್​ನಲ್ಲೇ ಪಾಕ್ ನಾಯಕನನ್ನು ಜರಿದ ಅಭಿಮಾನಿ

ಅಭಿಮಾನಿ ಪಾಕ್ ನಾಯಕನನ್ನು ನಿಂದಿಸಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಯ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

Vinay Bhat | news18
Updated:June 24, 2019, 11:57 AM IST
ನೀವೇಕೆ ಹಂದಿಯಂತೆ ದಪ್ಪಗಿದ್ದೀರಾ?: ಪಬ್ಲಿಕ್​ನಲ್ಲೇ ಪಾಕ್ ನಾಯಕನನ್ನು ಜರಿದ ಅಭಿಮಾನಿ
ಸರ್ಫರಾಜ್ ಅಹ್ಮದ್
  • News18
  • Last Updated: June 24, 2019, 11:57 AM IST
  • Share this:
ಬೆಂಗಳೂರು (ಜೂ. 22): ಈ ಬಾರಿಯ ವಿಶ್ವಕಪ್​​ನಲ್ಲೂ ಪಾಕಿಸ್ತಾನ ತಂಡ ಬಾರತ ವಿರುದ್ಧ ಸೋಲುಂಡಿದ್ದು, ತನ್ನ ಕೆಟ್ಟ ದಾಖಲೆಯನ್ನು ಮುಂದುವರೆಸಿದೆ. ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತ ಬಳಿಕ ಭಾರೀ ಟೀಕೆಗಳಿಗೆ ಒಳಗಾಗಿದೆ. ಅಭಿಮಾನಿಗಳಂತೂ ಸಾಮಾಜಿಕ ತಾಣಗಳಲ್ಲಿ ಪಾಕ್ ವಿರುದ್ಧ ಸಿಡಿದೆದ್ದಿದ್ದರು. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬ್ಯಾನ್ ಮಾಡುವಂತೆ ಕೋರ್ಟ್​ಗೆ ಹೋದ ಘಟನೆಯೂ ನಡೆದಿತ್ತು.

ಇದೀಗ ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್​ರನ್ನು ದೂಷಿಸಲಾಗುತ್ತಿದೆ. ಪಾಕಿಸ್ತಾನ ಅಭಿಮಾನಿಯೊಬ್ಬ ಸಾರ್ವಜನಿಕವಾಗಿ ಸರ್ಫರಾಜ್​ರನ್ನು ಅವಮಾನಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಸರ್ಫರಾಜ್ ತನ್ನ ಮಗನೊಂದಿಗೆ ಮಾಲ್​​ಗೆ ಹೋದಾಗ ಈ ಘಟನೆ ನಡೆದಿದೆ. ಅಭಿಮಾನಿ ಸರ್ಫರಾಜ್​ ಬಳಿ ಸೆಲ್ಫಿಗೆ ಪೋಸ್ ನೀಡಲು ಕೇಳಿದ್ದಾರೆ. ಆದರೆ, ಜೊತೆಯಲ್ಲಿ ಮಗು ಇದ್ದ ಕಾರಣ ಸರ್ಫರಾಜ್​ ಫೋಟೋಕ್ಕೆ ನಿರಾಕರಿಸಿದ್ದರೆ. ಇದರಿಂದ ಕೋಪಗೊಂಡ ಅಭಿಮಾನಿ ನೀವೇಕೆ ಹಂದಿಯಂತೆ ಕೊಬ್ಬಿನಿಂದ ದಪ್ಪಗಿದ್ದೀರಾ ಎಂದು ನಿಂದಿಸಿದ್ದಾರೆ. ಆದರೆ ಇದಕ್ಕೆ ಸರ್ಫರಾಜ್ ಯಾವುದೇ ಪ್ರತ್ಯುತ್ತರ ನೀಡದೆ ಮೌನದಿಂದ ತೆರಳಿದ್ದಾರೆ.

Cricket World Cup, IND vs AFG: ಕ್ರಿಕೆಟ್ ಶಿಶುಗಳೆದರು ಮಂಕಾದ ಕೊಹ್ಲಿ ಪಡೆ; ಅಫ್ಘಾನ್​​ಗೆ 225 ಟಾರ್ಗೆಟ್

 Sarfraz Ahmed
ಸರ್ಫರಾಜ್ ಅಹ್ಮದ್ (ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ)


ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಯ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ತನ್ನದೇ ದೇಶದ ಕ್ರೀಡಾಪಟುವನ್ನು ಅದರಲ್ಲು ಸಾರ್ವಜನಿಕವಾಗಿ ಈರೀತಿ ಅವಮಾನಿಸುವುದು ತಪ್ಪು ಎಂಬ ಕಮೆಂಟ್​ಗಳು ಬರುತ್ತಿವೆ.

ತನ್ನ ಹೇಳಿಕೆಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗುವುದನ್ನು ಮನಗಂಡು ಸದ್ಯ ಅಭಿಮಾನಿ ಸರ್ಫರಾಜ್​​ ಜೊತೆ ಕ್ಷಮೆಯಾಚಿಸಿದ್ದಾರೆ.

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದ ವೇಳೆ ಲವ್ ಪ್ರಪೋಸ್; ಲಿಪ್-ಲಾಕ್ ವಿಡಿಯೋ ಫುಲ್ ವೈರಲ್!

 

First published: June 22, 2019, 7:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading