HOME » NEWS » Sports » CRICKET INDIA VS PAKISTAN CLARKE WONDERS ABOUT LACK OF SUPPORT FOR PAKISTAN SOURAV GANGULY GIVES BRUTAL RESPONSE

ಕಾಸ್ಟ್ಲಿ ಟಿಕೆಟ್...ಕಾಮೆಂಟರಿ ಮೂಲಕ ಪಾಕಿಸ್ತಾನದ ಕಾಲೆಳೆದ ಸೌರವ್ ಗಂಗೂಲಿ..!

Michael clarke and Sourav ganguly: ಇನ್ನು ಈ ಪಂದ್ಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಟೀಂ ಇಂಡಿಯಾದ ದಿಗ್ಗಜ ಮಾಜಿ ಕಪ್ತಾನ ಸೌರವ್​ ಗಂಗೂಲಿ ಸಹ ಪರೋಕ್ಷವಾಗಿ ಪಾಕಿಗಳ ಕಾಲೆಳೆದು ಗಮನ ಸೆಳೆದರು.

zahir | news18
Updated:June 17, 2019, 4:54 PM IST
ಕಾಸ್ಟ್ಲಿ ಟಿಕೆಟ್...ಕಾಮೆಂಟರಿ ಮೂಲಕ ಪಾಕಿಸ್ತಾನದ ಕಾಲೆಳೆದ ಸೌರವ್ ಗಂಗೂಲಿ..!
michael clarke and sourav ganguly
  • News18
  • Last Updated: June 17, 2019, 4:54 PM IST
  • Share this:
ಭಾನುವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬ್ಲೂ ಬಾಯ್ಸ್​ ಭರ್ಜರಿ ಜಯದೊಂದಿಗೆ ಕೇಕೆ ಹಾಕಿದೆ. ಟೀಂ ಇಂಡಿಯಾ ನೀಡಿದ 337 ರನ್​ಗಳ ಸವಾಲನ್ನು ಬೆನ್ನತ್ತಿದ್ದ ಸರ್ಫರಾಜ್ ಪಡೆ ಡರ್ಕ್​ವರ್ತ್​ ರೂಲ್ಸ್​ ಪ್ರಕಾರ 89 ರನ್​ಗಳ ಹೀನಾಯ ಸೋಲನುಭವಿಸಿತು.

ಇನ್ನು ಈ ಪಂದ್ಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಟೀಂ ಇಂಡಿಯಾದ ದಿಗ್ಗಜ ಮಾಜಿ ಕಪ್ತಾನ ಸೌರವ್​ ಗಂಗೂಲಿ ಸಹ ಪರೋಕ್ಷವಾಗಿ ಪಾಕಿಗಳ ಕಾಲೆಳೆದು ಗಮನ ಸೆಳೆದರು. ತೀವ್ರ ಹಣಾಹಣಿ ನಿರೀಕ್ಷಿಸಲಾಗಿದ್ದ ಈ ಪಂದ್ಯದ ಟಿಕೆಟ್ ಒಂದೇ ದಿನದಲ್ಲಿ ಸೇಲ್ ಆಗಿತ್ತು. ಹೀಗಾಗಿ ಪ್ರೇಕ್ಷಕರ ಗ್ಯಾಲರಿಯು ತುಂಬಿ ತುಳುಕುತ್ತಿತ್ತು.

ಇದನ್ನು ಪ್ರಸ್ತಾಪಿಸಿ, ಎಲ್ಲೆಲ್ಲೂ ಬ್ಲೂ ಜೆರ್ಸಿಗಳೇ, ಎಲ್ಲರ ಕೈಯಲ್ಲೂ ಭಾರತದ ಧ್ವಜಗಳೇ ಕಾಣುತ್ತಿದೆ. ಆದರೆ ಹಸಿರು ಪತಾಕೆ ಕಡಿಮೆ ಸಂಖ್ಯೆಯಲ್ಲಿ ಕಾಣಿಸುತ್ತಿದೆ ಎಂದು ಕಮೆಂಟೆಟರ್ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಗಂಗೂಲಿಗೆ ಹೇಳಿದ್ದರು. ಇದೇ ವೇಳೆ ಕ್ಲಾರ್ಕ್​ ಪಕ್ಕದಲ್ಲಿ ಕೂತಿದ್ದ ಗಂಗೂಲಿ ಟಿಕೆಟ್ ದುಬಾರಿ ಆಗಿರಬಹುದು ಎಂದು ಥಟ್ ಅಂತ ಮರುತ್ತರ ನೀಡಿದ್ದರು.

ಪರೋಕ್ಷವಾಗಿ ಪಾಕ್​ ಅನ್ನು ಕಾಲೆಳೆದ ದಾದಾ, ಟಿಕೆಟ್ ಬೆಲೆ ದುಬಾರಿ ಆಗಿರುವುದರಿಂದ ಟೀಂ ಇಂಡಿಯಾ ಅಭಿಮಾನಿಗಳೇ ಪ್ರೇಕ್ಷಕರ ಗ್ಯಾಲರಿಯಲ್ಲಿ ರಾರಾಜಿಸುತ್ತಿದ್ದಾರೆ ಎಂಬ ಉತ್ತರ ನೀಡಿದ್ದರು. ಗಂಗೂಲಿ ಹೇಳಿದ ಥಟ್ ಉತ್ತರವನ್ನು ಕೇಳಿದ ಅಭಿಮಾನಿಗಳು ಆ ಕಾಮೆಂಟರಿ ಚಾಟ್ ಅನ್ನು ವೈರಲ್ ಮಾಡಿದ್ದಾರೆ.
ಈ ಪೋಸ್ಟ್​ಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮೈದಾನದಲ್ಲಿದ್ದಾಗಲೂ ಗಂಗೂಲಿ ಪಾಕ್ ತಂಡದ ಬೆವರಿಳಿಸಿದ್ದರು. ಮೈದಾನದ ಹೊರಗೂ ಅದೇ ಕಾಯಕವನ್ನು ಮುಂದುವರೆಸಿದ್ದಾರೆ. ಪಾಕ್ ತಂಡದ ಭಾರತದ ವಿರುದ್ಧ 7ನೇ ವಿಶ್ವಕಪ್ ಸೋಲಿಗೆ ದಾದಾ ಪಂಚಿಂಗ್ ಆನ್ಸರ್ ಈ ಬಾರಿ ಉಚಿತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ಫ್ಯಾನ್ಸ್​ನ್ನು ಕೆಣಕಲಾಗುತ್ತಿದೆ.ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ಟೀಂ ಇಂಡಿಯಾ ಆಟಗಾರರು ಮುಂದಿನ ಪಂದ್ಯವನ್ನು ಜೂನ್ 22 ರಂದು ಅಫ್ಘಾನಿಸ್ತಾನದ ವಿರುದ್ಧ ಆಡಲಿದ್ದು, ಮತ್ತೊಂದು ಗೆಲುವಿನ ಮೂಲಕ ವರ್ಲ್ಡ್​ಕಪ್ ಬೇಟೆಯನ್ನು ಮುಂದುವರೆಸುವ ಇರಾದೆಯಲ್ಲಿದೆ ಕೊಹ್ಲಿ ಪಡೆ.

ಇದನ್ನೂ ಓದಿ: IND vs PAK: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವ್ಯಂಗ್ಯ ಮಾಡಿದ್ದು ಯಾರನ್ನು? ಇಲ್ಲಿದೆ ಉತ್ತರ
First published: June 17, 2019, 4:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories