India vs Pakistan Asia cup 2022: ಕ್ರಿಕೆಟ್ ಫೀಲ್ಡ್​ನಲ್ಲಿ ವಿಜಯ್​ ದೇವರಕೊಂಡ; ವಿರಾಟ್ ಕೊಹ್ಲಿಯೇ ರಿಯಲ್​ ಸೂಪರ್​ ಸ್ಟಾರ್​ ಎಂದ ರೌಡಿ ಸ್ಟಾರ್​​

ಆ್ಯಂಕರ್​ ರೀತಿ ಕಣ್ಣಿಸಿಕೊಂಡ ವಿಜಯ್​ ದೇವರಕೊಂಡ ಅವರನ್ನು ಕಂಡ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಇದೇ ವೇಳೆ ವಾಸಿಂ ವಿರುದ್ಧ ಬ್ಯಾಟಿಂಗ್ ಮಾಡುವ ಕನಸನ್ನು ವಿಜಯ್ ದೇವರಕೊಂಡ ಹೇಳಿಕೊಂಡಿದ್ದಾರೆ.

ವಿಜಯ್​ ದೇವರಕೊಂಡ, ಇರ್ಫಾನ್​ ಪಠಾನ್

ವಿಜಯ್​ ದೇವರಕೊಂಡ, ಇರ್ಫಾನ್​ ಪಠಾನ್

  • Share this:
ಏಷ್ಯಾ ಕಪ್​ 2022ರ (Asia Cup 2022) 15ನೇ ಆವೃತ್ತಿಯು ಈ ಬಾರಿ ದುಬೈ ನಲ್ಲಿ (Dubai) ನಡೆಯುತ್ತಿದೆ. ಟೂರ್ನಿಯ 2ನೇ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ (India vs Pakistan) ಮ್ಯಾಚ್​ ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯ ನೋಡಲು ದುಬೈಗೆ ತೆರಳಿರೋ ನಟ ವಿಜಯ್​ ದೇವರಕೊಂಡ, ಕ್ರಿಕೆಟ್ ಫೀಲ್ಡ್​ನಲ್ಲಿ ಆ್ಯಂಕರ್ ರೂಪದಲ್ಲಿ ಕಾಣಿಸಿಕೊಂಡು ಎಲ್ಲರನ್ನು ಬೆರಗುಗೊಳಿಸಿದ್ರು. 

ಕ್ರಿಕೆಟ್ ಫೀಲ್ಡ್​ನಲ್ಲಿ ವಿಜಯ್​ ದೇವರಕೊಂಡ

ಆ್ಯಂಕರ್​ ರೀತಿ ಕಣ್ಣಿಸಿಕೊಂಡ ವಿಜಯ್​ ದೇವರಕೊಂಡ ಅವರನ್ನು ಕಂಡ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಇದೇ ವೇಳೆ ವಾಸಿಂ ವಿರುದ್ಧ ಬ್ಯಾಟಿಂಗ್ ಮಾಡುವ ಕನಸನ್ನು ವಿಜಯ್ ದೇವರಕೊಂಡ ತೆರೆದಿಟ್ಟಿದ್ದಾರೆ.ವಿಜಯ್  ದೇವರಕೊಂಡ, “ಒಂದು ದಿನ ನೀವು ನನಗೆ ಬೌಲ್ ಮಾಡುತ್ತೀರಿ ಮತ್ತು ನಾನು ವೇಗವಾಗಿ ಬ್ಯಾಟಿಂಗ್​ ಮಾಡುತ್ತೇನೆ  ಎಂದು ಅಮರ್ ಉಜಾಲಾ ಮೂಲಕ ವಾಸಿಮ್‌ಗೆ ಹೇಳಿದ್ರು.  ವಾಸಿಂ ಮತ್ತು ವಕಾರ್ ಯೂನಿಸ್ ಅವರ ಬೌಲಿಂಗ್‌ನಿಂದ ನಾನು ಭಯಗೊಂಡಿದ್ದೆ ಎಂದು ಹೇಳಿದ್ರು.

ವಿರಾಟ್ ನಿಜವಾದ ಸೂಪರ್‌ಸ್ಟಾರ್​

ವಿರಾಟ್ ಕೊಹ್ಲಿ ಅವರ 100ನೇ ಪಂದ್ಯದ ಬಗ್ಗೆ ಮಾತನಾಡಿದ ವಿಜಯ್, ನಾನು ಮೈದಾನಕ್ಕೆ ಬಂದಾಗ ಜನರು ವಿರಾಟ್ ಕೊಹ್ಲಿಯನ್ನು ಹುರಿದುಂಬಿಸುತ್ತಿದ್ದ ರೀತಿ ನೋಡಿ ನಾನು ಎಲ್ಲಿದ್ದೇನೆ ಎಂದು ನನಗೆ ಅರ್ಥವಾಗಲಿಲ್ಲ. ನಾನು ನನ್ನನ್ನು ಸೂಪರ್‌ಸ್ಟಾರ್ ಎಂದು ಪರಿಗಣಿಸುತ್ತಿದ್ದೆ, ಆದರೆ ವಿರಾಟ್ ನಿಜವಾದ ಸೂಪರ್‌ಸ್ಟಾರ್, ಅವರು 100 ನೇ ಟಿ20 ಆಡುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ರು.


ಇರ್ಫಾನ್ ಜೊತೆ ವಿಜಯ್​ ದೇವರಕೊಂಡ

ಇದಲ್ಲದೆ, ವಿಜಯ್ ಮತ್ತು ಇರ್ಫಾನ್ ಬಸ್‌ನಲ್ಲಿ ಇರುವ ಚಿತ್ರವೂ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಜಯ್ ತಮ್ಮ ಹೊಸ ಚಿತ್ರ ಲಿಗರ್ ನ ಪ್ರಚಾರದ ಭಾಗವಾಗಿ ಏಷ್ಯಾ ಕಪ್ ನಲ್ಲಿ ಭಾಗವಹಿಸಿದ್ದರು.


View this post on Instagram


A post shared by yogen shah (@yogenshah_s)


ಮೊದಲ ದಿನವೇ ನೆಗೆಟಿವ್ ಟಾಕ್


ರೌಡಿ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಚಿತ್ರ ಲೈಗರ್, ಚಿತ್ರದಲ್ಲಿ ಬಾಲಿವುಡ್ ಬೆಡಗಿ ಅನನ್ಯಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಒಳ್ಳೆಯ ನಿರೀಕ್ಷೆಗಳ ನಡುವೆ ಚಿತ್ರ ಆಗಸ್ಟ್ 25 ರಂದು ಬಿಡುಗಡೆಯಾಗಿದೆ. ಆದರೆ ಈ ಚಿತ್ರಕ್ಕೆ ಮೊದಲ ದಿನವೇ ನೆಗೆಟಿವ್ ಟಾಕ್ ಸಿಕ್ಕಿದೆ. ಚಿತ್ರವು ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಲಿಲ್ಲ. ಸಿನಿಮಾ ನೋಡಿದ ಅನೇಕರಿಗೆ ನಿರಾಸೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಫ್ಲಾಪ್ ಆಗಿದೆ ಎಂದು ಟ್ರೆಂಡ್ ಆಗಿದೆ.


ಅಭಿಮಾನಿಗಳಲ್ಲಿ ನಿರಾಸೆ

Published by:Pavana HS
First published: