Ind vs Pak Asia Cup 2022: ಕ್ಷಣಾರ್ಧದಲ್ಲಿ ಪಾಕ್ ಲೆಕ್ಕಾಚಾರ ಉಲ್ಟಾ ಮಾಡಿದ ಪಾಂಡ್ಯ, ಟೀಂ ಇಂಡಿಯಾದಲ್ಲಿ ಗೆಲುವಿನ ಸಂಭ್ರಮ!

India vs Pakistan: ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಲ್ ರೌಂಡ್ ಪ್ರದರ್ಶನ ನೀಡಿದ್ದಾರೆ. ಅವರು ಪಂದ್ಯದಲ್ಲಿ 3 ವಿಕೆಟ್‌ಗಳೊಂದಿಗೆ ಅಜೇಯ 33 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಒಂದೇ ಹೊಡೆತದಲ್ಲಿ ಸೋಲುವ ಹಂತದಲ್ಲಿದ್ದ ತಂಡದಲ್ಲಿ ಗೆಲುವಿನ ನಗೆ ಬೀರುವಂತೆ ಮಾಡಿದ್ದಾರೆ. ಟೀಂ ಇಂಡಿಯಾ ಮೇಲಿನ ಒತ್ತಡವನ್ನು ತೆಗೆದು ಹಾಕಿದ್ದಾರೆ. ಈ ಮೂಲಕ ತಾನು ಓರ್ವ ಅತಿದೊಡ್ಡ ಹೋರಾಟಗಾರ ಎಂದು ಸಾಬೀತುಪಡಿಸಿದ್ದಾರೆ.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

  • Share this:
ಏಷ್ಯಾಕಪ್‌ನ (Asia Cup 2022) ಮೊದಲ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಪಾಕಿಸ್ತಾನವನ್ನು (Pakistan) ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ ಟಿ20 ವಿಶ್ವಕಪ್ 2021ನಲ್ಲಿ ಎದುರಿಸಿದ ಸೋಲಿಗೆ ತಿರುಗೇಟು ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ (Hardik Pandya) ಟೀಂ ಇಂಡಿಯಾದ ದೊಡ್ಡ ಫೈಟರ್ ಎಂಬುದನ್ನು ಸಾಬೀತುಪಡಿಸಿದರು. ಆರಂಭದಲ್ಲಿ ಬೌಲಿಂಗ್ ಮೂಲಕ 3 ವಿಕೆಟ್‌ ಕಬಳಿಸಿದ ಅವರು ಪಾಕಿಸ್ತಾನಕ್ಕೆ ಭಾರೀ ಹೊಡೆತ ನೀಡಿದ್ದಾರೆ, ಬಳಿಕ ಭರ್ಜರಿ ಬ್ಯಾಟಿಂಗ್ ಮೂಲಕ ಸೋಲುವ ಹಂತದಲ್ಲಿದ್ದ ಭಾರತವನ್ನು ಗೆಲುವಿನ ನಗೆ ಬೀರುವಂತೆ ಮಾಡಿದ್ದಾರೆ. ಪಂದ್ಯದಲ್ಲಿ 3 ವಿಕೆಟ್‌ಗಳ ಜೊತೆಗೆ 17 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿದರು. ಈ ಕಾರಣಕ್ಕಾಗಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಗಾಯಾಳುವಾಗಿದ್ದ 28ರ ಹರೆಯದ ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡು ಮೈದಾನಕ್ಕೆ ಮರಳಿದಾಗಿನಿಂದ, ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಚಾರದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದ್ಭುತ ನಾಯಕತ್ವದ ಮೂಲಕ ತಂಡವನ್ನೂ ಮುನ್ನಡೆಸಿದ್ದಾರೆ. ಅಂದರೆ, ಪ್ರತಿ ಪಾತ್ರದಲ್ಲೂ ಅವರು ಫಿಟ್ ಆಗಿ, ಭರ್ಜರಿ ಆಟ ಆಡುತ್ತಿದ್ದಾರೆ. ಅವರ ಪ್ರದರ್ಶನ ಏಷ್ಯಾಕಪ್ ಮಾತ್ರವಲ್ಲದೆ, ಟಿ20 ವಿಶ್ವಕಪ್‌ನಲ್ಲೂ ಟೀಮ್ ಇಂಡಿಯಾದ ನಿರೀಕ್ಷೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: IND vs PAK: ಟೀಂ ಇಂಡಿಯಾ ಗೆಲುವಿಗಾಗಿ ಕ್ರಿಕೆಟ್ ಭಕ್ತರ ಪೂಜೆ, ಗೆದ್ದು ಬಾ ಭಾರತ ಅಂತ ಮಂದಿರ-ಮಸೀದಿಗಳಲ್ಲಿ ಪ್ರಾರ್ಥನೆ!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಔಟಾದ ನಂತರ ಹಾರ್ದಿಕ್ ಬ್ಯಾಟಿಂಗ್‌ ಮಾಡಲು ಬಂದಿದ್ದರು. ಆಗ ಭಾರತದ ಸ್ಕೋರ್ 4 ವಿಕೆಟ್‌ಗೆ 89 ಆಗಿತ್ತು. ಭಾರತದ ಗೆಲುವಿಗೆ 36 ಎಸೆತಗಳಲ್ಲಿ 59 ರನ್‌ಗಳ ಅಗತ್ಯವಿತ್ತು. ಅಂದರೆ, ಪ್ರತಿ ಓವರ್‌ಗೆ 10 ರನ್ ಗಳಿಸಬೇಕಾಗಿತ್ತು, ಆದರೆ ಪಾಕಿಸ್ತಾನದ ಬೌಲಿಂಗ್ ಅಂತಹುದ್ದೊಂದು ರೋಚಕ ಪ್ರದರ್ಶನ ನೀಡುವುದು ಬಹಳ ಕಷ್ಟಕರವಾಗಿತ್ತು. ಆದರೆ, ಈ ಸಂದರ್ಭದಲ್ಲಿ ಬುದ್ಧಿವಂತಿಕೆ ಉಪಯೋಗಿಸಿದ ಹಾರ್ದಿಕ್ ಮೊದಲ 2 ಓವರ್‌ಗಳಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಕೆಟ್ಟ ಎಸೆತಗಳನ್ನು ಮಾತ್ರ ಹೊಡೆಯಲು ಪ್ರಯತ್ನಿಸಿದರು. ಅವರ ಈ ಪ್ಲಾನಿಂಗ್​ ಭಾರತಕ್ಕೆ ಗೆಲುವು ತಂದುಕೊಟ್ಟಿದೆ.

ಕೇವಲ 2 ಓವರ್‌ಗಳಲ್ಲಿ ಆಟವನ್ನೇ ಬದಲಾಯಿಸಿದ ಪಾಂಡ್ಯ

ಜಡೇಜಾ ಜೊತೆಗೂಡಿ ಹಾರ್ದಿಕ್ 18ನೇ ಓವರ್‌ನಲ್ಲಿ ಭಾರತದ ಸ್ಕೋರ್ ಅನ್ನು 127 ರನ್‌ಗಳಿಗೆ ಕೊಂಡೊಯ್ದರು. ಈಗ ಕೊನೆಯ 12 ಎಸೆತಗಳಲ್ಲಿ 21 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ಹ್ಯಾರಿಸ್ ರೌಫ್ ಬೌಲಿಂಗ್ ಮಾಡಲು ಬಂದರು. ಆದರೆ ಹಾರ್ದಿಕ್ ಅದೇ ಓವರ್‌ನಲ್ಲಿ ತಮ್ಮ ಆಟ ಬದಲಾಯಿಸಿದರು ಮತ್ತು ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ ಪಂದ್ಯವನ್ನು ಭಾರತದ ಪರ ಮಾಡಿದರು. ಹ್ಯಾರಿಸ್ ಅವರ ಈ ಓವರ್‌ನಲ್ಲಿ ಭಾರತ 14 ರನ್ ಗಳಿಸಿತು. ಇನ್ನು ಕೊನೆಯ 6 ಎಸೆತಗಳಲ್ಲಿ ಭಾರತದ ಗೆಲುವಿಗೆ 7 ರನ್‌ಗಳ ಅಗತ್ಯವಿತ್ತು. ಆದರೆ, ರವೀಂದ್ರ ಜಡೇಜಾ ಮೊದಲ ಎಸೆತದಲ್ಲೇ ಔಟಾದರು. ಮತ್ತೆ ಪಂದ್ಯ ಭಾರತಕ್ಕೆ ಟೆನ್ಶನ್ ಕೊಟ್ಟಿತ್ತು. ಮುಂದಿನ 2 ಎಸೆತಗಳಲ್ಲಿ ಭಾರತ 1 ರನ್ ಗಳಿಸಿತು. ಆದರೆ, ನಾಲ್ಕನೇ ಎಸೆತದಲ್ಲಿ ಧೋನಿ ಶೈಲಿಯಲ್ಲಿ ಹಾರ್ದಿಕ್ ಸಿಕ್ಸರ್ ಬಾರಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು.ಹಾರ್ದಿಕ್ ಬೌನ್ಸರ್ ಅನ್ನು ಚೆನ್ನಾಗಿ ಬಳಸಿಕೊಂಡರು

ಇದಕ್ಕೂ ಮುನ್ನ ಹಾರ್ದಿಕ್ ಬೌಲಿಂಗ್ ಕೂಡ ಅದ್ಭುತವಾಗಿತ್ತು. ಅವರು ತಮ್ಮ ಕೋಟಾದ ಸಂಪೂರ್ಣ 4 ಓವರ್‌ಗಳನ್ನು ಬೌಲ್ ಮಾಡಿದರು. ಆದರೆ, ಕೊನೆಯ ಓವರ್‌ನಲ್ಲಿ, ಈ ಆಲ್‌ರೌಂಡರ್ ತಮ್ಮ ಅಪಾಯಕಾರಿ ಆಟದಿಂದ ಮೊಹಮ್ಮದ್ ರಿಜ್ವಾನ್ ಮತ್ತು ಖುಶ್ದಿಲ್ ಶಾ ಅವರನ್ನು ಔಟ್ ಮಾಡಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದರು. ಹಾರ್ದಿಕ್ ತಮ್ಮ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಮೊಹಮ್ಮದ್ ರಿಜ್ವಾನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. 42 ಎಸೆತಗಳಲ್ಲಿ 43 ರನ್ ಗಳಿಸಿದ್ದ ರಿಜ್ವಾನ್ ವಿಕೆಟ್ ಭಾರತಕ್ಕೆ ಪ್ರಮುಖವಾಗಿತ್ತು, ಅವರು ಕೊನೆಯವರೆಗೂ ಕ್ರೀಸ್ ನಲ್ಲಿ ಉಳಿದಿದ್ದರೆ ಪಾಕಿಸ್ತಾನ ತಂಡಕ್ಕೆ ದೊಡ್ಡ ಸ್ಕೋರ್ ತಂದುಕೊಡುತ್ತಿದ್ದರು.

ಇದನ್ನೂ ಓದಿ: Asia Cup 202 IND vs PAK: ಭಾರತ-ಪಾಕಿಸ್ತಾನ ಪಂದ್ಯ ನೋಡಿದ್ರೆ ಬೀಳುತ್ತೆ ದಂಡ, ಇದೆಂತಾ ರೂಲ್ಸ್ ಗುರು!

ಇದು ಹಾರ್ದಿಕ್‌ಗೂ ಗೊತ್ತಿತ್ತು. ಅದಕ್ಕಾಗಿಯೇ ಅವರು ತಮ್ಮ ಓವರ್‌ನ ಮೊದಲ ಎಸೆತವನ್ನೇ ಶಾರ್ಟ್‌ಗೆ ಬೌಲ್ಡ್ ಮಾಡಿ ರಿಜ್ವಾನ್‌ರನ್ನು ಅಚ್ಚರಿಗೊಳಿಸಿದರು. ಈ ಚೆಂಡಿನ ವೇಗ ಗಂಟೆಗೆ 141 ಕಿ.ಮೀ. ಆಗಿತ್ತು. ಆದರೆ ರಿಜ್ವಾನ್ ಅದನ್ನು ಡೀಪ್​ ಥರ್ಡ್​ ಮ್ಯಾನ್​ ರೀರಿ ಆಡಲು ಪ್ರಯತ್ನಿಸಿದರು. ಅಷ್ಟರಲ್ಲಿ ಚೆಂಡು ನೇರವಾಗಿ ಫೀಲ್ಡಿಂಗ್ ಮಾಡುತ್ತಿದ್ದ ಅವೇಶ್ ಖಾನ್ ಅವರತ್ತ ಸಾಗಿದ್ದು ಕ್ಯಾಚ್ ಪಡೆಯುವಲ್ಲಿ ಅವರು ಕೊಂಚವೂ ತಡ ಮಾಡಲಿಲ್ಲ.

ಶಾರ್ಟ್ ಪಿಚ್ ಬಾಲ್ ನಲ್ಲಿ ಹಾರ್ದಿಕ್ ಮೂರೂ ವಿಕೆಟ್ ಪಡೆದರು.

ಒಂದು ಎಸೆತದ ಬೆನ್ನಲ್ಲೇ ಖುಶ್ದಿಲ್ ಹಾರ್ದಿಕ್‌ ಆಟಕ್ಕೆ ಮಂಡಿಯೂರಿದರು. ಪಾಂಡ್ಯ ಮತ್ತೊಮ್ಮೆ ಶಾರ್ಟ್ ಬಾಲ್ ಎಸೆದರು. ಶಾ ಅದನ್ನು ಕಟ್​ ಮಾಡಲು ಪ್ರಯತ್ನಿಸಿದರು. ಆದರೆ, ಚೆಂಡಿನ ಹೆಚ್ಚುವರಿ ಬೌನ್ಸ್‌ನಿಂದಾಗಿ, ಅದನ್ನು ಸರಿಯಾಗಿ ಆಡಲು ಸಾಧ್ಯವಾಗಲಿಲ್ಲ ಮತ್ತು ಚೆಂಡು ನೇರವಾಗಿ ಸ್ವೀಪರ್ ಕವರ್‌ನಲ್ಲಿದ್ದ ಜಡೇಜಾ ಕೈ ಸೇರಿತು. ಈ ಮೂಲಕ ಒಂದೇ ಓವರ್ ನಲ್ಲಿ 2 ವಿಕೆಟ್ ಕಬಳಿಸಿ ಹಾರ್ದಿಕ್ ಪಾಕಿಸ್ತಾನದ ಬ್ಯಾಟಿಂಗ್​ಗೆ ಹೊಡೆತ ಕೊಟ್ಟರು.

ಹಾರ್ದಿಕ್ ಪ್ರದರ್ಶನದೊಂದಿಗೆ ಟೀಂ ಇಂಡಿಯಾದ ಟೆನ್ಷನ್ ಮಾಯ

ಇದಕ್ಕೂ ಮುನ್ನ ಹಾರ್ದಿಕ್ ಕೂಡ ಶಾರ್ಟ್ ಬಾಲ್ ನಲ್ಲಿ ಮೊದಲ ವಿಕೆಟ್ ಪಡೆದಿದ್ದರು. ಇಫ್ತಿಕರ್ ಅಹ್ಮದ್ ಈ ಚೆಂಡಿನಲ್ಲಿ 142 ಕಿ.ಮೀ ವೇಗದಲ್ಲಿ ಹುಕ್ ಶಾಟ್ ಆಡಲು ಬಯಸಿದ್ದರು. ಆದರೆ, ಚೆಂಡು ವಿಕೆಟ್ ಹಿಂದಿದ್ದ ದಿನೇಶ್ ಕಾರ್ತಿಕ್ ಕೈ ಸೇರಿದೆ. ಶಾರ್ಟ್ ಬಾಲ್ ನಲ್ಲಿ ಹಾರ್ದಿಕ್ ಮೂರೂ ವಿಕೆಟ್ ಪಡೆದರು. ಇದು ಟೀಂ ಇಂಡಿಯಾಕ್ಕೆ ಸಂಭ್ರಮಿಸುವಂತೆ ಮಾಡಿತ್ತು. ಇನ್ನು ನಿರಂತರ ಬೆನ್ನುನೋವಿನಿಂದ ಬಳಲುತ್ತಿರುವುದರಿಂದ ಪಾಂಡ್ಯ ಈ ಹಿಂದಿನಂತೆ ಮೊದಲಿನ ವೇಗದಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಗಳು ಎದ್ದಿತ್ತು. ಅಲ್ಲದೇ ಅವರಿಗೆ ಶಸ್ತ್ರಚಿಕಿತ್ಸೆಯೂ ನಡೆದಿತ್ತು. ಆದರೆ, ಪಾಕಿಸ್ತಾನದ ವಿರುದ್ಧ ಹಾರ್ದಿಕ್ ಸತತವಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಶಾರ್ಟ್ ಬಾಲ್ ಗಳಿಂದ ಪಾಕ್ ಬ್ಯಾಟ್ಸ್ ಮನ್ ಗಳಿಗೆ ಸಾಕಷ್ಟು ಬೆವರಿಳಿಸಿದ್ದಾರೆ.

6 ವರ್ಷಗಳ ಹಿಂದೆಯೂ ಪಾಕಿಸ್ತಾನವನ್ನು ಘಾಸಿಗೊಳಿಸಿದ್ದ ಪಾಂಡ್ಯ

ಏಷ್ಯಾಕಪ್‌ನಲ್ಲಿ ಹಾರ್ದಿಕ್ ಪಾಕಿಸ್ತಾನಕ್ಕೆ ಗಂಭೀರ ಗಾಯ ಕೊಟ್ಟಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ 2016ರ ಏಷ್ಯಾಕಪ್ ನಲ್ಲಿ ಹಾರ್ದಿಕ್ 3.3 ಓವರ್ ಗಳಲ್ಲಿ 8 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಆಗ ಪಾಕಿಸ್ತಾನ ತಂಡ 83 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಟಿ20ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಕನಿಷ್ಠ ಸ್ಕೋರ್ ಆಗಿದೆ.
Published by:Precilla Olivia Dias
First published: