ಹ್ಯಾಮಿಲ್ಟನ್ (ಫೆ. 14): ಇಲ್ಲಿನ ಸೇಡನ್ ಪಾರ್ಕ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಮಾರಕ ದಾಳಿ ಸಂಘಟಿಸಿದರು. ಬ್ಯಾಟಿಂಗ್ನಲ್ಲಿ ಕೊಹ್ಲಿ ಪಡೆ ವೈಫಲ್ಯ ಕಂಡರು ಬೌಲರ್ಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪರಿಣಾಮ ನ್ಯೂಜಿಲೆಂಡ್ ಇಲೆವೆನ್ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 235 ರನ್ಗೆ ಆಲೌಟ್ ಆಗಿದೆ.
ಭಾರತ ನಿನ್ನೆ
ಮೊದಲ ದಿನವೇ 263 ರನ್ಗೆ ಆಲೌಟ್ ಆಗಿತ್ತು. ಹನುಮಾ ವಿಹಾರಿ 101 ಹಾಗೂ ಚೇತೇಶ್ವರ್ ಪೂಜಾರ 93 ರನ್ ಗಳಿಸಿದ್ದರು. ಉಳಿದ ಬ್ಯಾಟ್ಸ್ಮನ್ಗಳು ಕಳಪೆ ಆಟ ಪ್ರದರ್ಶಿಸಿದ್ದರು. ಭಾರತ ಆಲೌಟ್ ಆದ ವೇಳೆ ಮೊದಲ ದಿನದ ಆಟವನ್ನು ಅಂತ್ಯಗೊಳಿಸಲಾಗಿತ್ತು.
ಎರಡನೇ ದಿನವಾದ ಇಂದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಇಲೆವೆನ್ ತಂಡ ಆರಂಭದಿಂದಲೆ ವಿಕೆಟ್ ಕಳೆದುಕೊಂಡು ಸಾಗಿತು. ವಿಲ್ ಯಂಗ್ ಬುಮ್ರಾ ಬೌಲಿಂಗ್ನಲ್ಲಿ 2 ರನ್ಗೆ ಔಟ್ ಆದರೆ, ಟಿಮ್ ಸೀಫರ್ಟ್ 9 ರನ್ಗೆ ಸುಸ್ತಾದರು.
ತಮ್ಮ ಮೊದಲ ಪ್ರೇಮವನ್ನು ಬಹಿರಂಗಪಡಿಸಿದ ಸಚಿನ್ ತೆಂಡೂಲ್ಕರ್
ರಚಿನ್ ರವೀಂದ್ರ(34) ಹಾಗೂ ಹೆನ್ರಿ ಕೂಪರ್(40) ಕೆಲಹೊತ್ತು ಕ್ರೀಸ್ನಲ್ಲಿದ್ದರಷ್ಟೆ. ಟಾಮ್ ಬ್ರೂಸ್ 31 ರನ್ ಗಳಿಸಿದ್ದಾಗ ಸೈನಿ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಾಯಕ ಡ್ಯಾರೆಲ್ ಮಿಚೆಲ್ 32 ರನ್ ಗಳಿಸಿದರು.
ಅಂತಿಮವಾಗಿ ಕಿವೀಸ್ 74.2 ಓವರ್ನಲ್ಲಿ 235 ರನ್ಗೆ ಆಲೌಟ್ ಆಯಿತು. ಭಾರತ 28 ರನ್ಗಳ ಮುನ್ನಡೆಯಲ್ಲಿದೆ. ನವ್ದೀಪ್ ಸೈನಿ 3 ವಿಕೆಟ್ ಕಿತ್ತರೆ, ಬುಮ್ರಾ, ಶಮಿ, ಉಮೇಶ್ ಯಾದವ್ ತಲಾ 2 ಹಾಗೂ ಅಶ್ವಿನ್ 1 ವಿಕೆಟ್ ಪಡೆದರು.
ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 5 ರನ್ ಆಗುವ ಹೊತ್ತಿಗೆನೇ ತನ್ನ 3 ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾ ಓಪನರ್ಗಳು ಏಕದಿನದಂತೆ ಇಲ್ಲುಕೂಡ ವೈಫಲ್ಯ ಅನುಭವಿಸಿದರು. ಪೃಥ್ವಿ ಶಾ 4 ಎಸೆತಗಳಲ್ಲಿ ಸೊನ್ನೆ ಸುತ್ತಿದರೆ, ಮಯಾಂಕ್ ಅಗರ್ವಾಲ್ 1 ರನ್ಗೆ ಔಟ್ ಆದರು.
ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ
ಸಂಕಷ್ಟದ ಸಂದರ್ಭದಲ್ಲಿ ಪೂಜಾರ ಹಾಗೂ ಹನುಮಾ ವಿಹಾರಿ ತಂಡಕ್ಕೆ ಆಸರೆಯಾಗಿ ನಿಂತರು. 38 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ಇವರಿಬ್ಬರು ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 195 ರನ್ಗಳ ಅಮೋಘ ಜೊತೆಯಾಟ ಆಡಿದರು. ಪೂಜಾರ ಅರ್ಧಶತಕ ಸಿಡಿಸಿದರೆ, ವಿಹಾರಿ ಸೆಂಚುರಿ ಬಾರಿಸಿದರು.
ಪೂಜಾರ 211 ಎಸೆತಗಳಲ್ಲಿ 93 ರನ್ಗೆ ಔಟ್ ಆಗುವ ಮೂಲಕ ಶತಕ ವಂಚಿತರಾದರೆ, ವಿಹಾರಿ 182 ಎಸೆತಗಳಲ್ಲಿ 101 ರನ್ ಗಳಿಸಿ ನಿವೃತ್ತಿ ಪಡೆದರು. ಬಳಿಕ ಬಂದ ಬ್ಯಾಟ್ಸ್ಮನ್ಗಳು ಬಂದ ಬೆನ್ನಲ್ಲೆ ಹಿಂತಿರುಗಿದರು. ಅಂತಿಮವಾಗಿ ಭಾರತ 78.5 ಓವರ್ನಲ್ಲಿ 263 ರನ್ಗೆ ಸರ್ವಪತನ ಕಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ