VIDEO: ಭಾರತ-ನ್ಯೂಜಿಲೆಂಡ್ ಸೆಮಿ ಫೈನಲ್​ ನೋಡೋಕೆ ಮಿಸ್​ ಆಯಿತೇ? ಇಲ್ಲಿದೆ ಪಂದ್ಯದ ಹೈಲೈಟ್ಸ್​​

ನ್ಯೂಜಿಲೆಂಡ್ ನೀಡಿದ​ 240 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಯಿತು. ಕೇವಲ ಒಂದು ರನ್​ಗಳಿಸಿ ರೋಹಿತ್ ಶರ್ಮಾ ಪೆವಿಲಿಯನ್​ಗೆ ಮರಳಿದ್ದರು. ಉಪನಾಯಕನ ಬೆನ್ನಲ್ಲೇ ಕ್ಯಾಪ್ಟನ್​ ಕೊಹ್ಲಿ 1 ರನ್​ಗಳಿಸಿ ಬೌಲ್ಟ್ ಎಸೆತದಲ್ಲಿ ಎಲ್​ಬಿಡಬ್ಲ್ಯೂಗೆ ಆಗಿ ನಿರ್ಗಮಿಸಿದರು.

Rajesh Duggumane | news18
Updated:July 11, 2019, 7:42 AM IST
VIDEO: ಭಾರತ-ನ್ಯೂಜಿಲೆಂಡ್ ಸೆಮಿ ಫೈನಲ್​ ನೋಡೋಕೆ ಮಿಸ್​ ಆಯಿತೇ? ಇಲ್ಲಿದೆ ಪಂದ್ಯದ ಹೈಲೈಟ್ಸ್​​
ಭಾರತ-ನ್ಯೂಜಿಲೆಂಡ್ ಪಂದ್ಯ
  • News18
  • Last Updated: July 11, 2019, 7:42 AM IST
  • Share this:
ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫರ್ಡ್​ ಮೈದಾನದಲ್ಲಿ ನಡೆದ ವಿಶ್ವಕಪ್ ಮೊದಲ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ​ 18 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಕೆಳ ಕ್ರಮಾಂಕದಲ್ಲಿ ರವೀಂದ್ರ ಜಡೇಜ ಅವರ 77 ರನ್​ಗಳ ಅಮೋಘ ಆಟದ ಹೊರತಾಗಿಯು ಕಿವೀಸ್ ಪಡೆಯ ಮುಂದೆ ಜಯ ಸಾಧಿಸುವಲ್ಲಿ ಟೀಂ ಇಂಡಿಯಾ ಎಡವಿತು. ಈ ಸೋಲಿನೊಂದಿಗೆ ಕೊಹ್ಲಿ ಪಡೆ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿತು.

ನ್ಯೂಜಿಲೆಂಡ್ ನೀಡಿದ​ 240 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಯಿತು. ಕೇವಲ ಒಂದು ರನ್​ಗಳಿಸಿ ರೋಹಿತ್ ಶರ್ಮಾ ಪೆವಿಲಿಯನ್​ಗೆ ಮರಳಿದ್ದರು. ಉಪನಾಯಕನ ಬೆನ್ನಲ್ಲೇ ಕ್ಯಾಪ್ಟನ್​ ಕೊಹ್ಲಿ 1 ರನ್​ಗಳಿಸಿ ಬೌಲ್ಟ್ ಎಸೆತದಲ್ಲಿ ಎಲ್​ಬಿಡಬ್ಲ್ಯೂಗೆ ಆಗಿ ನಿರ್ಗಮಿಸಿದರು. ಇನ್ನು 7 ಎಸೆತಗಳನ್ನು ಎದುರಿಸಿದ ರಾಹುಲ್ ಕೇವಲ 1 ರನ್​ ಗಳಿಸಿ ವಿಕೆಟ್ ಕೀಪರ್​ಗೆ ಕ್ಯಾಚ್​ ನೀಡಿ ಹೊರ ನಡೆದರು.

ನಂತರ ಜಡೇಜಾ ಉತ್ತಮ ಆಟ ಪ್ರದರ್ಶಿಸಿದರು. ಕೊನೆಗೆ ಒತ್ತಡದಲ್ಲಿ ವಿಕೆಟ್ ಕೈ ಚೆಲ್ಲಿದ ಭಾರತ ಕೊನೆಗೆ 221 ರನ್​ಗಳಿಗೆ ಸರ್ವಪತನ ಕಾಣುವಂತಾಯಿತು.

First published: July 11, 2019, 7:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading