IND vs NZ: ವಿಶ್ವಕಪ್​ನಲ್ಲಿಂದು ಭಾರತ vs ನ್ಯೂಜಿಲೆಂಡ್​; ಕೊಹ್ಲಿ ತಂಡದಲ್ಲಾಗಲಿದೆ ಪ್ರಮುಖ ಬದಲಾವಣೆ

ನ್ಯೂಜಿಲೆಂಡ್​ ತಂಡದಲ್ಲಿ ಫಾರ್ಮ್​ನ ಕೊರತೆ ಎದ್ದು ಕಾಣುತ್ತಿದೆ. ಕೇನ್​ ವಿಲಿಯಮ್ಸನ್​ ಹಾಗೂ ರಾಸ್​ ಟೈಲರ್​ ತಂಡಕ್ಕೆ ಪ್ರಮುಖ ಆಧಾರ. ಇವರ ವಿಕೆಟ್​ಗಳನ್ನು ಕಿತ್ತರೆ ಭಾರತ ಸುಲಭವಾಗಿ ಗೆಲುವನ್ನು ತೆಕ್ಕೆಗೆ ತೆಗೆದುಕೊಳ್ಳಬಹುದು.

Rajesh Duggumane | news18
Updated:July 9, 2019, 8:32 AM IST
IND vs NZ: ವಿಶ್ವಕಪ್​ನಲ್ಲಿಂದು ಭಾರತ vs ನ್ಯೂಜಿಲೆಂಡ್​; ಕೊಹ್ಲಿ ತಂಡದಲ್ಲಾಗಲಿದೆ ಪ್ರಮುಖ ಬದಲಾವಣೆ
ವಿರಾಟ್​-ಕೇನ್​ ವಿಲಿಯಮ್ಸನ್​
  • News18
  • Last Updated: July 9, 2019, 8:32 AM IST
  • Share this:
ಇಂದು ವಿಶ್ವಕಪ್​ನ ಮೊದಲ ಸೆಮಿ ಫೈನಲ್ ಮ್ಯಾಂಚೆಸ್ಟರ್​ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿದೆ. ಈಗಾಗಲೇ ಅದ್ಭುತ ಫಾರ್ಮ್​ ಅನ್ನು ಕಾಯ್ದುಕೊಂಡಿರುವ ಕೊಹ್ಲಿ ಪಡೆ ಲೀಗ್​ ಹಂತದಲ್ಲಿ ಸೋತಿರುವುದು ಕೇವಲ ಒಂದು ಪಂದ್ಯದಲ್ಲಿ ಮಾತ್ರ. ಹಾಗಾಗಿ ಟೀಂ ಇಂಡಿಯಾ ಗೆಲ್ಲುವ ಹಾಟ್​ ಫೆವರಿಟ್​ ತಂಡ.

ಅತ್ತ ಕೇನ್​ ವಿಲಿಯಮ್ಸನ್​ ಮುನ್ನಡೆಸುವ ತಂಡ ಲೀಗ್ ಹಂತದಲ್ಲಿ 3 ಬಾರಿ ಸೋಲುಂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಲೀಗ್​ ಹಂತದ ಪಂದ್ಯವು ಮಳೆಗೆ ಅಹುತಿಯಾಗಿತ್ತು. ಹೀಗಾಗಿ ಮೊದಲ ಸೆಮಿ ಫೈನಲ್​ನ ಮೂಲಕ ಉಭಯ ತಂಡಗಳು ಇಂಗ್ಲೆಂಡ್​ ಪಿಚ್​ನಲ್ಲಿ ಪ್ರಥಮ ಬಾರಿ ಮುಖಾಮುಖಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ತಂಡಗಳಿಂದ ಪ್ರಬಲ ಪೈಪೋಟಿಯನ್ನು ನಿರೀಕ್ಷೆ ಇದೆ.

ಭಾರತ ತಂಡ ಈ ಬಾರಿಯ ವಿಶ್ವಕಪ್​ನಲ್ಲಿ ಫಾರ್ಮ್​​ನಲ್ಲಿದೆ. ಆರಂಭಿಕರಾದ ರೋಹಿತ್​ ಶರ್ಮಾ ಹಾಗೂ ಕನ್ನಡಿಗ ಕೆ ಎಲ್​ ರಾಹುಲ್​ ಎಚ್ಚರಿಕೆಯ ಆಟವಾಡುತ್ತಿದ್ದಾರೆ. ಹೀಗಾಗಿ ಇವರ ವಿಕೆಟ್​ ಕೀಳುವುದು ಸುಲಭದ ಮಾತೇನು ಅಲ್ಲ. ಇನ್ನು, ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯಾ, ರಿಷಭ್​ ಪಂತ್​ ಬ್ಯಾಟಿಂಗ್​ನಲ್ಲಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲೂ ರೊಹಿತ್​-ರಾಹುಲ್​ ಅಬ್ಬರದ ಪ್ರದರ್ಶನ ನೀಡುವ ಎಲ್ಲ ಸಾಧ್ಯತೆ ಇದೆ.

ಇದನ್ನೂ ಓದಿ:  ಭಾರತ-ನ್ಯೂಜಿಲೆಂಡ್​ ಸೆಮಿ ಫೈನಲ್​ಗೆ ವರುಣನ ಅಡ್ಡಿ: ಮಳೆ ಬಂದರೆ ಫೈನಲ್​ಗೇರುವ ತಂಡ ಯಾವುದು?


ಈ ಬಾರಿಯ ಟೂರ್ನಿಯಲ್ಲಿ ನ್ಯೂಜಿಲೆಂಡ್​ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಕೊನೆಯ ಮೂರು ಪಂದ್ಯಗಳನ್ನು ಸತತವಾಗಿ ಸೋತಿದೆ. ಪಾಕಿಸ್ತಾನ ನೀಡಿದ್ದ 241 ರನ್​ ಗುರಿಯನ್ನು ನ್ಯೂಜಿಲೆಂಡ್​ ಮುಟ್ಟಿಲ್ಲ. ಇಂಗ್ಲೆಂಡ್​ ವಿರುದ್ಧವಂತೂ ಹೀನಾಯವಾಗಿ ಸೋತಿತ್ತು. ಬಾಂಗ್ಲಾ ನೀಡಿದ್ದ ಸಣ್ಣ ಮೊತ್ತವನ್ನು ತಡಕಾಡಿ ಗೆದ್ದಿತ್ತು. ಹಾಗಾಗಿ, ಭಾರತವನ್ನು ಎದುರಿಸುವುದು ನ್ಯೂಜಿಲೆಂಡ್​ಗೆ ಅಷ್ಟು ಸುಲಭದ ಮಾತಲ್ಲ.

ನ್ಯೂಜಿಲೆಂಡ್​ ತಂಡದಲ್ಲಿ ಫಾರ್ಮ್​ನ ಕೊರತೆ ಎದ್ದು ಕಾಣುತ್ತಿದೆ. ಕೇನ್​ ವಿಲಿಯಮ್ಸನ್​ ಹಾಗೂ ರಾಸ್​ ಟೈಲರ್​ ತಂಡಕ್ಕೆ ಪ್ರಮುಖ ಆಧಾರ. ಇವರ ವಿಕೆಟ್​ಗಳನ್ನು ಕಿತ್ತರೆ ಭಾರತ ಸುಲಭವಾಗಿ ಗೆಲುವನ್ನು ತೆಕ್ಕೆಗೆ ತೆಗೆದುಕೊಳ್ಳಬಹುದು.ಬದಲಾವಣೆ ಏನು?:

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಇಲ್ಲಿ ಲಂಕಾ ವಿರುದ್ದದ ಪಂದ್ಯದ ವೇಳೆ ತಂಡದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2 ಬದಲಾವಣೆ ಮಾಡಿಕೊಂಡಿದ್ದರು.  ಚಹಾಲ್ ಬದಲಿಗೆ ಕುಲ್ದೀಪ್ ಯಾದವ್​ಗೆ ಹಾಗೂ ಮೊಹಮ್ಮದ್ ಶಮಿ ಬದಲಿಗೆ ರವೀಂದ್ರ ಜಡೇಜ ಅವರನ್ನು ಆಯ್ಕೆ ಮಾಡಲಾಗಿತ್ತು.

ಆದರೆ ಅದೇ ತಂಡವನ್ನು ಸೆಮಿ ಫೈನಲ್​ನಲ್ಲಿ ಆಡಿಸುವುದು ಅನುಮಾನ. ಏಕೆಂದರೆ ನಿರ್ಣಾಯಕ ಪಂದ್ಯದಲ್ಲಿ ಬಲಿಷ್ಠರನ್ನೇ ಕಣಕ್ಕಿಳಿಸಲು ಟೀಂ ಮ್ಯಾನೇಜ್​ಮೆಂಟ್ ನಿರ್ಧರಿಸಿದ್ದಾರೆ. ಅದರಂತೆ ಮಂಗಳವಾರ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಆಟಗಾರರು ಯಾರು ಎಂಬ ಪಟ್ಟಿ ಇಲ್ಲಿದೆ.

ಇದನ್ನೂ ಓದಿ: ಪಾಕ್​ ತಂಡವನ್ನು ಟೂರ್ನಿಯಿಂದ ಹೊರಗಿಡಲು ಇಂಗ್ಲೆಂಡ್ ವಿರುದ್ದ ಟೀಂ ಇಂಡಿಯಾ ಉದ್ದೇಶ ಪೂರ್ವಕವಾಗಿ ಸೋತಿತೇ?

ಓಪನರ್ಸ್​:

ರೋಹಿತ್-ರಾಹುಲ್

ಈಗಾಗಲೇ ಶ್ರೀಲಂಕಾ ವಿರುದ್ಧ 189 ರನ್​ಗಳ ಮೊದಲ ವಿಕೆಟ್ ಜೊತೆಯಾಟ ಕಾಣಿಕೆ ನೀಡಿ ಭರ್ಜರಿ ಆರಂಭ ಒದಗಿಸಿರುವ ರೋಹಿತ್ ಶರ್ಮಾ ಮತ್ತು ಕೆಎಲ್​ ರಾಹುಲ್ ಸೆಮಿ ಫೈನಲ್​ನಲ್ಲೂ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ಮಧ್ಯಮ ಕ್ರಮಾಂಕ:

ಕೊಹ್ಲಿ-ರಿಷಭ್-ದಿನೇಶ್ ಕಾರ್ತಿಕ್

ಟೀಂ ಇಂಡಿಯಾ ನಾಯಕನ ಚಿಂತೆಗೆ ಕಾರಣವಾಗಿರುವುದು ತಂಡದ ಮಧ್ಯಮ ಕ್ರಮಾಂಕ. ಓನ್​ಡೌನ್​ನಲ್ಲಿ ವಿರಾಟ್​ ಕೊಹ್ಲಿ ಮಿಂಚಿದರೆ, ರಿಷಭ್ ಪಂತ್ ಸಹ ತಕ್ಕ ಮಟ್ಟಿನ ಕಾಣಿಕೆಯನ್ನು ಬ್ಯಾಟ್​ ಮೂಲಕ ಧಾರೆಯೆದಿದ್ದಾರೆ. ಆದರೆ ಇಲ್ಲಿ ಐದನೇ ಬ್ಯಾಟ್ಸ್​ಮನ್​ ಆಗಿ ಯಾರು ಎಂಬ ಪ್ರಶ್ನೆ ಭಾರತ ತಂಡವನ್ನು ಕಾಡುತ್ತಿದೆ. ಈ ಹಿಂದೆ ಕೇದರ್ ಜಾಧವ್​ಗೆ ಅವಕಾಶ ನೀಡಲಾಗಿದ್ದರೂ ಅವರಿಂದ ನಿರೀಕ್ಷಿತ ಮಟ್ಟದ ಆಟ ಪ್ರದರ್ಶನವಾಗಿರಲಿಲ್ಲ. ಇನ್ನು ಅವರ ಬದಲಿಗೆ ದಿನೇಶ್ ಕಾರ್ತಿಕ್​ಗೆ ಸ್ಥಾನ ನೀಡಿದಾಗಲೂ ಎರಡಂಕಿ ಮೊತ್ತಗಳಿಸುವಲ್ಲಿ ವಿಫಲರಾಗಿದ್ದರು. ಆದರೆ ಅನುಭವ ಮತ್ತು ಒತ್ತಡವನ್ನು ನಿಭಾಯಿಸುವ ಸಾರ್ಮಥ್ಯವನ್ನು ಪರಿಗಣನೆಗೆ ತೆಗೆದು ನಾಳೆ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು.

First published: July 9, 2019, 8:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading