Vinay BhatVinay Bhat
|
news18-kannada Updated:January 27, 2020, 2:58 PM IST
ಕಿವೀಸ್ ಗೆಲುವಿನ ರುವಾರಿ ರಾಸ್ ಟೇಲರ್ ಅವರ ಕ್ಯಾಚ್ ಅನ್ನು ಕುಲ್ದೀಪ್ ಯಾದವ್ ಬಿಟ್ಟಿದ್ದಕ್ಕೆ ಭಾರತ ಭಾರೀ ಬೆಲೆ ತೆತ್ತಬೇಕಾಯಿತು.
ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ ಆಟಗಾರರ ಅತ್ಯುತ್ತಮ ಪ್ರದರ್ಶನ ಕಂಡು ನಾಯಕ ವಿರಾಟ್ ಕೊಹ್ಲಿ ತುಂಬಾನೇ ಸಂತಸಗೊಂಡಿದ್ದಾರೆ. ಕಿವೀಸ್ ವಿರುದ್ಧ ಆಕ್ಲೆಂಡ್ನಲ್ಲಿ ತನ್ನ ದಾಖಲೆಯನ್ನು ಕೊಹ್ಲಿ ಪಡೆ ಮುಂದುವರೆಸಿದರೆ, ಕೇನ್ ಪಡೆ ಇದೇ ಮೈದಾನದಲ್ಲಿ 12ನೇ ಸೋಲು ಕಂಡಿತು.
ಸದ್ಯ ಟಿ-20 ಸರಣಿ ವಶಪಡಿಸಿಕೊಳ್ಳಲು
ಭಾರತಕ್ಕೆ ಉಳಿದಿರುವ ಮೂರು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಗೆದ್ದರೆ ಸಾಕು. ಮೂರನೇ ಟಿ-20 ಜನವರಿ 29 ರಂದು ಹ್ಯಾಮಿಲ್ಟನ್ನ ಸೀಡನ್ ಪಾರ್ಕ್ನಲ್ಲಿ ನಡೆಯಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ವಿರಾಟ್ ಕೊಹ್ಲಿ ಕ್ಯಾಚ್ ಡ್ರಾಪ್ ಮಾಡಿದ ಕ್ಷಣ.
IND vs NZ: 2 ಪಂದ್ಯದಲ್ಲಿ 8 ಓವರ್ ಬೌಲಿಂಗ್, ನೀಡಿದ್ದು 52 ರನ್ಸ್, 1 ಸಿಕ್ಸ್; ಆದ್ರೂ ಈತನಿಗೆ ಸಿಕ್ಕಿಲ್ಲ ಪಂದ್ಯಶ್ರೇಷ್ಠ!
ನಿನ್ನೆ ನಡೆದ ಎರಡನೇ ಪಂದ್ಯದಲ್ಲಿ ಭಾರತ ಸುಲಭ ಜಯ ಸಾಧಿಸಿತು. ಬೌಲರ್ಗಳು ಅತ್ಯುತ್ತಮ ಕಮ್ಬ್ಯಾಕ್ ಮಾಡಿದರೆ, ಬ್ಯಾಟ್ಸ್ಮನ್ಗಳು ಮತ್ತೆ ಅಬ್ಬರಿಸಿದರು. ಇದರಿಂದಲೇ ಕೊಹ್ಲಿ ಅವರು ಪಂದ್ಯ ಮುಗಿದ ಬಳಿಕ ಬೌಲರ್ಗಳನ್ನು ಹಾಡಿ ಹೊಗಳಿದರು.
20 ಓವರ್ನಲ್ಲಿ ನ್ಯೂಜಿಲೆಂಡ್ ಅನ್ನು ಕೇವಲ 132 ರನ್ಗೆ ಬಂಧಿಸುವಲ್ಲಿ ಭಾರತೀಯರು ಯಶಸ್ವಿಯಾದರು. ಆದರೆ, ಕಿವೀಸ್ ಪಡೆಯನ್ನು 132 ರನ್ಗೂ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ಭಾರತಕ್ಕೆ ಸುಲಭ ಅವಕಾಶವಿತ್ತು. ಆದರೆ, ಕ್ಯಾಪ್ಟನ್ ಕೊಹ್ಲಿ ಆ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ.
ಅಂತಿಮ ಹಂತದಲ್ಲಿ ಅಬ್ಬರಿಸಲು ಶುರು ಮಾಡಿದ್ದ ರಾಸ್ ಟೇಲರ್, 18ನೇ ಓವರ್ನ ಜಸ್ಪ್ರೀತ್ ಬುಮ್ರಾ ಅವರ 3ನೇ ಎಸೆತದಲ್ಲಿ ಚೆಂಡನ್ನು ಸಿಕ್ಸ್ಗೆ ಅಟ್ಟಲು ಯತ್ನಿಸಿದರು. ಆದರೆ, ಸರಿಯಾದ ಟೈಮಿಂಗ್ ಇಲ್ಲದಿದ್ದ ಕಾರಣ ಚೆಂಡು ನೇರವಾಗಿ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಬಳಿ ಕ್ಯಾಚ್ ಆಗಲಿತ್ತು.
IPL 2020 Meeting: ಸಭೆಯಲ್ಲಿ ಚರ್ಚೆಯಾಗಲಿದೆ ಈ 4 ಪ್ರಮುಖ ವಿಚಾರಗಳು..!
ವಿಶ್ವದ ಶ್ರೇಷ್ಠ ಫೀಲ್ಡರ್ಗಳಲ್ಲಿ ಪ್ರಮುಖರೆನಿಸಿಕೊಂಡಿರುವ ಕೊಹ್ಲಿ ಈ ಕ್ಯಾಚ್ ಅನ್ನು ಸುಲಭವಾಗಿ ಹಿಡಿಯುತ್ತಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ, ಸುಲಭದ ಕ್ಯಾಚನ್ನು ಕೊಹ್ಲಿ ಕೈಚೆಲ್ಲಿದ್ದರು. ಚೆಂಡು ಕೊಹ್ಲಿ ಕೈಗೆ ತಗಲಿ ನೆಲಕ್ಕೆ ಬಿದ್ದಿತ್ತು.
ಈ ಸುಲಭ ಕ್ಯಾಚ್ ಅನ್ನು ಕೊಹ್ಲಿ ಹಿಡಿಯುತ್ತಾರೆ ಎಂದು ಜಸ್ಪ್ರೀತ್ ಬುಮ್ರಾ ನಂಬಿ ಸಂಭ್ರಮಾರಣೆಗೆ ರೆಡಿಯಾಗಿದ್ದರು. ಆದರೆ, ಕೊಹ್ಲಿಯೇ ಈ ಕ್ಯಾಚ್ ಅನ್ನು ಕೈಚೆಲ್ಲಿದ್ದನ್ನು ಕಂಡು ಒಮ್ಮೆ ಕೋಪಗೊಂಡು ಬಳಿಕ ಬೇಸರ ಪಟ್ಟರು. ಕೊಹ್ಲಿ ಕ್ಯಾಚ್ ಬಿಟ್ಟ ವಿಡಿಯೋ ಪ್ರಸ್ತುತ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
First published:
January 27, 2020, 2:48 PM IST