IND vs NZ: ಕೊಹ್ಲಿ ಮೇಲೆ ಎಲ್ಲರ ಕಣ್ಣು!; ಮೊದಲ ಟೆಸ್ಟ್​ಗೂ ಮುನ್ನ ನೀವು ತಿಳಿದುಕೊಳ್ಳಲೇಬೇಕು ಈ ವಿಚಾರ!

Virat Kohli: 1968ರ ಬಳಿಕ ಟೀಂ ಇಂಡಿಯಾ ವೆಲ್ಲಿಂಗ್ಟನ್​ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಒಮ್ಮೆಯೂ ಗೆಲುವು ಸಾಧಿಸಲಿಲ್ಲ. ಸದ್ಯ ವಿರಾಟ್‌ ಕೊಹ್ಲಿಗೆ ವಿಶೇಷ ದಾಖಲೆ ಒಂದನ್ನು ಸರಿಗಟ್ಟುವ ಅವಕಾಶ ಲಭ್ಯವಾಗಲಿದೆ.

ಭಾರತ vs ನ್ಯೂಜಿಲೆಂಡ್.

ಭಾರತ vs ನ್ಯೂಜಿಲೆಂಡ್.

  • Share this:
    ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್​ ಸರಣಿ ನಾಳೆಯಿಂದ ಆರಂಭವಾಗಲಿದೆ. ವೆಲ್ಲಿಂಗ್ಟನ್​ನ ಬೇಸಿನ್ ರಿಸರ್ವ್​ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್​ ನಡೆಯಲಿದ್ದು, ಕೊಹ್ಲಿ ಪಡೆ ಕಿವೀಸ್​ಗೆ ತಿರುಗೇಟು ನೀಡುವ ತವಕದಲ್ಲಿದೆ.

    ಟೆಸ್ಟ್​ ಕ್ರಿಕೆಟ್​ನ ನಂಬರ್ 1 ತಂಡವಾಗಿರುವ ಟೀಂ ಇಂಡಿಯಾಕ್ಕೆ ಈ ಟೆಸ್ಟ್​ ಅಷ್ಟೊಂದು ಸುಲಭವಲ್ಲ. ಇಲ್ಲಿನ ಬೌನ್ಸಿ ಹಾಗೂ ಸೀಮ್‌ ಟ್ರ್ಯಾಕ್‌ ಭಾರತಕ್ಕೆ ಅಗ್ನಿಪರೀಕ್ಷೆ ಒಡ್ಡುತ್ತದೆ. ಆಡುವವರ ಸಾಮರ್ಥ್ಯ ಪ್ರದರ್ಶಿಸಲು ಇದೊಂದು ವೇದಿಕೆ.

    ಇದು ನ್ಯೂಜಿಲೆಂಡ್‌ನ‌ಲ್ಲಿ ಭಾರತ ಆಡಲಿರುವ 10ನೇ ಟೆಸ್ಟ್‌ ಸರಣಿ. ಹಿಂದಿನ 9 ಸರಣಿಗಳಲ್ಲಿ ಭಾರತ ಎರಡರಲ್ಲಿ ಗೆದ್ದಿತ್ತು. ನ್ಯೂಜಿಲ್ಯಾಂಡ್‌ ಐದರಲ್ಲಿ ಮೇಲುಗೈ ಸಾಧಿಸಿದೆ. 2 ಸರಣಿ ಸಮಬಲದಲ್ಲಿ ಮುಗಿದಿದೆ. ಈವರೆಗೆ ಒಟ್ಟು 23 ಟೆಸ್ಟ್‌ ಪಂದ್ಯಗಳನ್ನು ಆಡಿದೆ. ಇದರಲ್ಲಿ ಕೇವಲ 5 ಪಂದ್ಯಗಳಲ್ಲಷ್ಟೆ ಗೆದ್ದಿದೆ. 8 ಪಂದ್ಯಗಳನ್ನು ಸೋತಿರುವ ಭಾರತ, ಒಟ್ಟು 10 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.

    India vs New Zealand: ನಾಳೆ ಮೊದಲ ಟೆಸ್ಟ್; ಟೀಂ ಇಂಡಿಯಾ ಆಟಗಾರರ ಅಭ್ಯಾಸ ಹೀಗಿದೆ ನೋಡಿ!

    ಭಾರತ 1967-68ರಲ್ಲಿ ಮೊದಲ ಸಲ ಕಿವೀಸ್ ನಾಡಿಗೆ ತೆರಳಿತ್ತು. ಇದು ಭಾರತದ ಅತ್ಯಂತ ಯಶಸ್ವಿ ನ್ಯೂಜಿಲೆಂಡ್ ಪ್ರವಾಸ. ಮನ್ಸೂರ್‌ ಅಲಿಖಾನ್‌ ಪಟೌಡಿ ಸಾರಥ್ಯದ ಭಾರತ 4 ಟೆಸ್ಟ್‌ಗಳಲ್ಲಿ ಮೂರನ್ನು ಗೆದ್ದಿತ್ತು. ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿತ್ತು.

     



    ಇನ್ನು ಭಾರತ ವೆಲ್ಲಿಂಗ್ಟನ್‌ನಲ್ಲಿ ಈವರೆಗೆ 7 ಟೆಸ್ಟ್‌ ಗಳನ್ನಾಡಿದೆ. ಒಂದರಲ್ಲಷ್ಟೇ ಜಯಿಸಿದೆ. ಇದು 1967-68ರ ಪ್ರಥಮ ಸರಣಿಯಲ್ಲಿ ಒಲಿದಿತ್ತು.

    1968ರ ಬಳಿಕ ಟೀಂ ಇಂಡಿಯಾ ವೆಲ್ಲಿಂಗ್ಟನ್​ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಒಮ್ಮೆಯೂ ಗೆಲುವು ಸಾಧಿಸಲಿಲ್ಲ. ಸದ್ಯ ವಿರಾಟ್‌ ಕೊಹ್ಲಿಗೆ ವಿಶೇಷ ದಾಖಲೆ ಒಂದನ್ನು ಸರಿಗಟ್ಟುವ ಅವಕಾಶ ಲಭ್ಯವಾಗಲಿದೆ.

    ಹೆಂಡತಿಯೊಂದಿಗೆ ನಟನೆಯತ್ತ ಮುಖಮಾಡಿದ ಟೀಂ ಇಂಡಿಯಾದ ಮಾಜಿ ಆಟಗಾರ!

    52 ವರ್ಷಗಳ ಹಿಂದೆ ಮಾಜಿ ನಾಯಕ ದಿವಂಗತ ಮನ್ಸೂರ್‌ ಅಲಿ ಖಾನ್‌ ಪಟೌಡಿ ಅವರ ಸಾರಥ್ಯದಲ್ಲಿ ಭಾರತಕ್ಕೆ ಇಲ್ಲಿ ಜಯ ಸಿಕ್ಕಿತ್ತು. ಬಳಿಕ ನಡೆದ ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿದೆ. ಇದೀಗ ವಿರಾಟ್ ಕೊಹ್ಲಿ ವೆಲ್ಲಿಂಗ್ಟನ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಪಟೌಡಿ ದಾಖಲೆ ಸರಿಗಟ್ಟಲಿದ್ದಾರೆ.

     



    ಟೇಲರ್‌ಗೆ 100ನೇ ಪಂದ್ಯ: ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್‌ಗೆ ಇದು 100ನೇ ಪಂದ್ಯ. ನಾಳೆಯ ಪಂದ್ಯದಲ್ಲಿ ಆಡಲು ಇಳಿದರೆ, ಎಲ್ಲ ಮಾದರಿಯಲ್ಲೂ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಖ್ಯಾತಿ ಅವರದ್ದಾಗಲಿದೆ.

    First published: