IND vs NZ: ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲಿದ್ದಾರಾ ರೋಹಿತ್ ಶರ್ಮಾ..!

India vs New Zealand: ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್​ನಿಂದ 27 ರನ್​ಗಳು ಸಿಡಿದರೆ ಸಚಿನ್​ರ 673ರನ್ ದಾಖಲೆ ನಿರ್ನಾಮವಾಗಲಿದೆ. ಈ ಮೂಲಕ ಭಾರತದ ಪರ ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಹಿಟ್​ಮ್ಯಾನ್ ಪಾತ್ರವಾಗಲಿದ್ದಾರೆ.

zahir | news18
Updated:July 9, 2019, 9:13 PM IST
IND vs NZ: ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲಿದ್ದಾರಾ ರೋಹಿತ್ ಶರ್ಮಾ..!
ರೋಹಿತ್ ಶರ್ಮಾ
  • News18
  • Last Updated: July 9, 2019, 9:13 PM IST
  • Share this:
ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆಯೊಂದು ನಿರ್ಮಣವಾಗುವ ಸಾಧ್ಯತೆಯಿದೆ. ವರ್ಲ್ಡ್​ಕಪ್ ಇತಿಹಾಸದಲ್ಲೇ ಸರ್ವಶ್ರೇಷ್ಠ ದಾಖಲೆ ಎನ್ನಲಾಗಿರುವ 673 ರನ್​ಗಳ ರೆಕಾರ್ಡ್​ ಮುರಿಯುವ ಅವಕಾಶವೊಂದು ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಅವರ ಮುಂದಿದೆ.

2003ರ ವಿಶ್ವಕಪ್​ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ನಿರ್ಮಿಸಿರುವ ರನ್​ ದಾಖಲೆಯನ್ನು ಅಳಿಸಿ ಹಾಕಲು ರೋಹಿತ್​ಗೆ ಬೇಕಿರುವುದು ಕೇವಲ 27 ರನ್​ಗಳು ಮಾತ್ರ.ಈಗಾಗಲೇ ಹಿಟ್​ಮ್ಯಾನ್  ಐದು ಶತಕ ಹಾಗೂ ಒಂದು ಅರ್ಧಶತಕದೊಂದಿಗೆ 647 ರನ್​ ಕಲೆ ಹಾಕಿ ಟೂರ್ನಿಯಲ್ಲೇ ಅತ್ಯಧಿಕ ರನ್​ ಬಾರಿಸಿದ ಆಟಗಾರರನಾಗಿ ಅಗ್ರಸ್ಥಾನದಲ್ಲಿದ್ದಾರೆ.

ಇನ್ನು ಕಿವೀಸ್ ವಿರುದ್ಧ 12 ರನ್​ ಕಲೆ ಹಾಕಿದರೆ ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಪಟ್ಟಿಯಲ್ಲಿ ರೋಹಿತ್ ಶರ್ಮಾ ದ್ವಿತೀಯ ಸ್ಥಾನಕ್ಕೇರಲಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್  659 ರನ್​ಗಳನ್ನು ಬಾರಿಸಿ ದ್ವಿತೀಯ ಎರಡನೇ ಸ್ಥಾನವನ್ನು ಅಲಂಕರಿಸಿದ್ದರು.

ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್​ನಿಂದ 27 ರನ್​ಗಳು ಸಿಡಿದರೆ ಸಚಿನ್​ರ 673ರನ್ ದಾಖಲೆ ನಿರ್ನಾಮವಾಗಲಿದೆ. ಈ ಮೂಲಕ ಭಾರತದ ಪರ ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಹಿಟ್​ಮ್ಯಾನ್ ಪಾತ್ರವಾಗಲಿದ್ದಾರೆ.

ಅದೇ ರೀತಿ ಈ ಪಂದ್ಯದಲ್ಲಿ 53 ರನ್​ಗಳನ್ನು ರೋಹಿತ್ ಕಲೆ ಹಾಕಿದರೆ ಕ್ರಿಕೆಟ್​ ಇತಿಹಾಸದಲ್ಲೇ ಟೂರ್ನಿಯೊಂದರಲ್ಲಿ 700 ರನ್​ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಾಣವಾಗಲಿದೆ. ಇದರ ಹೊರತಾಗಿ ಟೀಂ ಇಂಡಿಯಾ ವಿಶ್ವಕಪ್ ಫೈನಲ್​ ಪ್ರವೇಶಿಸಿದರೆ ರನ್​ ಪ್ರವಾಹ ಹರಿಸಲು ಮತ್ತೊಂದು ಅವಕಾಶ ಕೂಡ ಹಿಟ್​ಮ್ಯಾನ್​ಗೆ ದೊರೆಯಲಿದೆ.  ಹೀಗಾಗಿ ಸಚಿನ್ ತೆಂಡೂಲ್ಕರ್​ ದಾಖಲೆಯನ್ನು ಅಳಿಸಿ ಹಾಕಿ ಹೊಸ ದಾಖಲೆಯನ್ನು ರೋಹಿತ್ ಶರ್ಮಾ ಬರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

First published:July 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading