(VIDEO): ಬೌಂಡರಿ ಲೈನ್ ಗೆರೆದಾಟಿ ಸ್ಯಾಮ್ಸನ್ ಜಂಪ್; ಕ್ಯಾಚ್ ಹಿಡಿದು ಸಿಕ್ಸ್​ ತಡೆದಿದ್ದು ಮಾತ್ರ ಅದ್ಭುತ!

Sanju Samson: ಸಂಜು ಸ್ಯಾಮ್ಸನ್ ಅದ್ಭುತ ರೀತಿಯಲ್ಲಿ ಫೀಲ್ಡಿಂಗ್ ಮಾಡಿ ಭಾರೀ ಪ್ರಶಂಸೆಗೆ ಪಾತ್ರರಾದರು. ಇಂದಿನ ಪಂದ್ಯದಲ್ಲಿ ಸ್ಯಾಮ್ಸನ್ ಬ್ಯಾಟಿಂಗ್​ನಲ್ಲಿ ಮಿಂಚಿಲ್ಲವಾದರೂ ಫೀಲ್ಡಿಂಗ್​ನಲ್ಲಿ ಚುರುಕುತನ ತೋರಿಸಿ ಸೈ ಎನಿಸಿಕೊಂಡರು.

ಸಂಜು ಸ್ಯಾಮ್ಸನ್ ಕ್ಯಾಚ್.

ಸಂಜು ಸ್ಯಾಮ್ಸನ್ ಕ್ಯಾಚ್.

  • Share this:
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ-20 ಸರಣಿ ಕೊನೆಯಗೊಂಡಿದೆ. ಟೀಂ ಇಂಡಿಯಾ 5-0 ಅಂತರದಿಂದ ಸರಣಿ ಕ್ಲೀನ್​ ಸ್ವೀಪ್ ಮಾಡಿ ವಿಶ್ವದಾಖಲೆ ಬರೆದರೆ, ಇತ್ತ ಕಿವೀಸ್ ಪಡೆ ತವರಿನಲ್ಲಿ ಹಿಂದೆಂದೂ ಕಾಣದ ಭಾರೀ ಮುಖಭಂಗ ಅನುಭವಿಸಿದೆ.

ಒಂದು ಹಂತದಲ್ಲಿ ನ್ಯೂಜಿಲೆಂಡ್ ಗೆಲುವಿನ ಸಮೀಪ ಇತ್ತಾದರು ಭಾರತೀಯರ ಚುರುಕಿನ ಫೀಲ್ಡಿಂಗ್ ಹಾಗೂ ಬೌಲರ್​ಗಳ ಸಂಘಟಿಯ ಹೋರಾಟದ ನೆರವಿನಿಂದ ಕಿವೀಸ್ ಪಡೆಯನ್ನು ಕಟ್ಟಿ ಹಾಕಲು ಯಶಸ್ವಿಯಾಯಿತು.

ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಅದಾಗಲೇ ಸೋಲಿನ ಸುಳಿಯಲ್ಲಿ ಸಿಲುಕಿದ್ದ ನ್ಯೂಜಿಲೆಂಡ್​ಗೆ ಗೆಲುವಿನ ರುಚಿ ತೋರಿಸಿದ್ದು ರಾಸ್ ಟೇಲರ್ ಹಾಗೂ ಟಿಮ್ ಸೀಫರ್ಟ್​. ಸ್ಪೋಟಕ ಆಟವಾಡಿದ ಈ ಜೋಡಿ 99 ರನ್​ಗಳ ಕಾಣಿಕೆ ನೀಡಿತು. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು.

Rohit Sharma: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಹಿಟ್​ಮ್ಯಾನ್​; ಏನದು ಗೊತ್ತಾ..?

ಆದರೆ, ಭಾರತ ಬೌಲಿಂಗ್​ನ 8ನೇ ಓವರ್​ನಲ್ಲಿ ಟೇಲರ್ ಚೆಂಡನ್ನು ಸಿಕ್ಸ್​ಗೆ ಅಟ್ಟದ ವೇಳೆ ಸಂಜು ಸ್ಯಾಮ್ಸನ್ ಅದ್ಭುತ ರೀತಿಯಲ್ಲಿ ಫೀಲ್ಡಿಂಗ್ ಮಾಡಿ ಭಾರೀ ಪ್ರಶಂಸೆಗೆ ಪಾತ್ರರಾದರು. ಇಂದಿನ ಪಂದ್ಯದಲ್ಲಿ ಸ್ಯಾಮ್ಸನ್ ಬ್ಯಾಟಿಂಗ್​ನಲ್ಲಿ ಮಿಂಚಿಲ್ಲವಾದರೂ ಫೀಲ್ಡಿಂಗ್​ನಲ್ಲಿ ಚುರುಕುತನ ತೋರಿಸಿ ಸೈ ಎನಿಸಿಕೊಂಡರು.

 ಶಾರ್ದೂಲ್ ಠಾಕೂರ್ ಬೌಲಿಂಗ್​ನ 8ನೇ ಓವರ್​, ಕೊನೆಯ ಎಸೆತವನ್ನು​ ಟೇಲರ್​ ಮಿಡ್​ ವಿಕೆಟ್​ ಮೂಲಕ ಬ್ಯಾಟ್​ ಬೀಸಿದರು. ಇನ್ನೇನು ಚೆಂಡು ಬೌಂಡರಿ ಗಡಿದಾಟಿ ಸಿಕ್ಸರ್​ ಹೋಗುತ್ತೆ ಎಂಬುವ ಹೊತ್ತಿಗೆ ಸ್ಯಾಮ್ಸನ್​, ಚಂಗನೆ ಹಾರಿ ಕ್ಯಾಚ್​ ಹಿಡಿದರು.

 India vs New Zealand: ಸರಣಿ ಕ್ಲೀನ್​ಸ್ವೀಪ್​; ಕಿವೀಸ್ ನೆಲದಲ್ಲಿ ಇತಿಹಾಸ ಬರೆದ ಭಾರತ!

ಆದರೆ, ಸ್ಯಾಮ್ಸನ್ ಹಿಡಿದ ಈ ಅದ್ಭುತ ಕ್ಯಾಚ್ ಬೌಂಡರಿ ಗಡಿ ದಾಟಿದ ಮೇಲಾಗಿತ್ತು. ತಾನು ಗಾಳಿಯಲ್ಲಿರುವಾಗಲೇ ಸ್ಯಾಮ್ಸನ್ ಕ್ಯಾಚ್ ಹಿಡಿದು ಚೆಂಡನ್ನು ಬೌಂಡರಿ ಒಳಗೆ ಎಸೆದರು. ಹೀಗಾಗಿ ಕಿವೀಸ್​ಗೆ 2 ರನ್​ ಅಷ್ಟೇ ಸ್ಯಾಮ್ಸನ್ ಬಿಟ್ಟುಕೊಟ್ಟರು.

ಸದ್ಯ ಸ್ಯಾಮ್ಸನ್ ಅವರ ಈ ಅದ್ಭುತ ಫೀಲ್ಡಿಂಗ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 First published: