ಆಕ್ಲೆಂಡ್ (ಜ. 24): ಇಲ್ಲಿನ ಈಡನ್ ಪಾರ್ಕ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಐಯರ್ ಸ್ಫೋಟಕ ಅರ್ಧಶತಕದ ನೆರವಿನಿಂದ 7 ವಿಕೆಟ್ಗಳ ಜಯ ಸಾಧಿಸಿದ ಕೊಹ್ಲಿ ಪಡೆ ಐದು ಟಿ-20 ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ನ್ಯೂಜಿಲೆಂಡ್ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಮಾರ್ಟಿನ್ ಗಪ್ಟಿಲ್ ಹಾಗೂ ಕಾಲಿನ್ ಮನ್ರೊ ಬೌಂಡರಿ- ಸಿಕ್ಸರ್ಗಳ ಮಳೆ ಸುರಿಸಿದರು. ಇವರ ಹೊಡಿಬಡಿ ಆಟಕ್ಕೆ ಬ್ರೇಕ್ ಹಾಕಿದ್ದು ರೋಹಿರ್ ಶರ್ಮಾ ಹಿಡಿದ ಆ ಒಂದು ಕ್ಯಾಚ್.
8ನೇ ಓವರ್ ಬೌಲಿಂಗ್ ಮಾಡಲು ಬಂದ ಶಿವಂ ದುಬೆ ತಮ್ಮ ಐದನೇ ಎಸೆತವನ್ನು ಶಾರ್ಟ್ ಬಾಲ್ ಆಗಿ ಎಸೆತದರು. ಬ್ಯಾಟಿಂಗ್ ಮಾಡುತ್ತಿದ್ದ ಮಾರ್ಟಿನ್ ಗಪ್ಟಿಲ್ ಚೆಂಡನ್ನು ಸಿಕ್ಸ್ಗೆಂದು ಅಟ್ಟಿದರು. ಇನ್ನೇನು ಚೆಂಡು ಬೌಂಡರಿ ಗೆರೆ ದಾಟುತ್ತೆ ಎಂಬುವ ಹೊತ್ತಗೆ ರೋಹಿತ್ ಶರ್ಮಾ ಹಾರಿ ಅತ್ಯುತ್ತಮವಾಗಿ ಚೆಂಡನ್ನು ಹಿಡಿದರು.
#RohitSharma Outstanding Catch In Today's Match!
Watch & Retweet And Don't Forget To Follow Our Page! #NZvsIND #NZAvINDA pic.twitter.com/x4Mpdgqdqm
— rajnishsingh (@Stock_Investor) January 24, 2020
ಈ ಮೂಲಕ ಗಪ್ಟಿಲ್ 19 ಎಸೆತಗಳಲ್ಲಿ 30 ರನ್ ಗಳಿಸಿ ಪೆವಿಲಿಯನ್ ಸೇರಿಕೊಳ್ಳುವಂತೆ ಮಾಡಿದರು. ನ್ಯೂಜಿಲೆಂಡ್ ಅಂತಿಮವಾಗಿ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿತು.
204 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಬಳಿಕ ಕೆ ಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದ ರನ್ ಗತಿಯನ್ನು ಏರಿಸಿದರು. ಕ್ಯಾಪ್ಟನ್ ಖಾತೆಯಿಂದ ಮತ್ತೊಂದು ಅಮೋಘ ಇನ್ನಿಂಗ್ಸ್ ಮೂಡಿಬಂತು.
ಆದರೆ, ಕೊಹ್ಲಿ ಔಟ್ ಆಗಿದ್ದು ಮಾತ್ರ ಯಾರು ಊಹಿಸಲಾಗದ ರೀತಿಯಲ್ಲಿತ್ತು. 12ನೇ ಓವರ್ನ ಟಿಕ್ನೆರ್ ಬೌಲಿಂಗ್ನಲ್ಲಿ ಕೊಹ್ಲಿ ಚೆಂಡನ್ನು ಬೌಂಡರಿಗೆ ಅಟ್ಟಲು ಯತ್ನಿಸಿದರು. ಆದರೆ, ಚೆಂಡು ಗಾಳಿಯಲ್ಲಿ ಹಾರಿತು. ಈ ಸಂದರ್ಭ ಬೌಂಡರಿ ಲೈನ್ ಬಳಿಯಿಂದ ಓಡಿ ಬಂದ ಗಪ್ಟಿಲ್ ಡೈ ಬಿದ್ದು ರೋಚಕ ಕ್ಯಾಚ್ ಹಿಡಿದರು. ಈ ಮೂಲಕ ಮಾರ್ಟಿನ್ ಕೂಡ ಎದುರಾಳಿ ಆಟಗಾರನ ಅದ್ಭುತ ಕ್ಯಾಚ್ ಹಿಡಿದು ಸೇಡು ತೀರಿಸಿಕೊಂಡರು.
IND vs NZ: ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಕೊಹ್ಲಿ; ಯಾಕೆ ಗೊತ್ತಾ..?
Martin guptill special game changing moment #NZvsIND pic.twitter.com/huFhHk2Zkq
— Azhar (@Azhar45918919) January 24, 2020
#INDvsNZ #RohitSharma #ShreyasIyer #viratkohli pic.twitter.com/9gYQmYPFQG
— Aryan singh 🇮🇳 (@addaofcricket) January 24, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ