ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ?; ಈಗ ಹೇಗಿದೆ ಮ್ಯಾಂಚೆಸ್ಟರ್ ಹವಾಮಾನ?

12 ಗಂಟೆಗೆ (5.30 ಪಿಎಂ ಐಎಸ್​ಟಿ) ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಿದ್ದು, 3 ಗಂಟೆಗೆ (7.30 ಪಿಎಂ ಐಎಸ್​ಟಿ) ಭಾರೀ ಮಳೆ ಆಗಲಿದೆ. ಹಾಗಾಗಿ ಇಂದಿನ ಪಂದ್ಯ ರದ್ದಾದರೂ ಅಚ್ಚರಿ ಇಲ್ಲ.

Rajesh Duggumane | news18
Updated:July 9, 2019, 12:51 PM IST
ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ?; ಈಗ ಹೇಗಿದೆ ಮ್ಯಾಂಚೆಸ್ಟರ್ ಹವಾಮಾನ?
ಸಾಂದರ್ಭಿಕ ಚಿತ್ರ
  • News18
  • Last Updated: July 9, 2019, 12:51 PM IST
  • Share this:
ಅದು ಜೂನ್​ 31. ವಿಶ್ವಕಪ್​ನಲ್ಲಿ ಭಾರತ-ನ್ಯೂಜಿಲೆಂಡ್​ ಮುಖಾಮುಖಿ ಆಗಬೇಕಿತ್ತು. ಆದರೆ, ಮಳೆಯಿಂದಾಗಿ ಈ ಪಂದ್ಯ ರದ್ದಾಗಿತ್ತು.  ಸೆಮಿ ಫೈನಲ್​ನಲ್ಲಿ ಈಗ ಮತ್ತೆ ಈ ಎರಡು ತಂಡಗಳು ಕಾದಾಡುತ್ತಿವೆ. ಆದರೆ, ಈ ಪಂದ್ಯಕ್ಕೂ ಮಳೆ ಅಡ್ಡಿ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಫೆಬ್ರವರಿ ತಿಂಗಳಲ್ಲಿ ಭಾರತ ಕ್ರಿಕೆಟ್​ ತಂಡದ ವಿರುದ್ಧ 4-1 ಅಂತರದಲ್ಲಿ ನ್ಯೂಜಿಲೆಂಡ್​ ಸೋತಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ನ್ಯೂಜಿಲೆಂಡ್ ಇದೆ. ಆದರೆ, ಇದಕ್ಕೆ ಅವಕಾಶ ನೀಡದಿರಲು ಭಾರತ ತಂಡ ತಂತ್ರ ಹೆಣೆದಿದೆ. ಈ ಮಧ್ಯೆ, ಹವಾಮಾನ ಇಲಾಖೆ ನೀಡಿದ ವರದಿ ಈಗ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಮ್ಯಾಂಚೆಸ್ಟರ್​ನಲ್ಲಿ ಸ್ಥಳೀಯ ಕಾಲಮಾನ 10 ಗಂಟೆಗೆ ಭಾರತ-ನ್ಯೂಜಿಲೆಂಡ್​ ಪಂದ್ಯ ಆರಂಭಗೊಳ್ಳಲಿದೆ. ಆದರೆ, ಇಡೀ ದಿನ ಮ್ಯಾಂಚೆಸ್ಟರ್​ನಲ್ಲಿ ಮಳೆ ಸುರಿಯಲಿದೆ. ಮಧ್ಯಾಹ್ನದ ವೇಳೆಗೆ ಮಳೆ ಕೊಂಚ ಕಡಿಮೆ ಆದರೂ, ಸಂಜೆ ವೇಳೆಗೆ ಮತ್ತೆ ವರುಣನ ಅಬ್ಬರ ಜೋರಾಗಲಿದೆ ಎಂಬುದು ಲಂಡನ್​ ಹವಾಮಾನ ಇಲಾಖೆಯ ವರದಿ.12 ಗಂಟೆಗೆ (5.30 ಪಿಎಂ ಐಎಸ್​ಟಿ) ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಿದ್ದು, 3 ಗಂಟೆಗೆ (7.30 ಪಿಎಂ ಐಎಸ್​ಟಿ) ಭಾರೀ ಮಳೆ ಆಗಲಿದೆ. ಹಾಗಾಗಿ ಇಂದಿನ ಪಂದ್ಯ ರದ್ದಾದರೂ ಅಚ್ಚರಿ ಇಲ್ಲ. ಒಂದೊಮ್ಮೆ ಇಂದು ಪಂದ್ಯ ರದ್ದಾದರೆ, ಬುಧವಾರ  ಈ ಪಂದ್ಯ ನಡೆಯಲಿದೆ. ಆಗಲೂ ಮಳೆಯ ಅಡಚಣೆ ಉಂಟಾದರೆ, ಹೆಚ್ಚು ಅಂಕ ಹೊಂದಿರುವ ತಂಡ ಫೈನಲ್​ ಪ್ರವೇಶಿಸಲಿದೆ. ಹೀಗಾದರೆ ಭಾರತ ಫೈನಲ್​ ಪ್ರವೇಶಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್​ ಸೆಮಿ ಫೈನಲ್​ಗೆ ವರುಣನ ಅಡ್ಡಿ: ಮಳೆ ಬಂದರೆ ಫೈನಲ್​ಗೇರುವ ತಂಡ ಯಾವುದು?

First published: July 9, 2019, 12:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading