IND vs NZ: (VIDEO) ಗಾಳಿಯಲ್ಲಿ ಹಾರಿದ ಬೇಲ್ಸ್; ಹೀನಾಯವಾಗಿ ಕ್ಲೀನ್ ಬೌಲ್ಡ್​ ಆದ ಪೃಥ್ವಿ ಶಾ

Prithvi Shaw: ಶಾ ಇದೇ ಮಾದರಿಯಲ್ಲಿ ಔಟ್ ಆಗುತ್ತಿರುವುದು ಮೊದಲೇನಲ್ಲ. ಕಳೆದ ಅಭ್ಯಾಸ ಪಂದ್ಯದಲ್ಲೂ ಪೃಥ್ವಿ ಅವರು ಡ್ಯಾರಿಲ್ ಮಿಚೆಲ್ ಬೌಲಿಂಗ್​ನಲ್ಲಿ ಫೃಂಟ್ ಫೂಟ್ ಮೂವ್ ಮಾಡದೆ ಬ್ಯಾಟ್ ಬೀಸಲು ಮುಂದಾಗಿ ಬೌಲ್ಡ್​ ಆಗಿದ್ದರು.

ಪೃಥ್ವಿ ಶಾ ಔಟ್ ಆದ ಬಗೆ.

ಪೃಥ್ವಿ ಶಾ ಔಟ್ ಆದ ಬಗೆ.

  • Share this:
ವೆಲ್ಲಿಂಗ್ಟನ್ (ಫೆ. 21): ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲೇ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ. ಇಲ್ಲಿನ ಬೇಸಿನ್ ರಿಸರ್ವ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಅದರಲ್ಲು ಟೀಂ ಇಂಡಿಯಾದ ಹೊಸ ಓಪನರ್​ಗಳಾದ ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಮತ್ತೆ ಎಡವಿದರು. ಏಕದಿನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಈ ಜೋಡಿ, ಸದ್ಯ ಟೆಸ್ಟ್​ನಲ್ಲೂ ಕಮಾಲ್ ಮಾಡಲಿಲ್ಲ.

Absolute ripper! Prithvi Shaw walks back as Tim Southee removes him with a jaffa in Wellington Test - Video
ಪೃಥ್ವಿ ಶಾ ಔಟ್ ಆಗಿ ಪೆವಿಲಿಯನ್ ಕಡೆ ಸಾಗುತ್ತಿರುವುದು.


IND vs NZ: ಭಾರತೀಯ ಬ್ಯಾಟ್ಸ್​ಮನ್​ಗಳ ಕಳಪೆ ಆಟ; ಪ್ರಮುಖ 5 ವಿಕೆಟ್ ಪತನ

16 ರನ್​ಗೆ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು! 18 ಎಸೆತಗಳಲ್ಲಿ 2 ಬೌಂಡರಿ ಬಾರಿಸಿ ಪೃಥ್ವಿ ಶಾ 16 ರನ್ ಗಳಿಸಿ ಟಿಮ್ ಸೌಥೀ​ ಬೌಲಿಂಗ್​ನಲ್ಲಿ ಹೀನಾಯವಾಗಿ ಕ್ಲೀನ್ ಬೌಲ್ಡ್​ ಆದರು. ಸೌಥೀ ಎಸೆದ ಔಟ್ ಸ್ವಿಂಗ್ ಬಾಲ್ ಅನ್ನು ಎದುರಿಸಲು ಶಾ ವಿಫಲರಾದರು.

ಶಾ ಇದೇ ಮಾದರಿಯಲ್ಲಿ ಔಟ್ ಆಗುತ್ತಿರುವುದು ಮೊದಲೇನಲ್ಲ. ಕಳೆದ ಅಭ್ಯಾಸ ಪಂದ್ಯದಲ್ಲೂ ಪೃಥ್ವಿ ಅವರು ಡ್ಯಾರಿಲ್ ಮಿಚೆಲ್ ಬೌಲಿಂಗ್​ನಲ್ಲಿ ಫೃಂಟ್ ಫೂಟ್ ಮೂವ್ ಮಾಡದೆ ಬ್ಯಾಟ್ ಬೀಸಲು ಮುಂದಾಗಿ ಬೌಲ್ಡ್​ ಆಗಿದ್ದರು. ಏಕದಿನಲ್ಲೂ ಹೀಗೇ ನಿರ್ಗಮಿಸಿದ್ದರು.

 IPL 2020: ಐಪಿಎಲ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬಿಸಿಸಿಐ; ಏನದು?

ಸದ್ಯ ಟೀಂ ಇಂಡಿಯಾ ಟೀ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 122 ರನ್ ಕಲೆಹಾಕಿದೆ. ಅಜಿಂಕ್ಯಾ ರಹಾನೆ 38 ಹಾಗೂ ರಿಷಭ್ ಪಂತ್ 10 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಮಯಾಂಕ್ ಅಗರ್ವಾಲ್ 34 ರನ್​ಗೆ ಔಟ್ ಆದರೆ, ಚೇತೇಶ್ವರ್ ಪೂಜಾರ(11), ವಿರಾಟ್ ಕೊಹ್ಲಿ(2) ಹಾಗೂ ಹನುಮಾ ವಿಹಾರಿ(7) ಬೇಗನೆ ನಿರ್ಗಮಿಸಿದರು.

ಇನ್ನೂ ಕಿವೀಸ್ ಪರ ರಾಸ್ ಟೇಲರ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 100 ಟೆಸ್ಟ್‌ಗಳನ್ನು ಆಡಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್, ಏಕದಿನ ಹಾಗೂ ಟಿ-20 ಕ್ರಿಕೆಟ್​ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ಆಟಗಾರನೆಂಬ ಕೀರ್ತಿಗೆ ಪಾತ್ರವಾದರು.

First published: