IND vs NZ: ನ್ಯೂಜಿಲೆಂಡ್ ಪ್ರವಾಸದಿಂದ ಟೀಂ ಇಂಡಿಯಾ ಸ್ಟಾರ್ ಆಟಗಾರ ಔಟ್

ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಮುಗಿಸಿದ ಬಳಿಕ ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದೆ. ಕಿವೀಸ್ ನಾಡಲ್ಲಿ ಕೊಹ್ಲಿ ಪಡೆ ಐದು ಪಂದ್ಯಗಳ ಟಿ-20, ಮೂರು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ.

news18-kannada
Updated:January 8, 2020, 3:46 PM IST
IND vs NZ: ನ್ಯೂಜಿಲೆಂಡ್ ಪ್ರವಾಸದಿಂದ ಟೀಂ ಇಂಡಿಯಾ ಸ್ಟಾರ್ ಆಟಗಾರ ಔಟ್
India vs New Zealand: Hardik Pandya ruled out of Test series
  • Share this:
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಗಾಯಗೊಂಡ ಪರಿಣಾಮ ಭಾರತ ಎ ತಂಡದ ಮುಂದಿನ ನ್ಯೂಜಿಲೆಂಡ್ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಭಾರತ ಎ ತಂಡ ನ್ಯೂಜಿಲ್ಯಾಂಡ್ ಪ್ರವಾಸ ತೆರಳಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ನಾಲ್ಕು ದಿನಗಳ ಎರಡು ಟೆಸ್ಟ್ ಪಂದ್ಯವನ್ನು ನ್ಯೂಜಿಲ್ಯಾಂಡ್ 'ಎ' ವಿರುದ್ಧ ಆಡಲಿದೆ.

ಕಳೆದ ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಪೃಥ್ವಿ ಶಾ ಮೊದಲ ಇನ್ನಿಂಗ್ಸ್‌ನಲ್ಲಿ ಗಾಯಗೊಂಡಿದ್ದರು. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಶಾ ಬ್ಯಾಟಿಂಗ್‌ಗೆ ಇಳಿಯಲು ಸಾಧ್ಯವಾಗಿರಲಿಲ್ಲ.

India vs New Zealand: Prithvi Shaw ruled out of India A’s practice games in New Zealand
ಪೃಥ್ವಿ ಶಾ ರಣಜಿ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿರುವುದು


IPL 2020: ಈ ಬಾರಿಯ ಐಪಿಎಲ್​​ನಲ್ಲಿ ಆರ್​ಸಿಬಿ ತಂಡ ಹೀಗಿದ್ದರೆ ಗೆಲುವು ಖಚಿತ!

ಸದ್ಯ ಬೆಂಗಳೂರಿನ ಎನ್‌ಸಿಎಗೆ ಪೃಥ್ವಿ ಶಾ ಆಗಮಿಸಿದ್ದು, ಭುಜದ ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಗಿದೆ. ಲ್ಯಾಬರಲ್ ಟಿಯರ್ ಇರುವುದು ಧೃಡಪಟ್ಟಿದೆ.

ಪೃಥ್ವಿ ಶಾ ಕಳೆದ ವರ್ಷ ಟೀಂ ಇಂಡಿಯಾ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಎರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಶಾ ಮೂರು ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. ಒಂದು ಶತಕ ಮತ್ತು ಒಂದು ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದಾರೆ.

ಬಳಿಕ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಶಾ 6 ತಿಂಗಳ ನಿಶೇಧಕ್ಕೆ ಗುರಿಯಾಗಿದ್ದರು. ಕಳೆದ ನವೆಂಬರ್‌ನಲ್ಲಿ ಸೈಯ್ಯದ್ ಮುಶ್ತಾಕ್ ಅಲಿ ಟೂರ್ನಿಯಲ್ಲಿ ಕಮ್​ಬ್ಯಾಕ್​ ಮಾಡುವ ಮೂಲಕ ದೇಶೀಯ ಟೂರ್ನಿಯಲ್ಲಿ ಮತ್ತೆ ಸಂಚಲನ ಸೃಷ್ಟಿಸಿದ್ದರು. ಆದರೆ, ಸದ್ಯ ಶಾ ಅವರು ಇಂಜುರಿ ಸಮಸ್ಯೆಗೆ ತುತ್ತಾದ ಕಾರಣ ನ್ಯೂಜಿಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ.IND vs SL: ಐಯರ್ ಸಿಡಿಸಿದ ಸಿಕ್ಸ್​ ಕಂಡು ದಂಗಾದ ಕೊಹ್ಲಿ; ಇಲ್ಲಿದೆ ವೈರಲ್ ವಿಡಿಯೋ

ಅಮಾನತು ಶಿಕ್ಷೆಯಿಂದ ಹೊರಬಂದ ಬಳಿಕ ಮುಂಬೈ ತಂಡದ ಪರ ಆಟ ಆರಂಭಿಸಿದ ಪೃಥ್ವಿ ಶಾ ಉತ್ತಮ ಫಾರ್ಮ್​ನಲ್ಲಿದ್ದರು. ಬರೋಡ ವಿರುದ್ಧದ ರಣಜಿ ಪಂದ್ಯದಲ್ಲಿ ಪೃಥ್ವಿ ಶಾ ದ್ವಿಶತಕ ಬಾರಿಸಿ ಅಬ್ಬರಿಸಿದ್ದರು. ಆದರೆ, ಕಳೆದ ಭಾನುವಾರ ಅಂತ್ಯಗೊಂಡ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಗಾಯದ ಸಮಸ್ಯೆಗೆ ತುತ್ತಾದರು.

ಕ್ಷೇತ್ರ ರಕ್ಷಣೆ ಮಾಡುವ ವೇಳೆ ಉರುಳಿಹೋಗುತ್ತಿದ್ದ ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಭಜದ ಮೇಲೆ ಒತ್ತಡ ಹೇರಿ ಬಿದ್ದು ಗಾಯಗೊಂಡರು. ಪ್ರಾಥಮಿಕ ವೈದ್ಯಕೀಯ ತಪಾಸಣೆಯ ವರದಿ ಪ್ರಕಾರ ಅವರ ಎಡ ಭುಜದ ಮಾಂಸಖಂಡ ಕೊಂಚ ಹರಿದಿತ್ತು.

ಭಾರತ ಎ ತಂಡ ನ್ಯೂಜಿಲೆಂಡ್ ಎ ವಿರುದ್ಧ ಜನವರಿ 22 ರಂದು ಮೊದಲ ಅನಧಿಕೃತ ಏಕದಿನ ಪಂದ್ಯವನ್ನಾಡಲಿದೆ. 2ನೇ ಏಕದಿನ ಜ. 24 ಹಾಗೂ ಜ. 26 ರಂದು ಮೂರನೇ ಏಕದಿನ ಪಂದ್ಯ ನಡೆಯಲಿದೆ. ಎರಡು ಅನಧಿಕೃ ಟೆಸ್ಟ್​ ಸರಣಿ ಪೈಕಿ ಮೊದಲ ಪಂದ್ಯ ಜ. 30 ರಿಂದ ಹಾಗೂ ಎರಡನೇ ಟೆಸ್ಟ್​ ಫೆ. 07 ರಿಂದ ಆರಂಭವಾಗಲಿದೆ.

IPL 2020; ಈ ಬಾರಿಯ ಐಪಿಎಲ್ ಎಷ್ಟು ದಿನ ನಡೆಯಲಿದೆ ಗೊತ್ತಾ?; ಸಮಯದಲ್ಲೂ ಬದಲಾವಣೆ!

ಇನ್ನು ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಮುಗಿಸಿದ ಬಳಿಕ ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದೆ. ಕಿವೀಸ್ ನಾಡಲ್ಲಿ ಕೊಹ್ಲಿ ಪಡೆ ಐದು ಪಂದ್ಯಗಳ ಟಿ-20, ಮೂರು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ.

ವಿಡಿಯೋ ಕೃಪೆ: ಟ್ರಾನ್ಸ್​ ವರ್ಲ್ಡ್​ ಸ್ಫೋರ್ಟ್ಸ್​​

First published: January 8, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading