IND vs NZ: ಭಾರತ-ನ್ಯೂಜಿಲೆಂಡ್​ ಸೆಮಿ ಫೈನಲ್​ಗೆ ವರುಣನ ಅಡ್ಡಿ: ಮಳೆ ಬಂದರೆ ಫೈನಲ್​ಗೇರುವ ತಂಡ ಯಾವುದು?

India vs New Zealand: ಹೀಗಾಗಿ ಮಂಗಳವಾರ ಮಾತ್ರವಲ್ಲ, ಬುಧವಾರ ಕೂಡ ಪಂದ್ಯ ನಡೆಯುವುದು ಡೌಟ್​ ಎನ್ನಲಾಗುತ್ತಿದೆ. ಇನ್ನು ಪಂದ್ಯದ ನಡುವೆ ಮಳೆಯಾದರೆ ಡೆಕ್​ವರ್ಥ್ ಲೂಯಿಸ್ ನಿಯಮದ ಪ್ರಕಾರ ಗುರಿ ನೀಡಲಾಗುತ್ತದೆ.

zahir | news18
Updated:July 8, 2019, 5:42 PM IST
IND vs NZ: ಭಾರತ-ನ್ಯೂಜಿಲೆಂಡ್​ ಸೆಮಿ ಫೈನಲ್​ಗೆ ವರುಣನ ಅಡ್ಡಿ: ಮಳೆ ಬಂದರೆ ಫೈನಲ್​ಗೇರುವ ತಂಡ ಯಾವುದು?
India vs New Zealand
  • News18
  • Last Updated: July 8, 2019, 5:42 PM IST
  • Share this:
ವಿಶ್ವಕಪ್​ ಮೊದಲ ಸೆಮಿ ಫೈನಲ್​ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದೆ. ಲೀಗ್​ ಹಂತದಲ್ಲಿ ಉಭಯ ತಂಡಗಳ ನಡುವಿನ ಪಂದ್ಯವು ಮಳೆಗೆ ಅಹುತಿಯಾಗಿತ್ತು. ಇದೀಗ ಮತ್ತೊಮ್ಮೆ ಟೀಂ ಇಂಡಿಯಾ-ಕಿವೀಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯೆತೆಯಿದೆ.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಮೋಡ ಕವಿದ ವಾತಾವರಣವಿದ್ದು, ಇದರಿಂದ ಮಂಗಳವಾರ ನಡೆಯಲಿರುವ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಮ್ಯಾಂಚೆಸ್ಟರ್​ನ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಶೇ.51 ರಷ್ಟು ನಾಳೆ ಬೆಳಿಗ್ಗೆ 11 ರಿಂದ ಮಳೆಯಾಗುವ ಸಾಧ್ಯತೆಯಿದೆ.

ಲೀಗ್ ಹಂತದ ಪಂದ್ಯವು ಮಳೆಗೆ ಅಹುತಿಯಾದ ಕಾರಣ ಉಭಯ ತಂಡಗಳು ತಲಾ 1 ಅಂಕಗಳನ್ನು ಹಂಚಿಕೊಂಡಿದ್ದರು. ಇದೀಗ ಇದೇ ತಂಡಗಳಿಗೆ ಪ್ರತಿಕೂಲ ಹವಾಮಾನದ ಸಮಸ್ಯೆ ಎದುರಾಗಿದೆ. ಇನ್ನು ನಾಳೆ ಮಳೆಯಾದರೆ ಅಂಕಗಳನ್ನು ನೀಡಲಾಗುವುದಿಲ್ಲ. ಬದಲಾಗಿ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗುತ್ತದೆ.

ಆದರೆ ಬ್ರಿಟಿಷ್ ಹವಾಮಾನ ಇಲಾಖೆಯ ಸ್ಥಳೀಯ ಮಾಹಿತಿ ಪ್ರಕಾರ, ಮೀಸಲು ದಿನವು ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಬುಧವಾರ ಬೆಳಿಗ್ಗೆ 9 ರಿಂದ 10 ರ ನಡುವೆ ಶೇ .60 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಅಲ್ಲಿನ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಹೀಗಾಗಿ ಮಂಗಳವಾರ ಮಾತ್ರವಲ್ಲ, ಬುಧವಾರ ಕೂಡ ಪಂದ್ಯ ನಡೆಯುವುದು ಡೌಟ್​ ಎನ್ನಲಾಗುತ್ತಿದೆ. ಇನ್ನು ಪಂದ್ಯದ ನಡುವೆ ಮಳೆಯಾದರೆ ಡೆಕ್​ವರ್ಥ್ ಲೂಯಿಸ್ ನಿಯಮದ ಪ್ರಕಾರ ಗುರಿ ನೀಡಲಾಗುತ್ತದೆ. ಇದರ ಹೊರತಾಗಿ ಪಂದ್ಯವೇ ನಡೆಯದಿದ್ದರೆ ಲೀಗ್ ಹಂತದ ಪಾಯಿಂಟ್​ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡವು ಫೈನಲ್ ಪ್ರವೇಶಿಸಲಿದೆ. ಇದು ಭಾರತ ತಂಡಕ್ಕೆ ವರವಾಗಲಿದೆ. ಏಕೆಂದರೆ 8 ಪಂದ್ಯಗಳಲ್ಲಿ ಟೀಂ ಇಂಡಿಯಾ 7 ರಲ್ಲಿ ಗೆದ್ದು 15 ಪಾಯಿಂಟ್​ಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ನ್ಯೂಜಿಲೆಂಡ್ ಕೇವಲ 5 ಮಾತ್ರ ಜಯಿಸಿ ಪಾಯಿಂಟ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಹೀಗಾಗಿ ಪಂದ್ಯವು ಮಳೆಗೆ ಅಹುತಿಯಾದರೆ ಟೀಂ ಇಂಡಿಯಾ ನಿರಾಂತಕವಾಗಿ ಫೈನಲ್ ಪ್ರವೇಶಿಸಲಿದೆ.

ಇದನ್ನೂ ಓದಿ: ರೋಹಿತ್ vs ವಾರ್ನರ್: ಸಚಿನ್ ಸರ್ವಶ್ರೇಷ್ಠ​ ದಾಖಲೆಯನ್ನು ನಿರ್ನಾಮ ಮಾಡುವವರು ಯಾರು?
First published: July 8, 2019, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading