IND vs NZ: ಭಾರತ-ನ್ಯೂಜಿಲೆಂಡ್ ಸೆಮಿಗೆ ಮಳೆ ಅಡ್ಡಿ: ಪಂದ್ಯ ಬುಧವಾರಕ್ಕೆ ಮುಂದೂಡಿಕೆ

ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಕುಲ್ದೀಪ್​ ಯಾದವ್​ ಬದಲಿಗೆ ಚಹಾಲ್​ಗೆ ಸ್ಥಾನ ನೀಡಲಾಗಿದೆ. ಕಳೆದ ಪಂದ್ಯದಲ್ಲಿ ಹೊರ ಉಳಿದಿದ್ದ ಮೊಹ್ಮದ್​ ಶಮಿ ಈ ಪಂದ್ಯಕ್ಕೂ ಅಲಭ್ಯವಾಗಿದ್ದಾರೆ. 

zahir | news18
Updated:July 10, 2019, 12:44 AM IST
IND vs NZ: ಭಾರತ-ನ್ಯೂಜಿಲೆಂಡ್ ಸೆಮಿಗೆ ಮಳೆ ಅಡ್ಡಿ: ಪಂದ್ಯ ಬುಧವಾರಕ್ಕೆ ಮುಂದೂಡಿಕೆ
ಎರಡನೇ ಟಿ-20 ಪಂದ್ಯ ಮೊದಲ ಟಿ-20 ನಡೆದ ಆಕ್ಲೆಂಡ್ನ ಈಡನ್ ಪಾರ್ಕ್ ಮೈದಾನದಲ್ಲೇ ನಡೆಯಲಿದೆ.
  • News18
  • Last Updated: July 10, 2019, 12:44 AM IST
  • Share this:
ವಿಶ್ವಕಪ್‌ನಲ್ಲಿ ಮಂಗಳವಾರ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಸೆಮಿಪೈನಲ್ ಪಂದ್ಯವನ್ನು ಮಳೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಇದೇ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ.  

ಮ್ಯಾಂಚೆಸ್ಟರ್​​ನಲ್ಲಿ ಸತತ ಸುರಿದ ಮಳೆಯಾಗುತ್ತಿದ್ದು, ವರುಣನ ಅಬ್ಬರ ನಿಲ್ಲುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಾಗಿ ಪಂದ್ಯವನ್ನು ನಾಳೆಗೆ ಮುಂದೂಡಿರುವುದಾಗಿ  ಮ್ಯಾಚ್ ರೆಫರಿ ತಿಳಿಸಿದ್ದಾರೆ. 

ಈ ಹಿಂದೆ 1999ರ ವಿಶ್ವಕಪ್​ ವೇಳೆ ಮೀಸಲು ದಿನದ ಪ್ರಯೋಗವನ್ನು ಐಸಿಸಿ ಮಾಡಿತ್ತು. ಅದರಂತೆ ಮಂಗಳವಾರದ ಪಂದ್ಯವು ನಾಳೆ ನಡೆಯಲಿದ್ದು, ನ್ಯೂಜಿಲೆಂಡ್ ಗಳಿಸಿರುವ (46.1 ಓವರ್​ 211 ರನ್​) ಮೊತ್ತದಿಂದ ಪಂದ್ಯ ಆರಂಭವಾಗಲಿದೆ. ನಾಳೆಯು ಪಂದ್ಯವನ್ನು ನಡೆಸಲಾಗದಿದ್ದರೆ ಲೀಗ್ ಹಂತದ ಪಾಯಿಂಟ್​ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡವು ಫೈನಲ್ ಪ್ರವೇಶಿಸಲಿದೆ. ಇದು ಭಾರತ ತಂಡಕ್ಕೆ ವರವಾಗಲಿದೆ. ಏಕೆಂದರೆ 8 ಪಂದ್ಯಗಳಲ್ಲಿ ಟೀಂ ಇಂಡಿಯಾ 7 ರಲ್ಲಿ ಗೆದ್ದು 15 ಪಾಯಿಂಟ್​ಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ನ್ಯೂಜಿಲೆಂಡ್ ಕೇವಲ 5 ಮಾತ್ರ ಜಯಿಸಿ ಪಾಯಿಂಟ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಹೀಗಾಗಿ ಪಂದ್ಯವು ಮಳೆಗೆ ಅಹುತಿಯಾದರೆ ಟೀಂ ಇಂಡಿಯಾ ನಿರಾಂತಕವಾಗಿ ಫೈನಲ್ ಪ್ರವೇಶಿಸಲಿದೆ.


ಮ್ಯಾಂಚೆಸ್ಟರ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ನ್ಯೂಜಿಲೆಂಡ್​ ನಡುವಣ ಮೊದಲ ಸೆಮಿಫೈನಲ್​ನಲ್ಲಿ ಟಾಸ್​ ಗೆದ್ದ ನ್ಯೂಜಿಲೆಂಡ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

ಮಹ್ವದ ಪಂದ್ಯದಲ್ಲಿ ಟೀಂ ಇಂಡಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಇಂದಿನ ಪಂದ್ಯದಲ್ಲಿ ಕುಲ್ದೀಪ್​ ಯಾದವ್​ ಬದಲಿಗೆ ಚಹಾಲ್​ಗೆ ಸ್ಥಾನ ನೀಡಲಾಗಿದೆ. ಕಳೆದ ಪಂದ್ಯದಲ್ಲಿ ಹೊರ ಉಳಿದಿದ್ದ ಮೊಹ್ಮದ್​ ಶಮಿ ಈ ಪಂದ್ಯಕ್ಕೂ ಅಲಭ್ಯವಾಗಿದ್ದಾರೆ.

ಭಾರತಕ್ಕೆ ಭರ್ಜರಿ ಆರಂಭ ಒದಗಿಸುವಲ್ಲಿ ಯಶಸ್ವಿಯಾದ ಭುವನೇಶ್ವರ್ ಕುಮಾರ್ ಹಾಗೂ ಜಸ್​ಪ್ರೀತ್ ಬುಮ್ರಾ ಮೊದೆಲೆರಡು ಮೇಡನ್ ಓವರ್​ಗಳನ್ನು ಎಸೆದರು. ಇದರಿಂದ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ ಮಾರ್ಟಿನ್ ಗುಪ್ಟಿಲ್ 14 ಎಸೆತಗಳಲ್ಲಿ ಕೇವಲ 1 ರನ್​ ಗಳಿಸಿ ಬುಮ್ರಾ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ಕೊಹ್ಲಿಗೆ ಕ್ಯಾಚ್​ ನೀಡಿ ಹೊರ ನಡೆದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಕೇನ್ ವಿಲಿಯಮ್ಸನ್​ ತಂಡಕ್ಕೆ ಆಸರೆಯಾದರು. ಆರಂಭಿಕ ನಿಕೋಲ್ಸ್ ಜತೆ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಕೇನ್ ನಿಧಾನಗತಿಯಲ್ಲಿ ರನ್​ ಪೇರಿಸುವತ್ತ ಗಮನ ಹರಿಸಿದರು. ಅದರಂತೆ ನ್ಯೂಜಿಲೆಂಡ್ 15 ಓವರ್​ನಲ್ಲಿ ಕಲೆ ಹಾಕಿದ್ದು 55 ರನ್​ ಮಾತ್ರ.

ಇದೇ ವೇಳೆ 19ನೇ ಎಸೆಯಲು ಬಂದ ರವೀಂದ್ರ ಜಡೇಜಾ ನಿಕೋಲ್ಸ್​ರನ್ನು ಕ್ಲೀನ್ ಬೌಲ್ಡ್​ ಮಾಡುವ ಮೂಲಕ 68 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಆದರೆ ಜವಾಬ್ದಾರಿಯುತ ಬ್ಯಾಟಿಂಗ್ ಪದರ್ಶಿಸಿದ ಕೇನ್ ವಿಲಿಯಮ್ಸನ್ ಒಂಟಿ ರನ್​ಗಳನ್ನು ಕಲೆಹಾಕುತ್ತಾ ಸಂಕಷ್ಟದಲ್ಲಿದ್ದ ತಂಡವನ್ನು ಮೇಲೆಕೆತ್ತುವ ಪ್ರಯತ್ನ ಮಾಡಿದರು. ಇದರ ನಡುವೆ 79 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿ ಕೇನ್ ಬ್ಯಾಟ್ ಮೇಲೆಕೆತ್ತಿದರು.

ಆರು ಬೌಂಡರಿಗಳೊಂದಿಗೆ 67 ರನ್​ಗಳಿಸಿ ಅಪಾಯಕಾರಿಯಾಗುವತ್ತ ಸಾಗುತ್ತಿದ್ದ ವಿಲಿಯಮ್ಸನ್​ ಅವರನ್ನು ಕೊನೆಗೂ ಔಟ್ ಮಾಡುವಲ್ಲಿ ಚಹಾಲ್ ಯಶಸ್ವಿಯಾದರು. ಇನ್ನು ನಾಯಕನ ನಿರ್ಗಮನದ ಬೆನ್ನಲ್ಲೇ ನೀಶಮ್ (12) ಸಹ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿ ಹೊರನಡೆದರು.

ನ್ಯೂಜಿಲೆಂಡ್ ತಂಡದ ಮೊತ್ತ 121 ಆಗಿದ್ದ ವೇಳೆ ರಾಸ್​ ಟೇಲರ್(22) ನೀಡಿದ ಕ್ಯಾಚನ್ನು ಧೋನಿ ಕೈಚೆಲ್ಲುವ ಮೂಲಕ ಕಿವೀಸ್ ಆಟಗಾರನಿಗೆ ಜೀವದಾನ ನೀಡಿದರು. ಇದನ್ನು ಸಂಪೂರ್ಣವಾಗಿ ಬಳಸಿಕೊಂಡ ಟೇಲರ್ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು.

ಇನ್ನು ಗ್ರ್ಯಾಂಡ್​ಹೋಮ್ (16) ಸುಲಭವಾಗಿ ಧೋನಿಗೆ ಕ್ಯಾಚ್​ ನೀಡಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದರು.

ಸದ್ಯ  ಗ್ರ್ಯಾಂಡ್​ಹೋಮ್ ಹಾಗೂ ರಾಸ್ ಟೇಲರ್​ ಕ್ರೀಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇತ್ತೀಚಿನ ವರದಿ ಬಂದಾಗ ನ್ಯೂಜಿಲೆಂಡ್ 46.1 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್​ಗಳಿಸಿದೆ. (ಮಳೆಯ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ)

ವಿಶ್ವಕಪ್​ನಲ್ಲಿ ಈ ಮೊದಲು ಭಾರತ-ನ್ಯೂಜಿಲೆಂಡ್​ ಮುಖಾಮುಖಿ ಆಗಬೇಕಿತ್ತು. ಆದರೆ, ಮಳೆಯಿಂದಾಗಿ ಈ ಪಂದ್ಯ ರದ್ದಾಗಿತ್ತು.  ಸೆಮಿ ಫೈನಲ್​ನಲ್ಲಿ ಈಗ ಮತ್ತೆ ಈ ಎರಡು ತಂಡಗಳು ಕಾದಾಡುತ್ತಿವೆ. ಆದರೆ, ಈ ಪಂದ್ಯಕ್ಕೂ ಮಳೆ ಅಡ್ಡಿ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಫೆಬ್ರವರಿ ತಿಂಗಳಲ್ಲಿ ಭಾರತ ಕ್ರಿಕೆಟ್​ ತಂಡದ ವಿರುದ್ಧ 4-1 ಅಂತರದಲ್ಲಿ ನ್ಯೂಜಿಲೆಂಡ್​ ಸೋತಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ನ್ಯೂಜಿಲೆಂಡ್ ಇದೆ. ಆದರೆ, ಇದಕ್ಕೆ ಅವಕಾಶ ನೀಡದಿರಲು ಭಾರತ ತಂಡ ತಂತ್ರ ಹೆಣೆದಿದೆ.

ಮ್ಯಾಂಚೆಸ್ಟರ್​ನಲ್ಲಿ ಸ್ಥಳೀಯ ಕಾಲಮಾನ 10 ಗಂಟೆಗೆ ಭಾರತ-ನ್ಯೂಜಿಲೆಂಡ್​ ಪಂದ್ಯ ಆರಂಭಗೊಳ್ಳಲಿದೆ. ಆದರೆ, ಇಡೀ ದಿನ ಮ್ಯಾಂಚೆಸ್ಟರ್​ನಲ್ಲಿ ಮಳೆ ಸುರಿಯಲಿದೆ. ಮಧ್ಯಾಹ್ನದ ವೇಳೆಗೆ ಮಳೆ ಕೊಂಚ ಕಡಿಮೆ ಆದರೂ, ಸಂಜೆ ವೇಳೆಗೆ ಮತ್ತೆ ವರುಣನ ಅಬ್ಬರ ಜೋರಾಗಲಿದೆ ಎಂಬುದು ಲಂಡನ್​ ಹವಾಮಾನ ಇಲಾಖೆಯ ವರದಿ.


 12 ಗಂಟೆಗೆ (5.30 ಪಿಎಂ ಐಎಸ್​ಟಿ) ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಿದ್ದು, 3 ಗಂಟೆಗೆ (7.30 ಪಿಎಂ ಐಎಸ್​ಟಿ) ಭಾರೀ ಮಳೆ ಆಗಲಿದೆ. ಹಾಗಾಗಿ ಇಂದಿನ ಪಂದ್ಯ ರದ್ದಾದರೂ ಅಚ್ಚರಿ ಇಲ್ಲ. ಒಂದೊಮ್ಮೆ ಇಂದು ಪಂದ್ಯ ರದ್ದಾದರೆ, ಬುಧವಾರ  ಈ ಪಂದ್ಯ ನಡೆಯಲಿದೆ. ಆಗಲೂ ಮಳೆಯ ಅಡಚಣೆ ಉಂಟಾದರೆ, ಹೆಚ್ಚು ಅಂಕ ಹೊಂದಿರುವ ತಂಡ ಫೈನಲ್​ ಪ್ರವೇಶಿಸಲಿದೆ. ಹೀಗಾದರೆ ಭಾರತ ಫೈನಲ್​ ಪ್ರವೇಶಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.


ಟೀಂ ಇಂಡಿಯಾ ಪಟ್ಟಿ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ರಿಷಭ್ ಪಂತ್, ಎಂ.ಎಸ್.ಧೋನಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್,  ಜಸ್​ಪ್ರೀತ್​ ಬುಮ್ರಾ, ಯಜುವೇಂದ್ರ ಚಹಾಲ್​ 

ನ್ಯೂಜಿಲೆಂಡ್ ತಂಡ:

ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಲಾಥಮ್, ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
First published: July 9, 2019, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading