Cricket Wolrd Cup 2019: ಭಾರತ-ನ್ಯೂಜಿಲೆಂಡ್ ಪಂದ್ಯ ಮಳೆಗೆ ಆಹುತಿ; ಕೊಹ್ಲಿ ಮುಂದಿನ ಟಾರ್ಗೆಟ್ ಪಾಕಿಸ್ತಾನ

ICC Cricket World Cup 2019: ಮೊನ್ನೆಯಿಂದ ನಾಟಿಂಗ್​​ಹ್ಯಾಮ್​ನಲ್ಲಿ ಮಳೆ ಸುರಿಯುತ್ತಿರುವ ಕಾರಣ, ಟೀಂ ಇಂಡಿಯಾ ನಿನ್ನೆ ಅಭ್ಯಾಸವನ್ನು ಕೂಡ ಮೊಟಕುಗೊಳಿಸಿತ್ತು.

Vinay Bhat | news18
Updated:June 13, 2019, 7:46 PM IST
Cricket Wolrd Cup 2019: ಭಾರತ-ನ್ಯೂಜಿಲೆಂಡ್ ಪಂದ್ಯ ಮಳೆಗೆ ಆಹುತಿ; ಕೊಹ್ಲಿ ಮುಂದಿನ ಟಾರ್ಗೆಟ್ ಪಾಕಿಸ್ತಾನ
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
Vinay Bhat | news18
Updated: June 13, 2019, 7:46 PM IST
ಬೆಂಗಳೂರು (ಜೂ. 13): ನಾಟಿಂಗ್​​ಹ್ಯಾಮ್​​ನ ಟ್ರೆಂಟ್​ ಬ್ರಿಡ್ಜ್​​ ಮೈದಾನದಲ್ಲಿ ಇಂದು ನಡೆಯಬೇಕಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ಮಳೆಗೆ ಆಹುತಿಯಾಗಿದೆ. ಇದು ಈ ಬಾರಿಯ ವಿಶ್ವಕಪ್​ನಲ್ಲಿ ಫಲಿತಾಂಶ ಇಲ್ಲದೆ ರದ್ದಾಗುತ್ತಿರುವ ನಾಲ್ಕನೇ ಪಂದ್ಯ.

ಬೆಳಗ್ಗೆಯಿಂದಲೇ ನ್ಯಾಟಿಂಗ್​ಹ್ಯಾಮ್​ನಲ್ಲಿ ಮಳೆ ಬಿಂಬಿಡದೆ ಸುರಿಯುತ್ತಿದ್ದು, ಅಂಪೈರ್​ಗಳು ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡಿದ್ದು, ಸ್ಥಗಿತಗೊಳಿಸಲಾಗಿದೆ.  ಎಲ್ಲಾದರು ಸ್ವಲ್ವ ಹೊತ್ತಿನಲ್ಲಿ ಮಳೆ ನಿಂತರೆ 20 ಓವರ್​ಗಳ ಪಂದ್ಯ ಆಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ, ಮಳೆರಾಯ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಈ ಮೂಲಕ ಉಭಯ ತಂಡಗಳು ತಲಾ ಒಂದೊಂದು ಅಂಕವನ್ನು ಹಂಚಿಕೊಂಡಿದ್ದಾರೆ.

 




ಅಂಕಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೇರಿದರೆ, ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿ ಭದ್ರವಾಗಿದೆ.

ಮೊನ್ನೆಯಿಂದ ನಾಟಿಂಗ್​​ಹ್ಯಾಮ್​ನಲ್ಲಿ ಮಳೆ ಸುರಿಯುತ್ತಿರುವ ಕಾರಣ, ಟೀಂ ಇಂಡಿಯಾ ನಿನ್ನೆ ಅಭ್ಯಾಸವನ್ನು ಕೂಡ ಮೊಟಕುಗೊಳಿಸಿತ್ತು.

ಭಾರತ ತನ್ನ ಮುಂದಿನ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಜೂನ್ 16 ರಂದು ಆಡಲಿದೆ.

 

First published:June 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...