HOME » NEWS » Sports » CRICKET INDIA VS NEW ZEALAND LIVE SCORE 4TH T20I TIED MATCH GOES INTO SUPER OVER VB

India vs New Zealand 4th T20I Live: ಸೂಪರ್ ಓವರ್​ನಲ್ಲಿ ಭಾರತಕ್ಕೆ 13 ರನ್ಸ್ ಟಾರ್ಗೆಟ್

Live Score, India vs New Zealand, 4th T20I Match: ಟೀಂ ಇಂಡಿಯಾ ಈಗಾಗಲೇ ಐದು ಟಿ-20 ಸರಣಿಯಲ್ಲಿ 3-0 ಅಂತರದ ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಹೀಗಾಗಿ ಕೊಹ್ಲಿ ಸದ್ಯ ಕ್ಲೀನ್​ಸ್ವೀಪ್​ನತ್ತ ಚಿತ್ತ ನೆಟ್ಟಿದೆ.

Vinay Bhat | news18-kannada
Updated:January 31, 2020, 4:28 PM IST
India vs New Zealand 4th T20I Live: ಸೂಪರ್ ಓವರ್​ನಲ್ಲಿ ಭಾರತಕ್ಕೆ 13 ರನ್ಸ್ ಟಾರ್ಗೆಟ್
ಕಾಲಿನ್ ಮನ್ರೊ
  • Share this:
ವೆಲ್ಲಿಂಗ್ಟನ್ (ಜ. 31): ಇಲ್ಲಿನ ಸ್ಕೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ನ್ಯೂಜಿಲೆಂಡ್ ನಡುವಣ ನಾಲ್ಕನೇ ಟಿ-20 ಪಂದ್ಯವೂ ಟೈ ಆಗಿದೆ. ಭಾರತ 20 ಓವರ್​ನಲ್ಲಿ 165 ರನ್ ಗಳಿಸಿದರೆ, ನ್ಯೂಜಿಲೆಂಡ್ ಕೂಡ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿದೆ.

 

ಶಾರ್ದೂಲ್ ಠಾಕೂರ್ ಬೌಲಿಂಗ್​ನಲ್ಲಿ ಸ್ಯಾಂಟ್ನರ್ ಕೇವಲ 1 ರನ್ ಗಳಿಸಲಷ್ಟೆ ಶಕ್ತವಾದರು. ಹೀಗಾಗಿ ಪಂದ್ಯ ಟೈ ಆಯಿತು.

ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 18 ರನ್ ಬಾರಿಸಿತು. ಮಾರ್ಟಿನ್ ಗಪ್ಟಿಲ್ 8 ಹಾಗೂ ಸೀಫರ್ಟ್​ 8 ರನ್ ಗಳಿಸಿದರು. ಭಾರತ ಪರ ಜಸ್​ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದರು.

ಭಾರತ ನೀಡಿದ್ದ 166 ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ ಓಪನರ್ ಮಾರ್ಟಿನ್ ಗಪ್ಟಿಲ್ ಅವರು ಕೇವಲ 4 ರನ್ ಕಲೆಹಾಕಿ ಜಸ್​ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಔಟ್ ಆದರು.

ಆದರೆ, 2ನೇ ವಿಕೆಟ್​ಗೆ ಕಾಲಿನ್ ಮನ್ರೊ ಹಾಗೂ ಟಿಮ್ ಸೀಫರ್ಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲು ಬಿರುಸಿನ ಬ್ಯಾಟಿಂಗ್ ನಡೆಸಿದ ಮನ್ರೊ ಅರ್ಧಶತಕ ಸಿಡಿಸಿ ಅಬ್ಬರಿಸಿದರು.

ಆದರೆ, 12ನೇ ಓವರ್​ನಲ್ಲಿ ಕೊಹ್ಲಿಯ ಮಾಡಿದ ರನೌಟ್​ಗೆ ಮನ್ರೊ ಪೆವಿಲಿಯನ್ ಸೇರಬೇಕಾಯಿತು. 47 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸ್ ಬಾರಿಸಿದ ಮನ್ರೊ 64 ರನ್​ಗೆ ಔಟ್ ಆದರು. ಬಂದ ಬೆನ್ನಲ್ಲೆ ಟಾಮ್ ಬ್ರೂಸ್ ಸೊನ್ನೆ ಸುತ್ತಿದರು.ಇದಕ್ಕೂ ಮೊದಲು ಭಾರತ ಪರ ಓಪನರ್​ಗಳಾಗಿ ಕಣಕ್ಕಿಳಿದ ಕೆ ಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ 14 ರನ್ ಕಲೆಹಾಕಿದರಷ್ಟೆ. ಸ್ಯಾಮ್ಸನ್ 1 ಸಿಕ್ಸ್ ಸಿಡಿಸಿ 8 ರನ್​ಗೆ ನಿರ್ಗಮಿಸಿದರು. ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 11 ರನ್​ಗೆ ಇನ್ನಿಂಗ್ಸ್​ ಅಂತ್ಯಗೊಳಿಸಿದರು.

ಶ್ರೇಯಸ್ ಐಯರ್ ಕೂಡ ರಾಹುಲ್​ಗೆ ಸಾಥ್ ನೀಡದೆ ಕೇವಲ 1 ರನ್ ಕಲೆಹಾಕಿದರಷ್ಟೆ. ಬಳಿಕ ರಾಹುಲ್ 26 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿ 39 ರನ್​ಗೆ ಔಟ್ ಆದರು. ಶಿವಂ ದುಬೆ 12 ರನ್​ಗೆ ನಿರ್ಗಮಿಸಿದರು. ವಾಷಿಂಗ್ಟನ್ ಸುಂದರ್ ಸೊನ್ನೆ ಸುತ್ತಿದರು.

ಹೀಗಿರುವಾಗ ಮನೀಶ್ ಪಾಂಡೆ ಜೊತೆಯಾದ ಶಾರ್ದೂಲ್ ಠಾಕೂರ್ ತಂಡಕ್ಕೆ ಕೆಲ ಸಮಯ ಆಸರೆಯಾಗಿ ನಿಂತರು. ಠಾಕೂರ್ 15 ಎಸೆತಗಳಲ್ಲಿ 20 ರನ್ ಬಾರಿಸಿದರು. ಕೊನೆಯಲ್ಲಿ ಮನೀಶ್ ಪಾಂಡೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮ ತಂಡದ ಮೊತ್ತ 150ರ ಗಡಿ ದಾಟಿತು.

ಅಂತಿಮವಾಗಿ ಭಾರತ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು. ಪಾಂಡೆ 36 ಎಸೆತಗಳಲ್ಲಿ 3 ಬೌಂಡರಿ ಅಜೇಯ 50 ರನ್ ಗಳಿಸಿದರು. ಕಿವೀಸ್ ಪರ ಇಶ್ ಸೋಧಿ 3 ವಿಕೆಟ್ ಪಡೆದರೆ, ಹೇಮಿಶ್ ಬೆನೆಟ್ 2 ಹಾಗೂ ಮಿಚೆಲ್ ಸ್ಯಾಂಟ್ನರ್ ಮತ್ತು ಸ್ಕಾಟ್ ಕುಗೆಲೈಜ್ನ್​, ಟಿಮ್ ಸೌಥೀ ತಲಾ 1 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಟಿಮ್ ಸೌಥೀ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತ ತಂಡದಲ್ಲಿ ಅಂದುಕೊಂಡಂತೆ ಮೂರು ಪ್ರಮುಖ ಬದಲಾವಣೆ ಮಾಡಲಾಗಿದೆ.

 ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಹಾಗೂ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲು ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್ ಹಾಗೂ ನವ್​ದೀಪ್ ಸೈನಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ಸಂಜು ಸ್ಯಾಮ್ಸನ್, ಕೆ. ಎಲ್‌. ರಾಹುಲ್‌ (ವಿಕೆಟ್- ಕೀಪರ್), ಶ್ರೇಯಸ್‌ ಐಯರ್, ಮನೀಷ್‌ ಪಾಂಡೆ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಾರ್ದೂಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ, ನವ್​ದೀಪ್ ಸೈನಿ, ಯಜುವೇಂದ್ರ ಚಹಾಲ್.

Australian Open 2020: ಫೆಡರರ್​ಗೆ ಸೋಲುಣಿಸಿ ಫೈನಲ್ ಪ್ರವೇಶಿಸಿದ ಜೊಕೋವಿಕ್

ಇತ್ತ ನ್ಯೂಜಿಲೆಂಡ್ ತಂಡದ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಕಣಕ್ಕಿಳಿಯುತ್ತಿಲ್ಲ. ಇವರ ಬದಲು ಟಿಮ್ ಸೌಥೀ ತಂಡವನ್ನು ಮುನ್ನಡೆಸುತ್ತಿದ್ದಾರೆ.

ನ್ಯೂಜಿಲೆಂಡ್ ತಂಡ: ಟಿಮ್ ಸೌಥೀ (ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಡ್ಯಾರಿ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಹೇಮಿಶ್ ಬೆನೆಟ್, ಸ್ಕಾಟ್ ಕುಗೆಲೈಜ್ನ್​, ಟಾಮ್ ಬ್ರುನ್ಸ್​.

ಟೀಂ ಇಂಡಿಯಾ ಈಗಾಗಲೇ ಐದು ಟಿ-20 ಸರಣಿಯಲ್ಲಿ 3-0 ಅಂತರದ ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಹೀಗಾಗಿ ಕೊಹ್ಲಿ ಸದ್ಯ ಕ್ಲೀನ್​ಸ್ವೀಪ್​ನತ್ತ ಚಿತ್ತ ನೆಟ್ಟಿದೆ. ಇತ್ತ ನ್ಯೂಜಿಲೆಂಡ್ ಉಳಿದಿರುವ ಎರಡು ಪಂದ್ಯಗಳಲ್ಲಿ ಗೆದ್ದು ಮಾನ ಉಳಿಸಿಕೊಳ್ಳುತ್ತ ನೋಡಬೇಕಿದೆ.
First published: January 31, 2020, 12:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories