HOME » NEWS » Sports » CRICKET INDIA VS NEW ZEALAND LIVE SCORE 2ND TEST MATCH AT CHRISTCHURCH NZ TRAIL BY 179 RUNS AT STUMPS VB

IND vs NZ: ಭಾರತ 242 ರನ್​ಗೆ ಆಲೌಟ್; ಕಿವೀಸ್​ಗೆ ಓಪನರ್​ಗಳ ಬಲ; ಮೊದಲ ದಿನದಾಟದ ಅಂತ್ಯಕ್ಕೆ 63/0

ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದುಕೊಂಡಿತು. ವಿಕೆಟ್​ಗಾಗಿ ಕೊಹ್ಲಿ ನಾನತಂತ್ರ ಪ್ರಯೋಗಿಸಿದರಾದರೂ ಯಾವುದೂ ಯಶಸ್ವಿಯಾಗಲಿಲ್ಲ.

Vinay Bhat | news18-kannada
Updated:February 29, 2020, 12:36 PM IST
IND vs NZ: ಭಾರತ 242 ರನ್​ಗೆ ಆಲೌಟ್; ಕಿವೀಸ್​ಗೆ ಓಪನರ್​ಗಳ ಬಲ; ಮೊದಲ ದಿನದಾಟದ ಅಂತ್ಯಕ್ಕೆ 63/0
ಭಾರತ vs ನ್ಯೂಜಿಲೆಂಡ್
  • Share this:
ಕ್ರೈಸ್ಟ್ಚರ್ಚ್​ (ಫೆ. 29): ಇಲ್ಲಿನ ಹ್ಯಾಗ್ಲೀ ಓವಲ್ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ಪಂದ್ಯದಲ್ಲೂ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 242 ರನ್​ಗೆ ಆಲೌಟ್ ಆಯಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿದೆ. ಕಿವೀಸ್ ಪಡೆ 179 ರನ್​ಗಳ ಹಿನ್ನಡೆಯಲ್ಲಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಕಳೆದ ಪಂದ್ಯದಂತೆ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪ್ರಮುಖ ಬ್ಯಾಟುಗಾರರಾದ ನಾಯಕ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದರೆ, ಉಪ ನಾಯಕ ಅಜಿಂಕ್ಯಾ ರಹಾನೆ, ಮಯಾಂಕ್ ಅಗರ್ವಾಲ್, ರಿಷಭ್ ಪಂತ್ ನಿಂತು ಆಡುವಲ್ಲಿ ಎಡವಿದರು.

 

(VIDEO): 4 ಸಿಕ್ಸರ್​, 3 ವಿಕೆಟ್; ಟಿ-20 ಕ್ರಿಕೆಟ್​ಗೆ ಸ್ಫೋಟಕ ಕಮ್​ಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ

ಟೀಂ ಇಂಡಿಯಾ ಆರಂಭದಲ್ಲೇ ಮಯಾಂಕ್ ಅಗರ್ವಾಲ್(7) ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಅವರು ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಜೊತೆಗೂಡಿ ಅರ್ಧಶತಕದ ಜೊತೆಯಾಟ ಆಡಿದರಷ್ಟೆ. ಬಿರುಸಿನ ಬ್ಯಾಟಿಂಗ್ ನಡೆಸಿದ ಶಾ 64 ಎಸೆತಗಳಲ್ಲಿ 54 ರನ್ ಬಾರಿಸಿ ನಿರ್ಗಮಿಸಿದರು.

ಬಂದ ಬೆನ್ನಲ್ಲೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಟ 3 ರನ್​ಗೆ ಅಂತ್ಯವಾದರೆ, ಉಪ ನಾಯಕ ಅಜಿಂಕ್ಯಾ ರಹಾನೆ 7 ರನ್​ಗೆ ಬ್ಯಾಟ್ ಕೆಳಗಿಟ್ಟರು. ಹೀಗೆ ಒಂದುಕಡೆ ವಿಕೆಟ್ ಉರುಳಿದರೆ ಇತ್ತ ಪೂಜಾರ ಕ್ರೀಸ್ ಕಚ್ಚಿ ಆಡಿದರು. ಹನುಮಾ ವಿಹಾರಿ ಇವರಿಗೆ ಉತ್ತಮ ಸಾಥ್ ನೀಡಿದರು. 5ನೇ ವಿಕೆಟ್​ಗೆ ಪೂಜಾರ-ವಿಹಾರ 81 ರನ್​ಗಳ ಕಾಣಿಕೆ ನೀಡಿದರು.

ಬಳಿಕ ಅರ್ಧಶತಕ ಸಿಡಿಸಿ ಇಬ್ಬರೂ ನಿರ್ಗಮಿಸಿದ್ದು ತಂಡಕ್ಕೆ ಮತ್ತಷ್ಟು ಅಘಾತ ಉಂಟಾಯಿತು. ವಿಹಾರಿ 70 ಎಸೆತಗಳಲ್ಲಿ 55 ರನ್​ಗೆ ಹಾಗೂ ಪೂಜಾರ 140 ಎಸೆತಗಳಲ್ಲಿ 54 ರನ್​ಗೆ ಇನ್ನಿಂಗ್ಸ್​ ಅಂತ್ಯಗೊಳಿಸಿದರು. ರಿಷಭ್ ಪಂತ್ ಕೂಡ 12 ರನ್​ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಉಮೇಶ್ ಯಾದವ್ ಸೊನ್ನೆ ಸುತ್ತಿದರು.

 ಜೈಲಿನಲ್ಲಿದ್ದ ಖ್ಯಾತ ಕ್ರಿಕೆಟಿಗ ಕೊನೆಗೆ ತನ್ನ ವಕೀಲೆಯನ್ನೇ ಮದುವೆಯಾದ..!

ರವೀಂದ್ರ ಜಡೇಜಾ 9 ರನ್​ಗೆ ಹಾಗೂ ಮೊಹಮ್ಮದ್ ಶಮಿ 16 ರನ್​ಗೆ ಔಟ್ ಆಗುವ ಮೂಲಕ ಭಾರತ 63 ಓವರ್​ನಲ್ಲಿ 242 ರನ್​ಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಕೈಲ್ ಜೆಮಿಸನ್ 5 ವಿಕೆಟ್ ಕಿತ್ತಿದ್ದರೆ, ಟಿಮ್ ಸೌಥೀ 2 ಹಾಗೂ ಟ್ರೆಂಟ್ ಬೌಲ್ಟ್ ತಲಾ​ ಮತ್ತು ನೈಲ್ ಬಾಗ್ನೆರ್ 1 ವಿಕೆಟ್ ಪಡೆದರು.

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದುಕೊಂಡಿತು. ವಿಕೆಟ್​ಗಾಗಿ ಕೊಹ್ಲಿ ನಾನತಂತ್ರ ಪ್ರಯೋಗಿಸಿದರಾದರೂ ಯಾವುದೂ ಯಶಸ್ವಿಯಾಗಲಿಲ್ಲ. ಮೊದಲ ದಿನದಾಟದ ಅಂತ್ಯಕ್ಕೆ ಕಿವೀಸ್ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿದೆ. ಟಾಮ್ ಲಾಥಮ್ 27 ಹಾಗೂ ಟಾಮ್ ಬ್ಲಂಡೆಲ್ 29 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
First published: February 29, 2020, 12:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories