India vs New Zealand: 2ನೇ ಟೆಸ್ಟ್​ನಲ್ಲೂ ಕೊಹ್ಲಿ ಪಡೆಯ ಬ್ಯಾಟಿಂಗ್ ವೈಫಲ್ಯ; ಮೊದಲ ದಿನವೇ ಆಲೌಟ್

IND vs NZ: ಬಂದ ಬೆನ್ನಲ್ಲೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಟ 3 ರನ್​ಗೆ ಅಂತ್ಯವಾದರೆ, ಉಪ ನಾಯಕ ಅಜಿಂಕ್ಯಾ ರಹಾನೆ 7 ರನ್​ಗೆ ಬ್ಯಾಟ್ ಕೆಳಗಿಟ್ಟರು. ಹೀಗೆ ಒಂದುಕಡೆ ವಿಕೆಟ್ ಉರುಳಿದರೆ ಇತ್ತ ಪೂಜಾರ ಕ್ರೀಸ್ ಕಚ್ಚಿ ಆಡಿದರು.

Vinay Bhat | news18-kannada
Updated:February 29, 2020, 10:29 AM IST
India vs New Zealand: 2ನೇ ಟೆಸ್ಟ್​ನಲ್ಲೂ ಕೊಹ್ಲಿ ಪಡೆಯ ಬ್ಯಾಟಿಂಗ್ ವೈಫಲ್ಯ; ಮೊದಲ ದಿನವೇ ಆಲೌಟ್
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ
  • Share this:
ಕ್ರೈಸ್ಟ್​ಚರ್ಚ್​ (ಫೆ. 29): ಇಲ್ಲಿನ ಹ್ಯಾಗ್ಲೀ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲೂ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.

ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ಅಜಿಂಕ್ಯಾ ರಹಾನೆ ಹಾಗೂ ಮಯಾಂಕ್ ಅಗರ್ವಾಲ್ ಎರಡಂಕಿ ದಾಟಲು ವಿಫಲವಾದರು. ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 242 ರನ್​ಗೆ ಆಲೌಟ್ ಆಗಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಮಯಾಂಕ್ ಅಗರ್ವಾಲ್(7) ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಅವರು ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಜೊತೆಗೂಡಿ ಅರ್ಧಶತಕದ ಜೊತೆಯಾಟ ಆಡಿದರಷ್ಟೆ. ಬಿರುಸಿನ ಬ್ಯಾಟಿಂಗ್ ನಡೆಸಿದ ಶಾ 64 ಎಸೆತಗಳಲ್ಲಿ 54 ರನ್ ಬಾರಿಸಿ ನಿರ್ಗಮಿಸಿದರು.

ಜೈಲಿನಲ್ಲಿದ್ದ ಖ್ಯಾತ ಕ್ರಿಕೆಟಿಗ ಕೊನೆಗೆ ತನ್ನ ವಕೀಲೆಯನ್ನೇ ಮದುವೆಯಾದ..!

ಬಂದ ಬೆನ್ನಲ್ಲೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಟ 3 ರನ್​ಗೆ ಅಂತ್ಯವಾದರೆ, ಉಪ ನಾಯಕ ಅಜಿಂಕ್ಯಾ ರಹಾನೆ 7 ರನ್​ಗೆ ಬ್ಯಾಟ್ ಕೆಳಗಿಟ್ಟರು. ಹೀಗೆ ಒಂದುಕಡೆ ವಿಕೆಟ್ ಉರುಳಿದರೆ ಇತ್ತ ಪೂಜಾರ ಕ್ರೀಸ್ ಕಚ್ಚಿ ಆಡಿದರು. ಹನುಮಾ ವಿಹಾರಿ ಇವರಿಗೆ ಉತ್ತಮ ಸಾಥ್ ನೀಡಿದರು. 5ನೇ ವಿಕೆಟ್​ಗೆ ಪೂಜಾರ-ವಿಹಾರ 81 ರನ್​ಗಳ ಕಾಣಿಕೆ ನೀಡಿದರು.

ಬಳಿಕ ಅರ್ಧಶತಕ ಸಿಡಿಸಿ ಇಬ್ಬರೂ ನಿರ್ಗಮಿಸಿದ್ದು ತಂಡಕ್ಕೆ ಮತ್ತಷ್ಟು ಅಘಾತ ಉಂಟಾಯಿತು. ವಿಹಾರಿ 70 ಎಸೆತಗಳಲ್ಲಿ 55 ರನ್​ಗೆ ಹಾಗೂ ಪೂಜಾರ 140 ಎಸೆತಗಳಲ್ಲಿ 54 ರನ್​ಗೆ ಇನ್ನಿಂಗ್ಸ್​ ಅಂತ್ಯಗೊಳಿಸಿದರು. ರಿಷಭ್ ಪಂತ್ ಕೂಡ 12 ರನ್​ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಉಮೇಶ್ ಯಾದವ್ ಸೊನ್ನೆ ಸುತ್ತಿದರು.

ಮಹಿಳಾ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ದಾಖಲೆ ಮುರಿದು ಹೊಸ ಇತಿಹಾಸ ಬರೆದ ದ.ಆಫ್ರಿಕಾರವೀಂದ್ರ ಜಡೇಜಾ 9 ರನ್​ಗೆ ಹಾಗೂ ಮೊಹಮ್ಮದ್ ಶಮಿ 16 ರನ್​ಗೆ ಔಟ್ ಆಗುವ ಮೂಲಕ ಭಾರತ 63 ಓವರ್​ನಲ್ಲಿ 242 ರನ್​ಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಕೈಲ್ ಜೆಮಿಸನ್ 5 ವಿಕೆಟ್ ಕಿತ್ತಿದ್ದರೆ, ಟಿಮ್ ಸೌಥೀ 2 ಹಾಗೂ ಟ್ರೆಂಟ್ ಬೌಲ್ಟ್ ತಲಾ​ ಮತ್ತು ನೈಲ್ ಬಾಗ್ನೆರ್ 1 ವಿಕೆಟ್ ಪಡೆದಿದ್ದಾರೆ.
First published: February 29, 2020, 10:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading