HOME » NEWS » Sports » CRICKET INDIA VS NEW ZEALAND LIVE SCORE 2ND TEST MATCH AT CHRISTCHURCH DAY 2 NZ 235 ALL OUT VB

IND vs NZ: ಶಮಿ- ಬುಮ್ರಾ ಬೌಲಿಂಗ್ ಮ್ಯಾಜಿಕ್; ನ್ಯೂಜಿಲೆಂಡ್ 235 ರನ್​ಗೆ ಆಲೌಟ್

India vs New Zealand: ಅಂತಿಮ ಹಂತದಲ್ಲಿ ಕೈಲ್ ಜೆಮಿಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 63 ಎಸೆತಗಳಲ್ಲಿ 7 ಬೌಂಡರಿ ಬಾರಿಸಿ 49 ರನ್ ಗಳಿಸಿ ತಂಡದ ಮೊತ್ತವನ್ನು ಏರಿಸಿದು. ನೈಲ್ ವಾಗ್ನೆರ್ 21 ರನ್ ಗಳಿಸಿದರು.

Vinay Bhat | news18-kannada
Updated:March 1, 2020, 8:45 AM IST
IND vs NZ: ಶಮಿ- ಬುಮ್ರಾ ಬೌಲಿಂಗ್ ಮ್ಯಾಜಿಕ್; ನ್ಯೂಜಿಲೆಂಡ್ 235 ರನ್​ಗೆ ಆಲೌಟ್
ಇನ್ನು ಭಾರತದ ವಿರುದ್ದ ಎರಡು ಟೆಸ್ಟ್​ಗಳನ್ನು ಗೆದ್ದಿರುವ ನ್ಯೂಜಿಲೆಂಡ್ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ 120 ಅಂಕಗಳನ್ನು ಪಡೆದುಕೊಂಡಿದೆ. ಈ ಮೊದಲು 180 ಅಂಕ ಪಡೆದಿದ್ದ ನ್ಯೂಜಿಲೆಂಡ್ ಈ ಬಾರಿ 120 ಅಂಕಗಳೊಂದಿಗೆ ಐಸಿಸಿ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ.
  • Share this:
ಕ್ರೈಸ್ಟ್ಚರ್ಚ್​ (ಮಾ. 01): ಇಲ್ಲಿನ ಹ್ಯಾಗ್ಲೀ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದರೂ ಬೌಲರ್ಗಳು ಅಮೋಘ ಪ್ರದರ್ಶನ ನೀಡಿದರು. ಪರಿಣಾಮ ನ್ಯೂಜಿಲೆಂಡ್ 235 ರನ್​ಗೆ ಆಲೌಟ್ ಆಗಿದ್ದು, 7 ರನ್​ಗಳ ಹಿನ್ನಡೆ ಅನುಭವಿಸಿದೆ.

ನಿನ್ನೆ ಮೊದಲ ದಿನ ಟೀಂ ಇಂಡಿಯಾವನ್ನು 242 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತ್ತು. ಹೀಗೆ ಓಪನರ್​ಗಳು ತಂಡಕ್ಕೆ ಆಧಾರವಾಗಿದ್ದರು.

 Rranji Trophy Semi Final: ಏಕಾಂಗಿ ಹೋರಾಟ, ಅಜೇಯ ಶತಕ; ಕರ್ನಾಟಕಕ್ಕೆ ಕಂಟಕವಾದ ಮಜುಂದಾರ್

ಆದರೆ, ಎರಡನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್​ಗಳ ದಾಳಿಗೆ ನಲುಗಿ ಹೋಯಿತು. ಇಂದು 3 ರನ್ ಗಳಿಸುವಷ್ಟರಲ್ಲಿ ಕಿವೀಸ್ 30 ರನ್ ಗಳಿಸಿದ್ದ ಟಾಮ್ ಬ್ಲಂಡೆಲ್ ವಿಕೆಟ್ ಕಳೆದುಕೊಂಡಿತು. ನಾಯಕ ಕೇನ್ ವಿಲಿಯಮ್ಸನ್ 3 ರನ್ ಗಳಿಸಿ ಜಸ್​ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ನಿರ್ಗಮಿಸಿದರು.

ಅನುಭವಿ ರಾಸ್ ಟೇಲರ್​(15) ಅವರನ್ನು ಜಡೇಜಾ ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರೆ, ಹೆನ್ರಿ ನಿಕೋಲ್ಸ್ ಆಟ 14 ರನ್​ಗೆ ಅಂತ್ಯವಾಯಿತು. ಈ ನಡುವೆ ಅರ್ಧಶತಕ ಸಿಡಿಸಿದ್ದ ಮತ್ತೊಬ್ಬ ಓಪನರ್ ಟಾಮ್ ಲೇಥಮ್(52) ಶಮಿ ಬೌಲಿಂಗ್​ನಲ್ಲಿ ಬೌಲ್ಡ್​ ಆದರು.

ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್ ಹಾಗೂ ಟಿಮ್ ಸೌಥೀ ಸೊನ್ನೆ ಸುತ್ತಿದರೆ, ಕಾಲಿನ್ ಗ್ರ್ಯಾಂಡ್​ಹೋಮ್ ಕೊಂಚಹೊತ್ತು ಬ್ಯಾಟ್ ಬೀಸಿ 26 ರನ್​ಗೆ ನಿರ್ಗಮಿಸಿದರು. ಹೀಗೆ ಮೊದಲ ದಿನ ಬೌಲಿಂಗ್- ಬ್ಯಾಟಿಂಗ್​ನಲ್ಲಿ ಪಾರುಪತ್ಯ ಮೆರೆದಿದ್ದ ನ್ಯೂಜಿಲೆಂಡ್ ತಂಡ ಎರಡನೇ ದಿನ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಹಾದಿ ಹಿಡಿದರು.

IND vs SA: ಮಾರ್ಚ್​ನಲ್ಲಿ ಆಫ್ರಿಕಾ ವಿರುದ್ಧ ಏಕದಿನ ಸರಣಿ; ನಿಟ್ಟುಸಿರು ಬಿಟ್ಟ ಭಾರತ, ಕಾರಣವೇನು?

ಆದರೆ, ಅಂತಿಮ ಹಂತದಲ್ಲಿ ಕೈಲ್ ಜೆಮಿಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 63 ಎಸೆತಗಳಲ್ಲಿ 7 ಬೌಂಡರಿ ಬಾರಿಸಿ 49 ರನ್ ಗಳಿಸಿ ತಂಡದ ಮೊತ್ತವನ್ನು ಏರಿಸಿದು. ನೈಲ್ ವಾಗ್ನೆರ್ 21 ರನ್ ಗಳಿಸಿದರು.

ಅಂತಿಮವಾಗಿ ನ್ಯೂಜಿಲೆಂಡ್ 73.1 ಓವರ್​ನಲ್ಲಿ 235 ರನ್​ಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ಜಸ್​ಪ್ರೀತ್ ಬುಮ್ರಾ 3, ರವೀಂದ್ರ ಜಡೇಜಾ 2  ಮತ್ತು ಉಮೇಶ್ ಯಾದವ್ 1 ವಿಕೆಟ್ ಪಡೆದರು.
First published: March 1, 2020, 8:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories