KL Rahul: ವಿಕೆಟ್ ಕೀಪಿಂಗ್ ಜವಾಬ್ದಾರಿ ಬಗ್ಗೆ ಮೊದಲ ಬಾರಿ ಮನಬಿಚ್ಚಿ ಮಾತನಾಡಿದ ರಾಹುಲ್!

India vs New Zealand: ವಿಕೆಟ್ ಕೀಪಿಂಗ್ ಮಾಡುವುದರಿಂದ ಬ್ಯಾಟಿಂಗ್ ಮಾಡಲು ತುಂಬಾನೆ ಸಹಕಾರಿಯಾಗುತ್ತದೆ. ಪಿಚ್​ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬುದು ತಿಳಿದುಕೊಳ್ಳಬಹುದು- ಕೆ ಎಲ್ ರಾಹುಲ್.

news18-kannada
Updated:January 25, 2020, 8:11 AM IST
KL Rahul: ವಿಕೆಟ್ ಕೀಪಿಂಗ್ ಜವಾಬ್ದಾರಿ ಬಗ್ಗೆ ಮೊದಲ ಬಾರಿ ಮನಬಿಚ್ಚಿ ಮಾತನಾಡಿದ ರಾಹುಲ್!
ಕೆ ಎಲ್ ರಾಹುಲ್.
  • Share this:
ಬೆಂಗಳೂರು (ಜ. 25): ಆಕ್ಲೆಂಡ್​ನ ಈಡನ್ ಪಾರ್ಕ್​ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್​ಗಳಿಂದ ಗೆದ್ದು ಶುಭಾರಂಭ ಮಾಡಿತು. ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಐಯರ್ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಕೊಹ್ಲಿ ಪಡೆ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ನ್ಯೂಜಿಲೆಂಡ್ ನೀಡಿದ್ದ 204 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ರಾಹುಲ್ ಸ್ಫೋಟಕ ಆಟವಾಡಿದರು. ಕೇವಲ 27 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ, 3 ಸಿಕ್ಸರ್ ಸಿಡಿಸಿ 56 ರನ್ ಚಚ್ಚಿದರು. ಇದರ ಜೊತೆಗೆ ರಾಹುಲ್ ವಿಕೆಟ್ ಕೀಪಿಂಗ್​ನಲ್ಲೂ ಮಿಂಚಿದರು.

 


India vs New Zealand: ಅಂತರಾಷ್ಟ್ರೀಯ ಟಿ-20 ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಭಾರತ-ನ್ಯೂಜಿಲೆಂಡ್ ಪಂದ್ಯ

ಶಿಖರ್ ಧವನ್ ಸ್ಥಾನಕ್ಕೆ ಸೆಡ್ಡು ಹೊಡೆದು ರಾಹುಲ್ ಒಂದುಕಡೆ ಬ್ಯಾಟ್ ಬೀಸುತ್ತಿದ್ದರೆ, ಇತ್ತ ವಿಕೆಟ್ ಕೀಪಿಂಗ್​ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತ ರಿಷಭ್ ಪಂತ್​ ಅವರಿಗೂ ಸವಾಲೆಸೆಯುತ್ತಿದ್ದಾರೆ. ಸದ್ಯ ತನ್ನ ವಿಕೆಟ್ ಕೀಪಿಂಗ್ ಬಗ್ಗೆ ರಾಹುಲ್ ಮನಬಿಚ್ಚಿ ಮಾತನಾಡಿದ್ದಾರೆ.

ವಿಕೆಟ್ ಕೀಪಿಂಗ್ ಮಾಡುವುದು ಎಂದರೆ ನನಗೆ ತುಂಬಾ ಇಷ್ಟ ಎಂದಿರುವ ರಾಹುಲ್, ಈ ಜವಾಬ್ದಾರಿಯನ್ನು ಆನಂದಿಸುತ್ತಿದ್ದೇನೆ ಎಂದರು. "ನಿಜ ಹೇಳಬೇಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ಕೀಪಿಂಗ್‌ ಇನ್ನೂ ಅನನುಭವಿಯ ರೀತಿ ಕಾಣಿಸಬಹುದು. ಆದರೆ, ದೇಶಿ ಟೂರ್ನಿಗಳಲ್ಲಿ ನನಗೆ ಅನೇಕ ಬಾರಿ ಕೀಪಿಂಗ್‌ ಜವಾಬ್ದಾರಿ ನಿಭಾಯಿಸಿದ ಅನುಭವಿದೆ. ಐಪಿಎಲ್​ನಲ್ಲೂ ಫ್ರಾಂಚೈಸಿ ತಂಡಗಳ ಪರವೂ ಕೀಪಿಂಗ್‌ ಮಾಡಿದ್ದೇನೆ. ಸ್ಟಂಪ್ಸ್‌ನ ಹಿಂಬದಿಯಲ್ಲಿ ನಿಲ್ಲುವುದೆಂದರೆ ನನಗೆ ಖುಷಿ"

"ವಿಕೆಟ್ ಕೀಪಿಂಗ್ ಮಾಡುವುದರಿಂದ ಬ್ಯಾಟಿಂಗ್ ಮಾಡಲು ತುಂಬಾನೆ ಸಹಕಾರಿಯಾಗುತ್ತದೆ. ಪಿಚ್​ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬುದು ತಿಳಿದುಕೊಳ್ಳಬಹುದು. ಬೌಲರ್​​ಗೆ​ ಹಾಗೂ ನಮ್ಮ ತಂಡದ ನಾಯಕನಿಗೆ ಇದರ ಬಗ್ಗೆ ಮಾಹಿತಿ ನೀಡಬಹುದು" ಎಂದು ರಾಹುಲ್ ಹೇಳಿದ್ದಾರೆ.

 



NZ vs IND: ಬೌಂಡರಿ ಲೈನ್ ಬಳಿ ರೋಹಿತ್​ ರೋಚಕ ಕ್ಯಾಚ್; ಗಪ್ಟಿಲ್ ಸೇಡು ತೀರಿಸಿಕೊಂಡಿದ್ದು ಹೇಗೆ ಗೊತ್ತಾ?

ಮೊದಲು ಟಿ-20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಬಾರಿಸಿತು. ಕಿವೀಸ್ ಪರ ಕಾಲಿನ್ ಮನ್ರೊ 59(42), ರಾಸ್ ಟೇಲರ್ 54*(27) ಹಾಗೂ ನಾಯಕ ಕೇನ್ ವಿಲಿಯಮ್ಸನ್ 51(26) ರನ್ ಗಳಿಸಿದರು.

204 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೆ ಎಲ್ ರಾಹುಲ್(56) ಹಾಗೂ ಶ್ರೇಯಸ್ ಐಯರ್(58*) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19 ಓವರ್​ನಲ್ಲೇ ಗೆಲುವು ಸಾಧಿಸಿತು. ಮುಂದಿನ ಎರಡನೇ ಟಿ-20 ಪಂದ್ಯ ಜನವರಿ 26 ಭಾನುವಾರದಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.

First published:January 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ