IND vs NZ: ನಾಳೆ ಮೊದಲ ಟೆಸ್ಟ್; ಹಸಿರು ಹಾಸಿನ ಪಿಚ್ ನೋಡಿ ಕೊಹ್ಲಿ ಪಡೆಯಲ್ಲಿ ಶುರುವಾಯ್ತಾ ಆತಂಕ?

India vs New Zealand prediction: ಇಂತಹ ಪಿಚ್​ನಲ್ಲಿ ವೇಗಿಗಳನ್ನು ಎದುರಿಸುವುದು ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಿಗೂ ಸಹ ಕಷ್ಟದಾಯಕ ಕೆಲಸ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತ.

news18-kannada
Updated:February 20, 2020, 2:58 PM IST
IND vs NZ: ನಾಳೆ ಮೊದಲ ಟೆಸ್ಟ್; ಹಸಿರು ಹಾಸಿನ ಪಿಚ್ ನೋಡಿ ಕೊಹ್ಲಿ ಪಡೆಯಲ್ಲಿ ಶುರುವಾಯ್ತಾ ಆತಂಕ?
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ.
  • Share this:
ವೆಲ್ಲಿಂಗ್ಟನ್ (ಫೆ. 20): ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಎರಡು ಟೆಸ್ಟ್​ ಪಂದ್ಯಗಳ ಸರಣಿ ನಾಳೆಯಿಂದ ಆರಂಭವಾಗಲಿದೆ. ಇಲ್ಲಿನ ಬೇಸಿನ್ ರಿಸರ್ವ್​ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲ ಪಂದ್ಯ ನಡೆಯಲಿದ್ದು, ಟೆಸ್ಟ್​ ಕ್ರಿಕೆಟ್​ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿರುವ ಕ್ಯಾಪ್ಟನ್ ಕೊಹ್ಲಿ ಪಡೆಗೆ, ತವರಿನಲ್ಲಿ ಅತ್ಯಂತ ಬಲಿಷ್ಠವಾಗಿರುವ ಕಿವೀಸ್ ಸವಾಲೊಡ್ಡಲು ತಯಾರಾಗಿದೆ.

India vs New Zealand: Advantage bowlers, task cut out for batsmen - First look at Wellington pitch
ವೆಲ್ಲಿಂಗ್ಟನ್​ನ ಬೇಸಿನ್‌ ರಿಸರ್ವ್‌ ಕ್ರೀಡಾಂಗಣದ ಪಿಚ್.


IPL 2020: ಐಪಿಎಲ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬಿಸಿಸಿಐ; ಏನದು?

ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಭಾರತದ ಟೆಸ್ಟ್​ ತಂಡ ವೇಗದ ಬೌಲರ್‌ಗಳಿಗೆ ಸ್ವರ್ಗದಂತಿರುವ ನ್ಯೂಜಿಲೆಂಡ್‌ನಲ್ಲಿ ಟ್ರೆಂಟ್‌ ಬೌಲ್ಟ್‌, ನೈಲ್‌ ವ್ಯಾಗ್ನರ್​​ರಂತಹ ವಿಶ್ವ ಶ್ರೇಷ್ಠ ವೇಗಿಗಳನ್ನು ಎದುರಿಸಬೇಕಿದೆ.

ವಿಶೇಷ ಎಂದರೆ ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಹಸಿರು ಹಾಸನ್ನು ಹೊಂದಿರುವಂತಹ ಪಿಚ್‌ ನಿರ್ಮಿಸಲಾಗಿದ್ದು, ಈಗಾಗಲೇ ಭಾರತೀಯ ಬ್ಯಾಟ್ಸ್​ಮನ್​ಗಳಲ್ಲಿ ಆತಂಕ ಮೂಡಿದೆ ಎನ್ನಲಾಗುತ್ತಿದೆ.

ಸೂಕ್ಷ್ಮವಾಗಿ ಗಮನಿಸಿದರೆ ಭಾರತ ವಿರುದ್ಧದ ಪಂದ್ಯಕ್ಕೆ ಪಿಚ್ ಮೆಲೆ ಸ್ವಲ್ಪ ಹೆಚ್ಚೇ ಎನಿಸುವಷ್ಟು ಹುಲ್ಲು ಇದೆ.  ಹೀಗಾಗಿ ಈ ಹಸಿರು ಪಿಚ್ ಸಂಪೂರ್ಣವಾಗಿ ವೇಗಿಗಳಿಗೆ ಲಾಭದಾಯಕವಾಗಲಿದೆ. ಇದರಿಂದಾಗಿ ಮೊದಲ ದಿನ ಬ್ಯಾಟಿಂಗ್ ಕಬ್ಬಿಣದ ಕಡಲೆಯಾಗಲಿದೆ ಎನ್ನಲಾಗಿದೆ.

ಗುಜರಾತ್​ನಲ್ಲಿ ಟ್ರಂಪ್​ ಉದ್ಘಾಟನೆ ಮಾಡಲಿರುವ ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಹೇಗಿದೆ ಗೊತ್ತಾ?ಹಸಿರು ಹುಲ್ಲುಗಳಿಂದ ಕೂಡಿರುವ ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಲಿದೆ ಎಂಬುದು ತಜ್ಞರು ಅಭಿಪ್ರಾಯವೂ ಆಗಿದೆ. ಆರಂಭದಲ್ಲಿ ಈ ಪಿಚ್‌ ವೇಗಿಗಳಿಗೆ ತುಂಬಾನೇ ಸಹಕರಿಸಲಿದೆಯಂತೆ.

ಸಾಮಾನ್ಯವಾಗಿ ಹಸಿರು ಹಾಸಿನ ಪಿಚ್​ನಲ್ಲಿ ಪಂದ್ಯ ಆರಂಭವಾದ ಮೊದಲ ಎರಡು ಮೂರು ಗಂಟೆಯವರೆಗೆ ವೇಗಿಗಳ ಚೆಂಡು ಸ್ಕಿಡ್​ ಆಗುತ್ತದೆ. ಹೀಗಾಗಿ ಇಂತಹ ಪಿಚ್​ನಲ್ಲಿ ವೇಗಿಗಳನ್ನು ಎದುರಿಸುವುದು ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಿಗೂ ಸಹ ಕಷ್ಟದಾಯಕ ಕೆಲಸ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತ.

 ಇನ್ನೂ ವೆಲ್ಲಿಂಗ್ಟನ್​ನಲ್ಲಿ ಟೀಂ ಇಂಡಿಯಾ ಈವರೆಗೆ ಕೇವಲ ಒಂದು ಟೆಸ್ಟ್​ ಪಂದ್ಯವನ್ನಷ್ಟೆ ಗೆದ್ದಿದೆ. ಭಾರತ 1967-68ರಲ್ಲಿ ಮೊದಲ ಸಲ ಭಾರತ ಕಿವೀಸ್ ನಾಡಿಗೆ ತೆರಳಿತ್ತು. ಇದು ಭಾರತದ ಅತ್ಯಂತ ಯಶಸ್ವಿ ನ್ಯೂಜಿಲೆಂಡ್ ಪ್ರವಾಸ. ಮನ್ಸೂರ್‌ ಅಲಿಖಾನ್‌ ಪಟೌಡಿ ಸಾರಥ್ಯದ ಭಾರತ ತಂಡ 4 ಟೆಸ್ಟ್‌ಗಳಲ್ಲಿ ಮೂರನ್ನು ಗೆದ್ದಿತ್ತು. ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿತ್ತು. ಈ ಪೈಕಿ ವೆಲ್ಲಿಂಗ್ಟನ್​ನಲ್ಲಿ ಒಂದು ಪಂದ್ಯ ಜಯಿಸಿತತ್ತು.

ಆದರೆ, 1968ರ ಬಳಿಕ ಟೀಂ ಇಂಡಿಯಾ ವೆಲ್ಲಿಂಗ್ಟನ್​ನಲ್ಲಿ ನಡೆದ ಟೆಸ್ಟ್‌ ಪಂದ್ಯಗಳ ಪೈಕಿ ಒಂದರಲ್ಲೂ ಗೆಲುವು ಸಾಧಿಸಿಲ್ಲ. ಹೀಗಾಗಿ ಪ್ರಸ್ತುತ ಪ್ರವಾಸದಲ್ಲಿ ನಾಯಕ ವಿರಾಟ್‌ ಕೊಹ್ಲಿಗೆ ವಿಶೇಷ ದಾಖಲೆ ಒಂದನ್ನು ಸರಿಗಟ್ಟುವ ಅವಕಾಶ ಲಭ್ಯವಾಗಲಿದೆ.

India vs New Zealand: ನಾಳೆ ಮೊದಲ ಟೆಸ್ಟ್; ಟೀಂ ಇಂಡಿಯಾ ಆಟಗಾರರ ಅಭ್ಯಾಸ ಹೀಗಿದೆ ನೋಡಿ!

ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಶುಕ್ರವಾರ ಮುಂಜಾನೆ 4 ಗಂಟೆಗೆ ಆರಂಭವಾಗಲಿದೆ. ಆಡುವ ಹನ್ನೊಂದರ ಬಳದಲ್ಲಿ ವೇಗಿಗಳಾಗಿ ಇಶಾಂತ್ ಶರ್ಮಾ, ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಕಣಕ್ಕಿಳಿಯುವ ಸಾಧ್ಯತೆ ಇದೆ. ರವೀಂದ್ರ ಜಡೇಜಾ ಆಲ್ರೌಂಡರ್ ಜವಾಬ್ದಾರಿ ಹೊತ್ತರೆ, ಆರಂಭಿಕರಾಗಿ ಮಯಾಂಕ್ ಅಗರ್ವಾಲ್ ಜೊತೆ ಪೃಥ್ವಿ ಶಾ ಇನ್ನಿಂಗ್ಸ್​ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ಟೆಸ್ಟ್​ ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​ ಚೇತೇಶ್ವರ್ ಪೂಜಾರ, ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ಅಜಿಂಕ್ಯಾ ರಹಾನೆ ಜೊತೆಗೆ ಹನುಮಾ ವಿಹಾರಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜವಾಬ್ದಾರಿ ವಹಿಸಲಿದ್ದಾರೆ.

First published: February 20, 2020, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading