Ind VS NZ 1st Test: ಮೊದಲ ಟೆಸ್ಟ್​ನಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್​ಗೆ ಜಯ; 1-0 ಮುನ್ನಡೆ ಸಾಧಿಸಿದ ಕಿವೀಸ್​

ಮೊದಲ ಟೆಸ್ಟ್​ನಲ್ಲಿ ಟಿಮ್​ ಟಿಮ್​ ಸೌಥಿ ಉತ್ತಮ ಪ್ರದರ್ಶನ ನೀಡಿದರು. ಎರಡು ಇನ್ನಿಂಗ್ಸ್​ನಲ್ಲಿ 110 ರನ್​ಗಳನ್ನು ನೀಡಿ ಬರೋಬ್ಬರಿ 9 ವಿಕೆಟ್​ ಕಿತ್ತರು. ಬೌಲ್ಟ್​ ಒಟ್ಟು ಐದು ವಿಕೆಟ್​ ಪಡೆದರು.

news18-kannada
Updated:February 24, 2020, 8:44 AM IST
Ind VS NZ 1st Test: ಮೊದಲ ಟೆಸ್ಟ್​ನಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್​ಗೆ ಜಯ; 1-0 ಮುನ್ನಡೆ ಸಾಧಿಸಿದ ಕಿವೀಸ್​
ನ್ಯೂಜಿಲೆಂಡ್​ ತಂಡ
  • Share this:
ವೆಲ್ಲಿಂಗ್ಟನ್ (ಫೆ. 22): ಇಲ್ಲಿನ ಬೇಸಿನ್ ರಿಸರ್ವ್​ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತಕ್ಕೆ ಸೋಲುಂಟಾಗಿದೆ. ಈ ಮೂಲಕ  ಕಿವೀಸ್​ 1-0 ಅಂತರಗಳ ಮುನ್ನಡೆ ಸಾಧಿಸಿದೆ. 

ಕೊಹ್ಲಿ ಪಡೆಯನ್ನು 165 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಆರಂಭಿಸಿದ್ದ ಕಿವೀಸ್ ಪಡೆ 348ರನ್​ಗೆ ಆಲ್​ ಔಟ್​ ಆಯಿತು. ಈ ಮೂಲಕ 183 ರನ್​ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಆರಂಭದಲ್ಲೇ ಎಡವಿತ್ತು. ಓಪನರ್​ ಪೃಥ್ವಿ ಶಾರನ್ನು ಕಳೆದುಕೊಂಡ ಟೀಂ ಇಂಡಿಯಾಗೆ ಚೇತೇಶ್ವರ ಪೂಜಾರ ಹಾಗೂ ಮಯಾಂಕ್​ ಅಗರ್​ವಾಲ್​ ಆಸರೆ ಆದರು.

ಈ ವೇಳೆ ಚೇತೇಶ್ವರ್​ ಪೂಜಾರ 81 ಬಾಲ್​ಗಳಲ್ಲಿ 11 ರನ್​ ಬಾರಿಸಿ ಬೋಲ್ಡ್​ ಆದರೆ, ಮಯಾಂಕ್​ ಅರ್ಧ ಶತಕ ಸಿಡಿಸಿ ಔಟ್​ ಆದರು. ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅದು, ಈ ಪಂದ್ಯದಲ್ಲೂ ಮುಂದುವರಿಯಿತು. ಸಂಕಷ್ಟದ ಸಮಯದಲ್ಲಿ ನಾಯಕನ ಆಟವಾಡಬೇಕಾಗಿದ್ದ ಕೊಹ್ಲಿ ಕೇವಲ 19ರನ್​ಗಳಿಗೆ ನಿರ್ಗಮಿಸಿದರು. ಅಜಿಂಕ್ಯ ರಹಾನೆ (29) ಹಾಗೂ ಹನುಮ ವಿಹಾರಿ (15) ಪಂದ್ಯ ಕಟ್ಟಲು ಮುಂದಾದರೂ ಪ್ರಯೋಜನವಾಗಿಲ್ಲ.

ರಿಶಭ್​ ಪಂತ್​ (25), ರವಿಚಂದ್ರ ಅಶ್ವಿನ್​ (4), ಇಶಾಂತ್​ ಶರ್ಮ (12), ಮೊಹಮದ್​ ಶಮಿ (2), ಜಸ್ಪ್ರೀತ್​ ಬೂಮ್ತರಾ (0) ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. 191ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡ ಭಾರತ 9 ರನ್​ಗಳ ಟಾರ್ಗೆಟ್​ ನೀಡಿತು. ಕೇವಲ 9 ಬಾಲ್​ಗಳಲ್ಲಿ ಒಂದು ವಿಕೆಟ್​ ಕಳೆದುಕೊಳ್ಳದೆ ನ್ಯೂಜಿಲೆಂಡ್​ ಈ ಟಾರ್ಗೆಟ್​ ತಲುಪಿದೆ.  ನ್ಯೂಜಿಲೆಂಡ್​ ಪರ ಸೌತಿ 5 ಹಾಗೂ ಬೌಲ್ಟ್​ 4 ವಿಕೆಟ್​ ಪಡೆದು ಮಿಂಚಿದರು.

ಇದನ್ನೂ ಓದಿ: ಮೂರನೇ ದಿನದಾಟದಂತ್ಯಕ್ಕೆ ಭಾರತ 144-4; ಆಸರೆಯಾದ ರಹಾನೆ-ವಿಹಾರಿ

ಮೊದಲ ಟೆಸ್ಟ್​ನಲ್ಲಿ ಟಿಮ್​ ಟಿಮ್​ ಸೌಥಿ ಉತ್ತಮ ಪ್ರದರ್ಶನ ನೀಡಿದರು. ಎರಡು ಇನ್ನಿಂಗ್ಸ್​ನಲ್ಲಿ 110 ರನ್​ಗಳನ್ನು ನೀಡಿ ಬರೋಬ್ಬರಿ 9 ವಿಕೆಟ್​ ಕಿತ್ತರು. ಬೌಲ್ಟ್​ ಒಟ್ಟು ಐದು ವಿಕೆಟ್​ ಪಡೆದರು.

 ನ್ಯೂಜಿಲೆಂಡ್ ಪ್ರವಾಸದಲ್ಲಂತೂ ಕೊಹ್ಲಿ ಸಂಪೂರ್ಣ ವೈಫಲ್ಯ ಅನುಭವಿಸುತ್ತಿದ್ದಾರೆ. ಟಿ-20, ಏಕದಿನದಲ್ಲಿ ವಿರಾಟ್​ ಎಡವಿದ್ದರು. ಈಗ ಲಟೆಸ್ಟ್​ನಲ್ಲೂ ಕೊಹ್ಲಿ ಕಳಪೆ ಆಟ ಮುಂದುವರೆದಿದೆ. 2019ರ ನವೆಂಬರ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊಹ್ಲಿ 136 ರನ್ ಗಳಿಸಿದ್ದು, ಇವರ ಬ್ಯಾಟ್​ನಿಂದ ಬಂದ ಕೊನೆಯ ಶತಕವಾಗಿದೆ.
First published: February 24, 2020, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading