IND vs NZ: (VIDEO) ರಹಾನೆ ಔಟ್ ಆಗಬಾರದೆಂದು ತಾನೇ ರನೌಟ್​ಗೆ ಬಲಿಯಾದ್ರಾ ಪಂತ್?

India vs New Zealand, 1st Test Match at Wellington: ರಹಾನೆ ಜೊತೆ ಎರಡನೇ ದಿನದಾಟ ಶುರುಮಾಡಿದ ಪಂತ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದರು. ಮೊದಲ ಓವರ್​ನಲ್ಲೇ ಚೆಂಡನ್ನು ಸಿಕ್ಸ್​ಗೆ ಅಟ್ಟಿದರು. ಆದರೆ...

news18-kannada
Updated:February 22, 2020, 10:51 AM IST
IND vs NZ: (VIDEO) ರಹಾನೆ ಔಟ್ ಆಗಬಾರದೆಂದು ತಾನೇ ರನೌಟ್​ಗೆ ಬಲಿಯಾದ್ರಾ ಪಂತ್?
ರಿಷಭ್ ಪಂತ್ ರನೌಟ್ ಆದ ಕ್ಷಣ.
  • Share this:
ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್​ನಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್​ನ ಮೊದಲ ದಿನವೇ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಎರಡನೇ ದಿನವೂ ಇದು ಮುಂದುವರೆದು ಕೇವಲ 165 ರನ್​ಗೆ ಆಲೌಟ್ ಆಯಿತು.

ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು. ಅಜಿಂಕ್ಯಾ ರಹಾನೆ ಹಾಗೂ ರಿಷಭ್ ಪಂತ್ ಕ್ರಿಸ್​ನಲ್ಲಿದ್ದ ಕಾರಣ ಭಾರತದ ಮೊತ್ತ ಕನಿಷ್ಠ 200ರ ಗಡಿ ದಾಟಬಹುದು ಎಂದು ನಂಬಲಾಗಿತ್ತು. ಆದರೆ, ಕೊಹ್ಲಿ ಪಡೆ 150ರ ರನ್​ ಗಳಿಸಿದ್ದೇ ಹೆಚ್ಚು ಎನ್ನಬಹುದು.

WATCH: Rishabh Pant left fuming after terrible mix-up with Ajinkya Rahane leads to run out
ರಿಷಭ್ ಪಂತ್.


IND vs NZ: ಜೇಮಿಸನ್- ಸೌಥೀ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಭಾರತ, 165 ರನ್​ಗೆ ಆಲೌಟ್

ಭಾರತ ಪರ ರಹಾನೆ ಜೊತೆ ಎರಡನೇ ದಿನದಾಟ ಶುರುಮಾಡಿದ ಪಂತ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದರು. ಮೊದಲ ಓವರ್​ನಲ್ಲೇ ಚೆಂಡನ್ನು ಸಿಕ್ಸ್​ಗೆ ಅಟ್ಟಿದರು. ಆದರೆ, ಮುಂದಿನ 2ನೇ ಓವರ್​ನಲ್ಲಿ ರನೌಟ್​ಗೆ ಬಲಿಯಾಗಿ ಪೆವಿಲಿಯನ್ ಸೇರಿಕೊಂಡರು.

59ನೇ ಓವರ್​ನ ಟಿಮ್ ಸೌಥೀ ಅವರ ಮೊದಲ ಎಸೆತದಲ್ಲಿ ರಹಾನೆ ಆಫ್​ ಸೈಡ್​​ಗೆ ಚೆಂಡನ್ನು ಅಟ್ಟಿ, ಸಿಂಗಲ್ ರನ್ ಕಲೆಹಾಕಲು ಮುಂದಾದರು. ಆದರೆ, ನಾನ್ ಸ್ಟ್ರೈಕರ್​​ನಲ್ಲಿದ್ದ ರಿಷಭ್ ಪಂತ್​ ಅವರು ರಹಾನೆ ರೀತಿಯಲ್ಲಿ ಕ್ವಿಕ್ ಸಿಂಗಲ್ ತೆಗೆಯಲು ಮನಸ್ಸು ಮಾಡಲಿಲ್ಲ. ಇತ್ತ ರಹಾನೆ ಅದಾಗಲೇ ನಾನ್ ಸ್ಟ್ರೈಕರ್​ ಹತ್ತಿರ ತಲುಪಿದ್ದರು.

ವಿಶ್ವ ನಂ. 1 ಬೌಲರ್​ಗೆ ವಿಶ್ವಕಪ್​ನಲ್ಲಿ ಮೈಚಳಿ ಬಿಡಿಸಿದ ಭಾರತದ 16 ವರ್ಷದ ಶಫಾಲಿ; 6 ಎಸೆತದಲ್ಲಿ ಸಿಡಿಸಿದ ರನ್ ಎಷ್ಟು?

ಪಂತ್​ಗೆ ಬೇರೆ ದಾರಿ ಇಲ್ಲದೆ ಓಡಿದರಾದರು ರನೌಟ್​ಗೆ ಬಲಿಯಾಗಬೇಕಾಯಿತು. ಟ್ವಿಟ್ಟರ್​​ನಲ್ಲಿ ಈ ರನೌಟ್​ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತವೆ. ಕೆಲವರು ಪಂತ್ ಅವರು ರನೌಟ್ ಆಗಲು ರಹಾನ ಅವರೇ ಕಾರಣ ಎಂದು ಟ್ವೀಟ್ ಮಾಡುತ್ತಿದ್ದಾರೆ.

ರಿಷಭ್ ಪಂತ್ 53 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಬಾರಿಸಿ 19 ರನ್ ಗಳಿಸಿದರು. ರಹಾನೆ 138 ಎಸೆತಗಳಲ್ಲಿ 46 ರನ್ ಬಾರಿಸಿದರು.

 





First published:February 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading