ಅಂಪೈರ್​ಗಳ ಕೆಟ್ಟ ನಿರ್ಧಾರದಿಂದ ಔಟ್ ಆದರು ಧೋನಿ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ಧೋನಿ ರನ್​ಔಟ್​ ಸಂದರ್ಭದಲ್ಲಿ ಅಂಪೈರ್​ಗಳು ತಪ್ಪೊಂದನ್ನು ಎಸಗಿದ್ದರು. ಈ ಬಗ್ಗೆ ಟ್ವಿಟ್ಟರ್​ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಾರಿ ಅಂಪೈರ್​ಗಳು ಅತಿ ಕೆಟ್ಟದಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಅನೇಕರು ಕಿಡಿಕಾರಿದ್ದಾರೆ.

ಧೋನಿ

ಧೋನಿ

  • News18
  • Last Updated :
  • Share this:
‘ಎಂಎಸ್​ ಧೋನಿ ಎರಡು ರನ್​ ಕದಿಯಲು ಹೋಗದೇ ಇದ್ದಿದ್ದರೆ, ಅಥವಾ  ಮಾರ್ಟಿನ್​ ಗುಪ್ಟಿಲ್​ ಡೈರೆಕ್ಟ್​ ಹಿಟ್​ ಮಾಡದೇ ಇದ್ದಿದ್ದರೆ ಭಾರತಕ್ಕೆ ಸೆಮಿ ಫೈನಲ್​ ಗೆಲ್ಲುವ ಅವಕಾಶ ಇರುತ್ತಿತ್ತೇನೋ’- ನ್ಯೂಜಿಲೆಂಡ್​ ವಿರುದ್ಧ​ ಭಾರತ ಸೋತಾಗ ಅದೆಷ್ಟು ಜನರು ಹೀಗೆ ಮರುಕಪಟ್ಟಿದ್ದಾರೋ. ಆದರೆ, ಧೋನಿ ಔಟ್​ ಆಗಲು ಅಂಪೈರ್​ಗಳ ಕೆಟ್ಟ ನಿರ್ಧಾರವೇ ಕಾರಣ ಎಂದು ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿದೆ.

ಹಾಗಾದರೆ ಅಂಪೈರ್​ಗಳು ಧೋನಿ ರನ್​ಔಟ್​ ಕೊಡುವಲ್ಲಿ ಎಲ್ಲಾದರೂ ಎಡವಿದ್ದಾರಾ? ಇಲ್ಲ. ಅಸಲಿ ವಿಚಾರವೇ ಬೇರೆಯೇ ಇದೆ. 48ನೇ ಓವರ್​ ನಡೆಯುತ್ತಿತ್ತು. ಮೂರನೇ ಪವರ್​ ಪ್ಲೇ ಇದ್ದ ಕಾರಣ ಕೇವಲ 5 ಆಟಗಾರರು ಮಾತ್ರ 30 ಯಾರ್ಡ್​​ ವೃತ್ತದಿಂದ ಹೊರಗಿರಬೇಕು. ಆದರೆ, ಧೋನಿ ರನ್​ಔಟ್​ ಆದ ಬಾಲ್​ ಎಸೆಯುವಾಗ 30 ಯಾರ್ಡ್​​ ವೃತ್ತದಿಂದ ಹೊರಗಿದ್ದಿದ್ದು 6 ಆಟಗಾರರು!

ಇದನ್ನು ಗಮನಿಸುವುದು ಅಂಪೈರ್​ಗಳ ಜವಾಬ್ದಾರಿ. ಆದರೆ, ಅಂಪೈರ್​ಗಳು ಇದನ್ನು ಲಕ್ಷಿಸಲೇ ಇಲ್ಲ! ಹಾಗಾಗಿ ನೋಬಾಲ್​ ಕೊಡಲೇ ಇಲ್ಲ. “ಒಂದೊಮ್ಮೆ ನೋಬಾಲ್​ ಎಂದು ಅಂಪೈರ್​ ಘೋಷಿಸಿದ್ದರೆ ಧೋನಿ ಎರಡು ರನ್​ ಕದಿಯುವ ಕೆಲಸಕ್ಕೆ ಹೋಗುತ್ತಲೇ ಇರುತ್ತಿರಲಿಲ್ಲ. ಈ ಮೂಲಕ ಧೋನಿ ವಿಕೆಟ್​ ಉಳಿಯುತ್ತಿತ್ತು. ಹಾಗಾಗಿ ಭಾರತ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇತ್ತು,” ಎಂಬುದು ಟ್ವಿಟ್ಟರ್​ ಮಂದಿಯ ಅಭಿಪ್ರಾಯ.ಈ ಬಗ್ಗೆ ಟ್ವಿಟ್ಟರ್​ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಾರಿ ಅಂಪೈರ್​ಗಳು ಅತಿ ಕೆಟ್ಟದಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಅನೇಕರು ಕಿಡಿಕಾರಿದ್ದಾರೆ.

First published: