HOME » NEWS » Sports » CRICKET INDIA VS NEW ZEALAND 4TH T20I MATCH MITCHELL SANTNER TAKES FLYING CATCH TO DISMISS VIRAT KOHLI AT WELLINGTON VB

New Zealand vs India: ಸ್ಯಾಂಟ್ನರ್ ಮಿಂಚಿನ ಜಿಗಿತಕ್ಕೆ ಕೊಹ್ಲಿ ಔಟ್; ಇಲ್ಲಿದೆ ರೋಚಕ ವಿಡಿಯೋ

Virat Kohli: ಭಾರತ ಪರ ಮನೀಶ್ ಪಾಂಡೆ ಅಜೇಯ 50 ಹಾಗೂ ಕೆ ಎಲ್ ರಾಹುಲ್ 39 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು.

news18-kannada
Updated:January 31, 2020, 3:09 PM IST
New Zealand vs India: ಸ್ಯಾಂಟ್ನರ್ ಮಿಂಚಿನ ಜಿಗಿತಕ್ಕೆ ಕೊಹ್ಲಿ ಔಟ್; ಇಲ್ಲಿದೆ ರೋಚಕ ವಿಡಿಯೋ
ವಿರಾಟ್ ಕೊಹ್ಲಿ ಔಟ್ ಆದ ಕ್ಷಣ.
  • Share this:
ವೆಲ್ಲಿಂಗ್ಟನ್​ನಲ್ಲಿ ಸಾಗುತ್ತಿರುವ ನ್ಯೂಜಿಲೆಂಡ್ ವಿರುದ್ಧದ 4ನೇ ಟಿ-20 ಪಂದ್ಯದಲ್ಲಿ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ. ಮನೀಶ್ ಪಾಂಡೆ ಅರ್ಧಶತಕದ ನೆರವಿನಿಂದ ಭಾರತ 20 ಓವರ್​ನಲ್ಲಿ 165 ರನ್ ಬಾರಿಸಿದೆ.

ಇಂದಿನ ಪಂದ್ಯಕ್ಕೆ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಾಗಿತು. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಲ್ಲಿ ಎಡವಿದ ಸಂಜು ಸ್ಯಾಮ್ಸನ್ 8 ರನ್​ಗೆ ಔಟ್ ಆದರು.

 



ಬಳಿಕ ನಾಯಕ ವಿರಾಟ್ ಕೊಹ್ಲಿ ಉತ್ತಮ ಇನ್ನಿಂಗ್ಸ್​ ಕಟ್ಟುವ ಜವಾಬ್ದಾರಿ ಹೊತ್ತರಾದರು ವಿಫಲವಾಯಿತು. ಕೊಹ್ಲಿ 9 ಎಸೆತಗಳಲ್ಲಿ ಕೇವಲ 11 ರನ್ ಕಲೆಹಾಕಿದ ಔಟ್ ಆದರು.

India vs New Zealand 4th T20I Live: 166 ಟಾರ್ಗೆಟ್; ಕಿವೀಸ್​ಗೆ ಆರಂಭದಲ್ಲೇ ಶಾಕ್ ನೀಡಿದ ಬುಮ್ರಾ!

ಕೊಹ್ಲಿ ಔಟ್ ಆದ ಕ್ಷಣ ಮಾತ್ರ ಯಾರೂ ಊಹಿಸಲಾಗದ ರೀತಿಯಲ್ಲಿತ್ತು. 5ನೇ ಓವರ್​ನ ಹೇಮಿಶ್ ಬೆನೆಟ್ ಅವರ 3ನೇ ಎಸೆತದಲ್ಲಿ ಕಿವೀಸ್ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಹಿಡಿದ ಮನಮೋಹಕ ಕ್ಯಾಚ್​ಗೆ ಕೊಹ್ಲಿ ಬಲಿಯಾಗಬೇಕಾಯಿತು.

 



INDW vs ENGW: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಭಾರತದ ವನಿತೆಯರು; ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ

ಈಗಾಗಲೇ ಐದು ಟಿ-20 ಸರಣಿಯಲ್ಲಿ 3-0 ಅಂತರದಿಂದ ಸರಣಿ ವಶಪಡಿಸಿಕೊಂಡಿರುವ ಭಾರತ ಇಂದಿನ ಪಂದ್ಯದಲ್ಲಿ 3 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಆದರೆ, ಭಾರತ ಪರ ಮನೀಶ್ ಪಾಂಡೆ ಅಜೇಯ 50 ಹಾಗೂ ಕೆ ಎಲ್ ರಾಹುಲ್ 39 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು.

ಭಾರತ 20 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 165 ರನ್ ಬಾರಿಸಿತು. ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದುಕೊಂಡಿದೆ.

First published: January 31, 2020, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories