HOME » NEWS » Sports » CRICKET INDIA VS NEW ZEALAND 2ND TEST MATCH AT CHRISTCHURCH DAY 2 NZ WIN BY SEVEN WICKETS VB

IND vs NZ: ಎರಡನೇ ಟೆಸ್ಟ್​ನಲ್ಲೂ ನ್ಯೂಜಿಲೆಂಡ್​ಗೆ ಭರ್ಜರಿ ಜಯ; ಭಾರತಕ್ಕೆ ಭಾರೀ ಮುಖಭಂಗ

India vs New Zealand, 2nd Test: ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್​ಗೆ ಓಪನರ್​​ಗಳಾದ ಟಾಮ್ ಲೇಥಮ್ ಹಾಗೂ ಟಾಮ್ ಬ್ಲಂಡೆಲ್ ಅವರೇ ಗೆಲುವನ್ನು ಖಚಿತ ಪಡಿಸಿದರು.

Vinay Bhat | news18-kannada
Updated:March 2, 2020, 8:17 AM IST
IND vs NZ: ಎರಡನೇ ಟೆಸ್ಟ್​ನಲ್ಲೂ ನ್ಯೂಜಿಲೆಂಡ್​ಗೆ ಭರ್ಜರಿ ಜಯ; ಭಾರತಕ್ಕೆ ಭಾರೀ ಮುಖಭಂಗ
21 ಪಂದ್ಯಗಳಿಂದ 2,406 ಪಾಯಿಂಟ್ ಕಲೆಹಾಕಿರುವ ನ್ಯೂಜಿಲೆಂಡ್ ತಂಡವು ಟೆಸ್ಟ್​ ರ್ಯಾಂಕಿಂಗ್​ ಪಟ್ಟಿಯಲ್ಲಿ ಎರಡನೇ ತಂಡವಾಗಿ ಹೊರಹೊಮ್ಮಿದೆ.
  • Share this:
ಕ್ರೈಸ್ಟ್​​ಚರ್ಚ್​ (ಮಾ. 02): ಇಲ್ಲಿನ ಹ್ಯಾಗ್ಲೀ ಓವಲ್ ಮೈದಾನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲೂ ಭಾರತ ತಂಡ ಹೀನಾಯ ಸೋಲುಕಂಡಿದೆ. 7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ನ್ಯೂಜಿಲೆಂಡ್ ಎರಡೂ ಟೆಸ್ಟ್​ ಅನ್ನೂ ಗೆದ್ದು ಸರಣಿ ಕ್ಲೀನ್​ಸ್ವೀಪ್ ಸಾಧನೆ ಮಾಡಿದೆ. ಕೊಹ್ಲಿ ಪಡೆ ವೈಟ್​ವಾಷ್​ ಮುಖಭಂಗ ಅನುಭವಿಸಿದೆ.

90 ರನ್​ಗೆ 6 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟ ಆರಂಭಿಸಿದ ಭಾರತದ ಪರಿಸ್ಥಿತಿ ಎರಡನೇ ದಿನಕ್ಕಿಂತ ಭಿನ್ನವಾಗಿರಲಿಲ್ಲ. ಕೇವಲ 34 ರನ್ ಪೇರಿಸುವುದರೊಳಗೆ ಉಳಿದಿರುವ ನಾಲ್ಕು ವಿಕೆಟುಗಳನ್ನು ಕಳೆದುಕೊಂಡಿತು.

 

ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 46 ಓವರ್‌ಗಳಲ್ಲಿ ಕೇವಲ 128 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಕಿವೀಸ್ ಗೆಲುವಿಗೆ 132 ರನ್‌ಗಳ ಗುರಿಯನ್ನು ಒಡ್ಡಿತು. ಹನುಮಾ ವಿಹಾರಿ(9) ಇಂದು ಮೊದಲನೇಯವರಾಗಿ ಪೆವಿಲಿಯನ್ ಸೇರಿಕೊಂಡರೆ, ಇದರ ಬೆನ್ನಲ್ಲೆ ರಿಷಭ್ ಪಂತ್ 4 ರನ್​ಗೆ ಔಟ್ ಆದರು, ರವೀಂದ್ರ ಜಡೇಜಾ ಅಜೇಯ 16 ರನ್ ಗಳಿಸಿದರು.

IND vs NZ: ಗಾಳಿಯಲ್ಲಿ ಹಾರಿ ಲೆಫ್ಟ್​​ಹ್ಯಾಂಡ್​ನಲ್ಲಿ ಸೂಪರ್ ಮ್ಯಾನ್​ನಂತೆ ಕ್ಯಾಚ್ ಹಿಡಿದ ಜಡೇಜಾ!; ಇಲ್ಲಿದೆ ವಿಡಿಯೋ

ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್​ಗೆ ಓಪನರ್​​ಗಳಾದ ಟಾಮ್ ಲೇಥಮ್ ಹಾಗೂ ಟಾಮ್ ಬ್ಲಂಡೆಲ್ ಅವರೇ ಗೆಲುವನ್ನು ಖಚಿತ ಪಡಿಸಿದರು. ಲೇಥಮ್ 74 ಎಸೆತಗಳಲ್ಲಿ 52 ರನ್ ಗಳಿಸಿ ಹಾಗೂ ನಾಯಕ ಕೇನ್ ವಿಲಿಯಮ್ಸನ್ 5 ರನ್​ಗೆ ಔಟ್ ಆದರಾದರೂ ಕಿವೀಸ್​ಗೆ ಯಾವುದೇ ಹಿನ್ನಡೆಯಾಗಲಿಲ್ಲ. ಅಂತಿಮ ಹಂತದಲ್ಲಿ ಬ್ಲಂಡೆಲ್ 113 ಎಸೆತಗಳಲ್ಲಿ 55 ರನ್ ಗಳಿಸಿ ನಿರ್ಗಮಿಸಿದರು

ಬಳಿಕ ಹೆನ್ರಿ ನಿಕೋಲ್ಸ್(5*) ಹಾಗೂ ರಾಸ್ ಟೇಲರ್(5*) ಜೊತೆಗೂಡಿ 36 ಓವರ್​ನಲ್ಲಿ ಗೆಲುವು ತಂದಿಟ್ಟರು. ಭಾರತ ಪರ ಜಸ್​ಪ್ರೀತ್ ಬುಮ್ರಾ 2 ಹಾಗೂ ಉಮೇಶ್ ಯಾದವ್ 1 ವಿಕೆಟ್ ಪಡೆದರು. ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-0 ಅಂತರದಿಂದ ಗೆದ್ದು ಬೀಗಿರುವ ನ್ಯೂಜಿಲೆಂಡ್ ಕ್ಲೀನ್​ಸ್ವೀಪ್ ಸಾಧನೆ ಮಾಡಿದೆ.

NZ vs IND: ಮೈದಾನದಲ್ಲೇ ನ್ಯೂಜಿಲೆಂಡ್ ಅಭಿಮಾನಿಗಳಿಗೆ ಎಫ್ ಶಬ್ದದಿಂದ ಬೈದ ಕೊಹ್ಲಿ..?

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನ್ನಿಂಗ್ಸ್​: 242-10 (63 ಓವರ್​​)

(ಹನುಮಾ ವಿಹಾರಿ 55, ಚೇತೇಶ್ವರ್ ಪೂಜಾರ 54, ಪೃಥ್ವಿ ಶಾ 54, ಕೈಲ್ ಜೆಮಿಸನ್ 45/5)

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್​: 232-10 (73.1 ಓವರ್)

(ಟಾಮ್ ಲೇಥಮ್ 52, ಕೈಲ್ ಜೆಮಿಸನ್ 49, ಮೊಹಮ್ಮದ್ ಶಮಿ 81/4, ಜಸ್​ಪ್ರೀತ್ ಬುಮ್ರಾ 62/3)

ಭಾರತ ಎರಡನೇ ಇನ್ನಿಂಗ್ಸ್​: 124/10 (46 ಓವರ್)

(ಚೇತೇಶ್ವರ್ ಪೂಜಾರ 24, ಟ್ರೆಂಟ್ ಬೌಲ್ಟ್​ 28/4, ಟಿಮ್ ಸೌಥೀ 36/3)

ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್​: 132-3 (36 ಓವರ್)

(ಟಾಮ್ ಬ್ಲಂಡೆಲ್ 55, ಟಾಮ್ ಲೇಥಮ್ 52, ಜಸ್​ಪ್ರೀತ್ ಬುಮ್ರಾ 39/2)

First published: March 2, 2020, 8:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories