HOME » NEWS » Sports » CRICKET INDIA VS NEW ZEALAND 2ND TEST MATCH AT CHRISTCHURCH DAY 2 INDIA LEAD BY 97 RUNS AT STUMPS VB

IND vs NZ: 2ನೇ ಇನ್ನಿಂಗ್ಸ್​ನಲ್ಲೂ ಭಾರತ ವೈಫಲ್ಯ; ಸಂಕಷ್ಟದಲ್ಲಿ ಕೊಹ್ಲಿ ಪಡೆ

ಸಂಕಷ್ಟದಲ್ಲಿದ್ದ ತಂಡಕ್ಕೆ ಈ ಬಾರಿಯೂ ನಾಯಕ ವಿರಾಟ್ ಕೊಹ್ಲಿ ಆಧಾರವಾಗಲಿಲ್ಲ. ಮಗದೊಮ್ಮೆ ವೈಫಲ್ಯ ಅನುಭವಿಸಿ ಕೊಹ್ಲಿ 14 ರನ್ ಗಳಿಸಿ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.

Vinay Bhat | news18-kannada
Updated:March 1, 2020, 11:40 AM IST
IND vs NZ: 2ನೇ ಇನ್ನಿಂಗ್ಸ್​ನಲ್ಲೂ ಭಾರತ ವೈಫಲ್ಯ; ಸಂಕಷ್ಟದಲ್ಲಿ ಕೊಹ್ಲಿ ಪಡೆ
ಎರಡೂ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಅತ್ಯಂತ ಕಳಪೆ ಮಟ್ಟದ್ದಾಗಿತ್ತು. ಅದರಲ್ಲು ನಾಯಕ ವಿರಾಟ್ ಕೊಹ್ಲಿ ಆಟ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.
  • Share this:
ಕ್ರೈಸ್ಟ್ಚರ್ಚ್​ (ಮಾ. 01): ಇಲ್ಲಿನ ಹ್ಯಾಗ್ಲೀ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲೂ ಭಾರತೀಯ ಬ್ಯಾಟ್ಸ್ಮನ್ಗಳು ಕಳಪೆ ಪ್ರದರ್ಶನ ತೋರಿದರು. ಪರಿಣಾಮ ಎರಡನೇ ದಿನದಾಟದ ಅಂತ್ಯಕ್ಕೆ ಕೊಹ್ಲಿ ಪಡೆ 6 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದ್ದು ಸಂಕಷ್ಟಕ್ಕೆ ಸಿಲುಕಿದೆ. 97 ರನ್​ಗಳ ಮುನ್ನಡೆ ಸಾಧಿಸಿದೆಯಷ್ಟೆ.

ನ್ಯೂಜಿಲೆಂಡ್ ತಮಡವನ್ನು 235 ರನ್​ಗೆ ಆಲೌಟ್ ಮಾಡಿ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಮಯಾಂಕ್ ಅಗರ್ವಾಲ್ 3 ರನ್​ಗೆ ಔಟ್ ಆದರೆ, ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿದ್ದ ಪೃಥ್ವಿ ಶಾ ಈ ಬಾರಿ 14 ರನ್​ಗೆ ಸುಸ್ತಾದರು.

 


ಸಂಕಷ್ಟದಲ್ಲಿದ್ದ ತಂಡಕ್ಕೆ ಈ ಬಾರಿಯೂ ನಾಯಕ ವಿರಾಟ್ ಕೊಹ್ಲಿ ಆಧಾರವಾಗಲಿಲ್ಲ. ಮಗದೊಮ್ಮೆ ವೈಫಲ್ಯ ಅನುಭವಿಸಿ ಕೊಹ್ಲಿ 14 ರನ್ ಗಳಿಸಿ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.

IND vs NZ: ಗಾಳಿಯಲ್ಲಿ ಹಾರಿ ಲೆಫ್ಟ್​​ಹ್ಯಾಂಡ್​ನಲ್ಲಿ ಸೂಪರ್ ಮ್ಯಾನ್​ನಂತೆ ಕ್ಯಾಚ್ ಹಿಡಿದ ಜಡೇಜಾ!; ಇಲ್ಲಿದೆ ವಿಡಿಯೋ

ಉಪ ನಾಯಕ ಅಜಿಂಕ್ಯಾ ರಹಾನೆ ಕೂಡ 9 ರನ್​ಗೆ ಬ್ಯಾಟ್ ಕೆಳಗಿಟ್ಟರು. ತಂಡಕ್ಕೆ ಆಸರೆಯಾಗುತ್ತಾರೆ ಎಂದೇ ನಂಬಲಾಗಿದ್ದ ಚೇತೇಶ್ವರ್ ಪೂಜಾರ ಕೂಡ ಕೈಕೊಟ್ಟರು. 88 ಎಸೆತಗಳಲ್ಲಿ 24 ರನ್​ಗಳಿಸಿ ಪೂಜಾರ ನಿರ್ಗಮಿಸಿದರು. ಉಮೇಶ್ ಯಾದವ್ 1 ರನ್ ಗಳಿಸಿ ಬೌಲ್ಡ್ ಆದರು.

ಅಂತಿಮವಾಗಿ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 36 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದೆ. ಹನುಮಾ ವಿಹಾರಿ 12 ಎಸೆತಗಳಲ್ಲಿ 5 ರನ್ ಹಾಗೂ ರಿಷಭ್ ಪಂತ್ 1 ರನ್ ಗಳಿಸಿ ನಾಳೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ನ್ಯೂಜಿಲೆಂಡ್ 235ಕ್ಕೆ ಆಲೌಟ್:

ಇದಕ್ಕೂ ಮೊದಲು ನಿನ್ನೆ ಮೊದಲ ದಿನ ಟೀಂ ಇಂಡಿಯಾವನ್ನು 242 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತ್ತು. ಹೀಗೆ ಓಪನರ್​ಗಳು ತಂಡಕ್ಕೆ ಆಧಾರವಾಗಿದ್ದರು.

Rranji Trophy Semi Final: ಏಕಾಂಗಿ ಹೋರಾಟ, ಅಜೇಯ ಶತಕ; ಕರ್ನಾಟಕಕ್ಕೆ ಕಂಟಕವಾದ ಮಜುಂದಾರ್

ಆದರೆ, ಎರಡನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್​ಗಳ ದಾಳಿಗೆ ನಲುಗಿ ಹೋಯಿತು. ಇಂದು 3 ರನ್ ಗಳಿಸುವಷ್ಟರಲ್ಲಿ ಕಿವೀಸ್ 30 ರನ್ ಗಳಿಸಿದ್ದ ಟಾಮ್ ಬ್ಲಂಡೆಲ್ ವಿಕೆಟ್ ಕಳೆದುಕೊಂಡಿತು. ನಾಯಕ ಕೇನ್ ವಿಲಿಯಮ್ಸನ್ 3 ರನ್ ಗಳಿಸಿ ಜಸ್​ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ನಿರ್ಗಮಿಸಿದರು.

 ಅನುಭವಿ ರಾಸ್ ಟೇಲರ್​(15) ಅವರನ್ನು ಜಡೇಜಾ ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರೆ, ಹೆನ್ರಿ ನಿಕೋಲ್ಸ್ ಆಟ 14 ರನ್​ಗೆ ಅಂತ್ಯವಾಯಿತು. ಈ ನಡುವೆ ಅರ್ಧಶತಕ ಸಿಡಿಸಿದ್ದ ಮತ್ತೊಬ್ಬ ಓಪನರ್ ಟಾಮ್ ಲೇಥಮ್(52) ಶಮಿ ಬೌಲಿಂಗ್​ನಲ್ಲಿ ಬೌಲ್ಡ್​ ಆದರು.

ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್ ಹಾಗೂ ಟಿಮ್ ಸೌಥೀ ಸೊನ್ನೆ ಸುತ್ತಿದರೆ, ಕಾಲಿನ್ ಗ್ರ್ಯಾಂಡ್​ಹೋಮ್ ಕೊಂಚಹೊತ್ತು ಬ್ಯಾಟ್ ಬೀಸಿ 26 ರನ್​ಗೆ ನಿರ್ಗಮಿಸಿದರು. ಹೀಗೆ ಮೊದಲ ದಿನ ಬೌಲಿಂಗ್- ಬ್ಯಾಟಿಂಗ್​ನಲ್ಲಿ ಪಾರುಪತ್ಯ ಮೆರೆದಿದ್ದ ನ್ಯೂಜಿಲೆಂಡ್ ತಂಡ ಎರಡನೇ ದಿನ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಹಾದಿ ಹಿಡಿದರು.

IND vs SA: ಮಾರ್ಚ್​ನಲ್ಲಿ ಆಫ್ರಿಕಾ ವಿರುದ್ಧ ಏಕದಿನ ಸರಣಿ; ನಿಟ್ಟುಸಿರು ಬಿಟ್ಟ ಭಾರತ, ಕಾರಣವೇನು?

ಆದರೆ, ಅಂತಿಮ ಹಂತದಲ್ಲಿ ಕೈಲ್ ಜೆಮಿಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 63 ಎಸೆತಗಳಲ್ಲಿ 7 ಬೌಂಡರಿ ಬಾರಿಸಿ 49 ರನ್ ಗಳಿಸಿ ತಂಡದ ಮೊತ್ತವನ್ನು ಏರಿಸಿದು. ನೈಲ್ ವಾಗ್ನೆರ್ 21 ರನ್ ಗಳಿಸಿದರು.

ಅಂತಿಮವಾಗಿ ನ್ಯೂಜಿಲೆಂಡ್ 73.1 ಓವರ್​ನಲ್ಲಿ 235 ರನ್​ಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ಜಸ್​ಪ್ರೀತ್ ಬುಮ್ರಾ 3, ರವೀಂದ್ರ ಜಡೇಜಾ 2  ಮತ್ತು ಉಮೇಶ್ ಯಾದವ್ 1 ವಿಕೆಟ್ ಪಡೆದರು.
First published: March 1, 2020, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories