HOME » NEWS » Sports » CRICKET INDIA VS NEW ZEALAND 2ND TEST FIRED UP VIRAT KOHLI TELLS SHUT THE F UP AFTER HENRY NICHOLLS DISMISSAL VB

IND vs NZ: (VIDEO) ಮೈದಾನದಲ್ಲೇ ನ್ಯೂಜಿಲೆಂಡ್ ಅಭಿಮಾನಿಗಳಿಗೆ ಎಫ್ ಶಬ್ದದಿಂದ ಬೈದ ಕೊಹ್ಲಿ..?

Virat Kohli: ನಿಕೋಲ್ಸ್ ಅವರ ಕ್ಯಾಚ್ ಅನ್ನು ಕೊಹ್ಲಿ ಸ್ಲಿಪ್​ನಲ್ಲಿ ಡೈ ಬಿದ್ದು ಹಿಡಿದರು. ಅಂಪೈರ್​ಗೆ ಈ ಕ್ಯಾಚ್ ಔಟ್ ಅಥವಾ ನಾಟೌಟ್ ಎಂಬ ಅನುಮಾನ ಇದ್ದ ಕಾರಣ ತಕ್ಷಣ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ...

Vinay Bhat | news18-kannada
Updated:March 2, 2020, 8:37 AM IST
IND vs NZ: (VIDEO) ಮೈದಾನದಲ್ಲೇ ನ್ಯೂಜಿಲೆಂಡ್ ಅಭಿಮಾನಿಗಳಿಗೆ ಎಫ್ ಶಬ್ದದಿಂದ ಬೈದ ಕೊಹ್ಲಿ..?
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ.
  • Share this:
ಹ್ಯಾಗ್ಲೀ ಓವಲ್ ಮೈದಾನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲೂ ಭಾರತ ತಂಡ ಹೀನಾಯ ಸೋಲುಕಂಡಿದೆ. 7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ನ್ಯೂಜಿಲೆಂಡ್ ಎರಡೂ ಟೆಸ್ಟ್​ ಅನ್ನೂ ಗೆದ್ದು ಸರಣಿ ಕ್ಲೀನ್​ಸ್ವೀಪ್ ಸಾಧನೆ ಮಾಡಿದೆ. ಕೊಹ್ಲಿ ಪಡೆ ವೈಟ್​ವಾಷ್​ ಮುಖಭಂಗ ಅನುಭವಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಭಾರತವನ್ನು 242 ರನ್​ಗೆ ಆಲೌಟ್ ಮಾಡಿ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದುಕೊಂಡಿತಾದರು ಬಳಿಕ ದಿಢೀರ್ ಕುಸಿತ ಕಂಡಿತು. ಟೀಂ ಇಂಡಿಯಾ ಬೌಲರ್​ಗಳ ಸಂಘಟಿತ ದಾಳಿಗೆ ಸಿಲುಕಿ 235 ರನ್​ಗೆ ಸರ್ವಪತನ ಕಂಡಿತು. ಭಾರತೀಯ ಬೌಲರ್​ಗಳ ಆರ್ಭಟ ನಾಯಕ ವಿರಾಟ್ ಕೊಹ್ಲಿಗಂತು ಎಲ್ಲಲ್ಲಿದ ಸಂತಸ ನೀಡಿತು.

Watch: Fired Up Virat Kohli Tells New Zealand Fans To ‘Shut The Fuck Up
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ.


IND vs NZ: 2ನೇ ಇನ್ನಿಂಗ್ಸ್​ನಲ್ಲೂ ಭಾರತ ವೈಫಲ್ಯ; ಸಂಕಷ್ಟದಲ್ಲಿ ಕೊಹ್ಲಿ ಪಡೆ

ನ್ಯೂಜಿಲೆಂಡ್​ನ ಪ್ರತಿ ವಿಕೆಟ್ ಕಿತ್ತಾಗ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದರು. ಅದರಲ್ಲೂ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ ಅವರು ಹೆನ್ರಿ ನಿಕೋಲ್ಸ್ ಅವರ ಅದ್ಭುತ ಕ್ಯಾಚ್ ಹಿಡಿದ ವೇಳೆ ಅವರು ತೋರಿದ ವರ್ತನೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

 ನಿಕೋಲ್ಸ್ ಅವರ ಕ್ಯಾಚ್ ಅನ್ನು ಕೊಹ್ಲಿ ಸ್ಲಿಪ್​ನಲ್ಲಿ ಡೈ ಬಿದ್ದು ಹಿಡಿದರು. ಅಂಪೈರ್​ಗೆ ಈ ಕ್ಯಾಚ್ ಔಟ್ ಅಥವಾ ನಾಟೌಟ್ ಎಂಬ ಅನುಮಾನ ಇದ್ದ ಕಾರಣ ತಕ್ಷಣ ನಿರ್ಧಾರ ತೆಗೆದುಕೊಂಡಿಲ್ಲ.

IND vs NZ: ಗಾಳಿಯಲ್ಲಿ ಹಾರಿ ಲೆಫ್ಟ್​​ಹ್ಯಾಂಡ್​ನಲ್ಲಿ ಸೂಪರ್ ಮ್ಯಾನ್​ನಂತೆ ಕ್ಯಾಚ್ ಹಿಡಿದ ಜಡೇಜಾ!; ಇಲ್ಲಿದೆ ವಿಡಿಯೋ

ಆದರೆ, ಇತ್ತ ಕೊಹ್ಲಿ ಖಚಿತವಾಗಿ ಔಟ್ ಎಂದು ಮೈದಾನದಲ್ಲೇ ಕೊಂಚ ಅತಿರೇಕವಾಗಿ ವರ್ತಿಸಿದರು. ಕ್ಯಾಚ್ ಹಿಡಿದ ತಕ್ಷಣ ಓಡಿ ಬಂದು ನ್ಯೂಜಿಲೆಂಡ್ ಅಭಿಮಾನಿಗಳತ್ತ ಮುಖಮಾಡಿ ಅವಾಚ್ಯ ಶಬ್ದಗಳಿಂದ (ಎಫ್ ಶಬ್ದ) ಬೈದಂತೆ ಕಂಡುಬಂದಿದೆ.

 ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ಹರಿದಾಡುತ್ತಿದೆ.

 

First published: March 1, 2020, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories