ಆಕ್ಲೆಂಡ್ (ಜ. 26): ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ನ್ಯೂಜಿಲೆಂಡ್ ತಂಡವನ್ನು 132 ರನ್ಗೆ ಕಟ್ಟಿ ಹಾಕುವಲ್ಲಿ ಕೊಹ್ಲಿ ಪಡೆ ಯಶಸ್ವಿಯಾಗಿದೆ.
ಆದರೆ, ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಭಾರತ ಪ್ರಮುಖ 2 ವಿಕೆಟ್ ಕಳೆದುಕೊಂಡಿದೆ.
ರೋಹಿತ್ ಶರ್ಮಾ(8) ಮೊದಲಿಗರಾಗಿ ಪೆವಿಲಿಯನ್ ಸೇರಿಕೊಂಡರೆ, ನಾಯಕ ವಿರಾಟ್ ಕೊಹ್ಲಿ 11 ರನ್ಗೆ ಸುಸ್ತಾದರು. ಸದ್ಯ ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಐಯರ್ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ.
ಇದಕ್ಕೂ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ಗೆ ಇಳಿದು ಭರ್ಜರಿ ಆರಂಭ ಪಡೆದುಕೊಂಡಿತು. ಮಾರ್ಟಿನ್ ಗಪ್ಟಿಲ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಅಷ್ಟೇ ಬೇಗ ನಿರ್ಗಮಿಸಿದರು. 20 ಎಸೆತಗಳಲ್ಲಿ 33 ರನ್ ಬಾರಿಸಿ ಔಟ್ ಆದರು.
ಬಳಿಕ ನಾಯಕ ಕೇನ್ ವಿಲಿಯಮ್ಸನ್ ಜೊತೆಯಾದ ಕಾಲಿನ್ ಮನ್ರೊ ಹೆಚ್ಚು ರನ್ ಕಲೆಹಾಕಲಿಲ್ಲ. ದುಬೆ ಬೌಲಿಂಗ್ನಲ್ಲಿ ಮನ್ರೊ(26) ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕಾಲಿನ್ ಡಿ'ಗ್ರ್ಯಾಂಡ್ಹೋಮ್(3) ಬಂದ ಬೆನ್ನಲ್ಲೆ ಪೆವಿಲಿಯನ್ ಸೇರಿಕೊಂಡರು. ವಿಲಿಯಮ್ಸನ್ ಆಟ 14 ರನ್ಗೆ ಅಂತ್ಯವಾಯಿತು.
ರಾಸ್ ಟೇಲರ್ ಹಾಗೂ ಟಿಮ್ ಸೀಫರ್ಟ್ ಕೊಂಚ ರನ್ ಕಲೆಹಾಕಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಟೇಲರ್ 23 ಎಸೆತಗಳಲ್ಲಿ 158 ರನ್ ಗಳಿಸಿದರೆ, ಸೀಫರ್ಟ್ 26 ಎಸೆತಗಳಲ್ಲಿ 33 ರನ್ ಬಾರಿಸಿದರು.
ನ್ಯೂಜಿಲೆಂಡ್ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಕಲೆಹಾಕಿತಷ್ಟೆ. ಭಾರತ ಪರ ರವೀಂದ್ರ ಜಡೇಜಾ 2 ವಿಕೆಟ್ ಕಿತ್ತರೆ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ ಹಾಗೂ ಶಿವಂ ದುಬೆ ತಲಾ 1 ವಿಕೆಟ್ ಪಡೆದರು.
ಇಂದಿನ ಪಂದ್ಯಕ್ಕೆ
ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಮೊದಲ ಟಿ-20ಯಲ್ಲಿ ಕಣಕ್ಕಿಳಿದ ಆಟಗಾರರೇ ಇಂದುಕೂಡ ಆಡುತ್ತಿದ್ದಾರೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆ. ಎಲ್. ರಾಹುಲ್ (ವಿಕೆಟ್- ಕೀಪರ್), ಶ್ರೇಯಸ್ ಐಯರ್, ಮನೀಷ್ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಯಜುವೇಂದ್ರ ಚಹಾಲ್.
ಇತ್ತ ನ್ಯೂಜಿಲೆಂಡ್ ತಂಡ ಕೂಡ ಯಾವುದೇ ಬದಲಾವಣೆ ಮಾಡಿಲ್ಲ.
ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಕಾಲಿನ್ ಡಿ'ಗ್ರ್ಯಾಂಡ್ಹೋಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥೀ, ಹೇಮಿಶ್ ಬೆನೆಟ್, ಬ್ಲೇರ್ ಟಿಕ್ನರ್.
England Cricket: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 5 ಲಕ್ಷ ರನ್ ಗಡಿ ಮುಟ್ಟಿ ಇಂಗ್ಲೆಂಡ್ ದಾಖಲೆ; ಭಾರತಕ್ಕೆ ಎಷ್ಟನೆ ಸ್ಥಾನ?
ಐದು ಪಂದ್ಯ ಟಿ-20 ಸರಣಿಯಲ್ಲಿ ಭಾರತ ಈಗಾಗಲೇ ಮೊದಲ ಪಂದ್ಯದಲ್ಲಿ ಗೆದ್ದು 1-0 ಅಂತರದ ಮುನ್ನಡೆ ಸಾಧಿಸಿದೆ. ಅತಿ ಚಿಕ್ಕದಾದ ಗ್ರೌಂಡ್ ಇದಾಗಿದ್ದು ಬೌಂಡರಿ- ಸಿಕ್ಸರ್ಗಳ ಮಳೆಯೆ ಇಲ್ಲಿ ಸುರಿಯುತ್ತದೆ. ಹೀಗಾಗಿ ಕೊಹ್ಲಿ ಪಡೆ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.
ಮೊದಲ ಪಂದ್ಯದಲ್ಲಿ ಬರೋಬ್ಬರಿ 30 ಬೌಂಡರಿ, 20 ಸಿಕ್ಸರ್ಗಳು ಸಿಡಿದಿದ್ದವು. ಇಂದು ಬ್ಯಾಟ್ಸ್ಮನ್ಗಳ ಅಬ್ಬರ ಯಾವರೀತಿ ಇರಲಿದೆ ಎಂಬುವುದು ಕುತೂಹಲ. ಈ ಮೈದಾನದಲ್ಲಿ ಚೇಸಿಂಗ್ ನಡೆಸುವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಇಲ್ಲವೇ ಮೊದಲು ಬ್ಯಾಟಿಂಗ್ ನಡೆಸುವ ತಂಡ 225ರ ತನಕವಾದರೂ ಸಾಗಬೇಕು.
ಭಾರತ ಹಾಗೂ ನ್ಯೂಜಿಲೆಂಡ್ ಈವರೆಗೆ ಒಟ್ಟು 13 ಟಿ-20 ಪಂದ್ಯಗಳನ್ನಾಡಿದೆ. ಇದರಲ್ಲಿ ಕಿವೀಸ್ 8 ಪಂದ್ಯ ಗೆದ್ದರೆ, ಭಾರತ 4 ಪಂದ್ಯಗಳಲ್ಲಿ ಜಯ ಸಾಧಿಸಿದೆಯಷ್ಟೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ