ಬೆಂಗಳೂರು (ಜ. 26): ನ್ಯೂಜಿಲೆಂಡ್ ಪ್ರವಾಸವನ್ನು ಭರ್ಜರಿ ಆಗಿ ಆರಂಭಿಸಿರುವ ಟೀಂ ಇಂಡಿಯಾ ಮೊದಲ ಟಿ-20 ಪಂದ್ಯದಲ್ಲಿ ಗೆದ್ದು ಬೀಗಿತ್ತು. ಸದ್ಯ ಎರಡನೇ ಕದನಕ್ಕೆ ಕೊಹ್ಲಿ ಪಡೆ ಸಜ್ಜಾಗಿದೆ. ಮೊದಲ ಟಿ-20 ನಡೆದ ಆಕ್ಲೆಂಡ್ನ ಈಡನ್ ಪಾರ್ಕ್ ಮೈದಾನದಲ್ಲೇ ಎರಡನೇ ಪಂದ್ಯವೂ ನಡೆಯುತ್ತಿದೆ.
ಅತಿ ಚಿಕ್ಕದಾದ ಗ್ರೌಂಡ್ ಇದಾಗಿದ್ದು ಬೌಂಡರಿ- ಸಿಕ್ಸರ್ಗಳ ಮಳೆಯೆ ಇಲ್ಲಿ ಸುರಿಯುತ್ತದೆ. ಹೀಗಾಗಿ
ಕೊಹ್ಲಿ ಪಡೆ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಬರೋಬ್ಬರಿ 30 ಬೌಂಡರಿ, 20 ಸಿಕ್ಸರ್ಗಳು ಸಿಡಿದಿದ್ದವು. ಇಂದು ಬ್ಯಾಟ್ಸ್ಮನ್ಗಳ ಅಬ್ಬರ ಯಾವರೀತಿ ಇರಲಿದೆ ಎಂಬುವುದು ಕುತೂಹಲ.
NZ vs IND: ಇಂದು ಎರಡನೇ ಟಿ-20 ಫೈಟ್; ಟೀಂ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ?
ಇನ್ನು ಈ ಮೈದಾನದಲ್ಲಿ ಚೇಸಿಂಗ್ ನಡೆಸುವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಇಲ್ಲವೇ ಮೊದಲು ಬ್ಯಾಟಿಂಗ್ ನಡೆಸುವ ತಂಡ 225ರ ತನಕವಾದರೂ ಸಾಗಬೇಕು. ಭಾರತ ಹಾಗೂ ನ್ಯೂಜಿಲೆಂಡ್ ಈವರೆಗೆ ಒಟ್ಟು 13 ಟಿ-20 ಪಂದ್ಯಗಳನ್ನಾಡಿದೆ. ಇದರಲ್ಲಿ ಕಿವೀಸ್ 8 ಪಂದ್ಯ ಗೆದ್ದರೆ, ಭಾರತ 4 ಪಂದ್ಯಗಳಲ್ಲಿ ಜಯ ಸಾಧಿಸಿದೆಯಷ್ಟೆ.
ಇನ್ನು ಪಂದ್ಯಕ್ಕೆ ವರುಣನ ಕಾಟ ಎಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟ ಪಡಿಸಿದೆ. ಭಾರತದ ಕಾಲಮಾನದ ಪ್ರಕಾರ 11:50ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಪಂದ್ಯ ಮಧ್ಯಾಹ್ನ 12:20ಕ್ಕೆ ಆರಂಭವಾಗಲಿದೆ.
ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆಯನ್ನು ನಿರೀಕ್ಷೆ ಮಾಡಲಾಗಿದೆ. ಮೊದಲ ಟಿ-20 ಯಲ್ಲಿ ಬೌಲರ್ಗಳ ಪ್ರದರ್ಶನ ಕಳಪೆಯಾಗಿತ್ತು. ಹೀಗಾಗಿ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟು ನವ್ದೀಪ್ ಸೈನಿ ಕಣಕ್ಕಿಳಿಯುವ ಅಂದಾಜಿದೆ.
England Cricket: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 5 ಲಕ್ಷ ರನ್ ಗಡಿ ಮುಟ್ಟಿ ಇಂಗ್ಲೆಂಡ್ ದಾಖಲೆ; ಭಾರತಕ್ಕೆ ಎಷ್ಟನೆ ಸ್ಥಾನ?
ಇತ್ತ ವಿಕೆಟ್ ಕೀಪಿಂಗ್ ಜಾಗವನ್ನು ಭದ್ರ ಪಡಿಸಿಕೊಳ್ಳುತ್ತಿರುವ ಕೆ ಎಲ್ ರಾಹುಲ್ ಎರಡನೇ ಟಿ-20 ಯಲ್ಲೂ ಕೀಪರ್ ಆಗಿ ಮುಂದುವರೆಯುತ್ತಾರಾ ಅಥವಾ ರಿಷಭ್ ಪಂತ್ಗೆ ಸ್ಥಾನ ಸಿಗುತ್ತಾ ಎಂಬುವುದು ಕಾದುನೋಡಬೇಕಿದೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆ. ಎಲ್. ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಐಯರ್, ಮನೀಷ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್.
ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಹೇಮಿಶ್ ಬೆನೆಟ್, ಟಾಮ್ ಬ್ರೂಸ್, ಕಾಲಿನ್ ಡಿ'ಗ್ರ್ಯಾಂಡ್ಹೋಮ್, ಮಾರ್ಟಿನ್ ಗಪ್ಟಿಲ್, ಸ್ಕಾಟ್ ಕುಗ್ಗೆಲೀಜ್ನ್, ಡ್ಯಾರಿಲ್ ಮಿಚೆಲ್, ಕಾಲಿನ್ ಮನ್ರೊ, ರಾಸ್ ಟೇಲರ್, ಬ್ಲೇರ್ ಟಿಕ್ನರ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್ (ವಿಕೆಟ್ಕೀಪರ್), ಇಶ್ ಸೋಧಿ, ಟಿಮ್ ಸೌಥೀ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ