IND vs NZ: ಭಾರತೀಯ ಬ್ಯಾಟ್ಸ್​ಮನ್​ಗಳ ಕಳಪೆ ಆಟ; ಪ್ರಮುಖ 5 ವಿಕೆಟ್ ಪತನ

India vs New Zealand 1st Test Match at Wellington: ಮೊದಲ ಟೆಸ್ಟ್​ಗೆ ಭಾರತ ತಂಡದಲ್ಲಿ ಪ್ರಮುಖವಾಗಿ ವಿಕೆಟ್ ಕೀಪರ್ ಸ್ಥಾನಕ್ಕೆ ವೃದ್ಧಿಮಾನ್ ಸಹಾ ಕೈಬಿಟ್ಟು ರಿಷಬ್ ಪಂತ್​ಗೆ ಅವಕಾಶ ನೀಡಲಾಗಿದೆ. ನವದೀಪ್ ಸೈನಿ ಹಾಗೂ ರವೀಂದ್ರ ಜಡೇಜಾ ಅವಕಾಶ ವಂಚಿತವಾಗಿದ್ದಾರೆ.

Vinay Bhat | news18-kannada
Updated:February 21, 2020, 8:18 AM IST
IND vs NZ: ಭಾರತೀಯ ಬ್ಯಾಟ್ಸ್​ಮನ್​ಗಳ ಕಳಪೆ ಆಟ; ಪ್ರಮುಖ 5 ವಿಕೆಟ್ ಪತನ
ಮಯಾಂಕ್ ಅಗರ್ವಾಲ್.
  • Share this:
ವೆಲ್ಲಿಂಗ್ಟನ್ (ಫೆ. 21): ಇಲ್ಲಿನ ಬೇಸಿನ್ ರಿಸರ್ವ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಊಟದ ವಿರಾಮ ವೇಳೆಗೆ 79 ರನ್​ಗೆ 3 ವಿಕೆಟ್ ಕಳೆದುಕೊಂಡಿತ್ತು. ನಂತರವೂ ಕೊಹ್ಲಿ ಪಡೆಯ ವಿಕೆಟ್ ಪತನ ಮುಂದುವರೆದಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಹೀಗೆ ಭಾರತೀಯ ಹೊಸ ಓಪನಿಂಗ್ ಜೋಡಿ ಮತ್ತೆ ವೈಫಲ್ಯ ಅನುಭವಿಸಿತು. ಅಭ್ಯಾಸ ಪಂದ್ಯದಲ್ಲಿ ಮಿಂಚಿದ್ದ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ 11 ರನ್​ಗೆ ಔಟ್ ಆದರೆ, ನಾಯಕ ವಿರಾಟ್ ಕೊಹ್ಲಿ ಆಟ ಕೇವಲ 2 ರನ್​ಗೆ ಅಂತ್ಯವಾಯಿತು.

ವರದಕ್ಷಿಣೆ ಕಿರುಕುಳ: ಭಾರತದ ಹಾಕಿ ಮಹಿಳಾ ತಂಡದ ಮಾಜಿ ನಾಯಕಿ ಮೇಲೆ ಗಂಡನಿಂದ ಮಾರಣಾಂತಿಕ ಹಲ್ಲೆ

 



ಇತ್ತ ಕೊಂಚ್ ರನ್ ಕಲೆಹಾಕಿದ್ದ ಮಯಾಂಕ್ ಅಗರ್ವಾಲ್ 84 ಎಸೆತಗಳಲ್ಲಿ 34 ರನ್ ಗಳಿಸಿ ಬೌಲ್ಟ್ ಬೌಲಿಂಗ್​ನಲ್ಲಿ ಔಟ್ ಆದರು. ತಂಡಕ್ಕೆ ಆಧಾರವಾಗಬೇಕಿದ್ದ ಹನುಮಾ ವಿಹಾರಿ ಕೂಡ 7 ರನ್​ಗೆ ಸುಸ್ತಾದರು. ಹೀಗೆ 100 ರನ್ ಆಗುವ ಹೊತ್ತಿಗೆ ಭಾರತ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.

ಸದ್ಯ ಉಪ ನಾಯಕ ಅಜಿಂಕ್ಯಾ ರಹಾನೆ ಕ್ರೀಸ್ ಕಚ್ಚಿ ನಿಂತಿದ್ದಾರೆ. ರಿಷಭ್ ಪಂತ್ ಇವರಿಗೆ ಸಾಥ್ ನೀಡಬೇಕಿದೆ.

IPL 2020: ಐಪಿಎಲ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬಿಸಿಸಿಐ; ಏನದು?

ಮೊದಲ ಟೆಸ್ಟ್​ಗೆ ಭಾರತ ತಂಡದಲ್ಲಿ ಪ್ರಮುಖವಾಗಿ ವಿಕೆಟ್ ಕೀಪರ್ ಸ್ಥಾನಕ್ಕೆ ವೃದ್ಧಿಮಾನ್ ಸಹಾ ಕೈಬಿಟ್ಟು ರಿಷಬ್ ಪಂತ್​ಗೆ ಅವಕಾಶ ನೀಡಲಾಗಿದೆ. ನವದೀಪ್ ಸೈನಿ ಹಾಗೂ ರವೀಂದ್ರ ಜಡೇಜಾ ಅವಕಾಶ ವಂಚಿತವಾಗಿದ್ದಾರೆ.

ಇನ್ನೂ ನ್ಯೂಜಿಲೆಂಡ್ ಪರ ರಾಸ್ ಟೇಲರ್ 100 ಟೆಸ್ಟ್‌ಗಳನ್ನು ಆಡಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಎಲ್ಲ ಪ್ರಕಾರದಲ್ಲೂ (ಟೆಸ್ಟ್, ಏಕದಿನ ಹಾಗೂ ಟಿ-20) 100 ಪಂದ್ಯಗಳನ್ನಾಡಿದ ಮೊದಲ ಆಟಗಾರನೆಂಬ ಕೀರ್ತಿಗೆ ಪಾತ್ರವಾದರು. ಹಾಗೆಯೇ ವೇಗಿ ಕೈಲ್ ಜೇಮಿಸನ್‌ಗೆ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

First published: February 21, 2020, 8:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading